ಸ್ಯಾಂಡಲ್‌ವುಡ್ ನಟ ದರ್ಶನ್ (Darshan) ಇದೀಗ ರೇಣುಕಾಸ್ವಾಮಿ ಕೊಲೆ ಕೇಸ್ ವಿಷ್ಯವಾಗಿ ಅರೆಸ್ಟ್ ಆಗಿದ್ದಾರೆ. ದರ್ಶನ್ & ಗ್ಯಾಂಗ್ ಸದ್ಯ ವಿಚಾರಣೆಯನ್ನು ಎದುರಿಸುತ್ತಿದ್ದಾರೆ. ಈ ಬೆನ್ನಲ್ಲೇ ದರ್ಶನ್ ಪ್ರಕರಣದ ಬಗ್ಗೆ ಉಮಾಪತಿ ರಿಯಾಕ್ಟ್ ಮಾಡಿದ್ದಾರೆ. ಕಾನೂನು ಚೌಕಟ್ಟಿನಲ್ಲಿ ಏನಾಗಬೇಕು ಆಗುತ್ತಿದೆ ಎಂದು ಮಾತನಾಡಿದ್ದಾರೆ.
ದರ್ಶನ್ ಪ್ರಕರಣದ ಬಗ್ಗೆ ಮಾಡಿದವರ ಪಾಪ ಆಡಿದವರ ಬಾಯಲ್ಲಿ ಅನ್ನೋ ಹಾಗೇ ಬೇಡ ಎಂದಿದ್ದಾರೆ. ತಪ್ಪು ಮಾಡಿದ್ರೆ ಕಾನೂನು ಅಡಿಯಲ್ಲಿ ಶಿಕ್ಷೆ ಸಿಗಲಿದೆ. ಈಗಾಗಲೇ ಕಾನೂನು ಚೌಕಟ್ಟಿನಲ್ಲಿ ಏನು ಆಗಬೇಕೋ ಅದು ನಡೆಯುತ್ತಿದೆ ಎಂದು ಮಾತನಾಡಿದ್ದಾರೆ. ಇದನ್ನೂ ಓದಿ:ಹನಿ ರೋಸ್ ನಟನೆ ‘ರೆಚೆಲ್’ ಚಿತ್ರದ ಟೀಸರ್ ರಿಲೀಸ್
- Advertisement
- Advertisement
ಪೊಲೀಸ್ ಇಲಾಖೆ ಕೂಡ ಒಳ್ಳೆಯ ರೀತಿಯಲ್ಲಿ ಹೆಜ್ಜೆ ಇಡುತ್ತಿದ್ದಾರೆ. ಸೆಲೆಬ್ರಿಟಿ ಅಂತಲ್ಲ, ತಪ್ಪು ಯಾರೇ ಮಾಡಿದ್ರೂ ತಪ್ಪೇ. ರೇಣುಕಾಸ್ವಾಮಿ ಪ್ರಕರಣದಲ್ಲಿ ಸಾಕಷ್ಟು ವಿಚಾರ ಕೇಳಿದೆ, ಸಾಕಷ್ಟು ಪ್ರಭಾವಿಗಳು ಕರೆ ಮಾಡಿ ದರ್ಶನ್‌ರನ್ನು ಬಿಡಿಸಲು ಪ್ರಯತ್ನಪಟ್ಟಿದ್ದಾರೆ ಅಂತ. ಈಗ ಇವರುಗಳ ಮನೆಯಲ್ಲೇ ಕೊಲೆ ಆದರೆ ಬಿಡಿಸುತ್ತಾರಾ? ಎಂದು ಉಮಾಪತಿ ಪ್ರಶ್ನೆ ಮಾಡಿದ್ದಾರೆ.
ಅಂದಹಾಗೆ, 2021ರಲ್ಲಿ ಬಿಡುಗಡೆಯಾದ ದರ್ಶನ್ ನಟನೆಯ ‘ರಾಬರ್ಟ್’ (Robert Film) ಸಿನಿಮಾವನ್ನು ಉಮಾಪತಿ ಶ್ರೀನಿವಾಸ್ ನಿರ್ಮಾಣ ಮಾಡಿದ್ದರು.