ಬೆಂಗಳೂರು: ಮಾಸ್ತಿಗುಡಿ ನಿರ್ಮಾಪಕ ಸುಂದರ್ ಗೌಡ ಹಾಗೂ ಮಾಯಕೊಂಡ ಕ್ಷೇತ್ರದ ಕಾಂಗ್ರೆಸ್ ಶಾಸಕ ಶಿವಮೂರ್ತಿ ನಾಯ್ಕ್ ಅವರ ಪುತ್ರಿ ಲಕ್ಷ್ಮೀ ನಾಯ್ಕ್ ಇಬ್ಬರು ಇದೇ ಮೊದಲ ಬಾರಿಗೆ ಮಾಧ್ಯಮದ ಮುಂದೆ ಬಂದು ರಹಸ್ಯ ಮದುವೆಯ ವಿಚಾರವನ್ನು ತಿಳಿಸಿದ್ದಾರೆ.
ತಮ್ಮ ಮದುವೆಗೆ ಬೆಂಬಲ ಸೂಚಿಸಿದ ಪ್ರತಿಯೊಬ್ಬರಿಗೂ ಧನ್ಯವಾದ ತಿಳಿಸಿದ ಅವರು, ಮೊದಲು ನಾವು ಒಳ್ಳೆ ಸ್ನೇಹಿತರಾಗಿದ್ವಿ. ನಂತರ ಫೋನ್ ಕರೆಗಳ ಮೂಲಕ ಹತ್ತಿರವಾಗಿ ಇಬ್ಬರ ನಡುವೆ ಪ್ರೀತಿ ಮೂಡಿತ್ತು. ಈಗ ನಾವು ಮದುವೆಯಾಗಿ ನಿಮ್ಮ ಮುಂದೆ ಇದ್ದೇವೆ. ಲಕ್ಷ್ಮೀ ಅವರ ಮನೆಯವರು ನಾನು ಬೇರೆ ಜಾತಿ ಇರಬಹುದು ಎಂದು ಅವರು ನಮ್ಮ ಪ್ರೀತಿಯನ್ನು ನಿರಾಕರಿಸಿದ್ದರು ಎಂದು ಅನಿಸುತ್ತಿದೆ. ಆದರೆ ನಾನು ಈ ಮೊದಲೇ ನಮ್ಮ ಪ್ರೀತಿ ಬಗ್ಗೆ ಅವರ ಹತ್ತಿರ ಹೇಳಿದೆ. ಆದರೆ ಅವರು ಒಪ್ಪಲಿಲ್ಲ. ಹಾಗಾಗಿ ನಾವು ಈ ರೀತಿ ಮದುವೆಯಾಗಬೇಕಾಯಿತು ಎಂದು ಸುಂದರ್ ಹೇಳಿದರು.
Advertisement
Advertisement
ನಮ್ಮ ಮದುವೆ ಮೊದಲೇ ಪ್ಲಾನ್ ಆಗಿತ್ತು. 15 ದಿನದ ಮುಂಚೆ ನಮ್ಮ ಮದುವೆ ಪ್ಲಾನ್ ಆಗಿತ್ತು. ಅವರ ಮನೆಯವರಿಗೂ ಮದುವೆಯ ಬಗ್ಗೆ ತಿಳಿಸಿದೆ. ನಂತರ ಈ ದಿನದಂದು ಮದುವೆ ಆಗೋಣವೆಂದು ನಾನು ಲಕ್ಷ್ಮೀಗೆ ತಿಳಿಸಿದೆ. ಅದೇ ರೀತಿ ನಮ್ಮ ಮದುವೆ ಕೂಡ ನಡೆಯಿತು. ಚಿಕ್ಕಮಗಳೂರಿಗೆ ಹೋಗುವಾಗ ದಾರಿ ಮಧ್ಯೆ ಸಿಗುವ ಗೌರಿ ಗದ್ದೆಯ ಪಾರ್ವತಿ ದೇಗುಲದಲ್ಲಿ ಮದುವೆಯಾದ್ವಿ. ನನ್ನ ಜೊತೆ ಲಕ್ಷ್ಮೀ ಹಾಗೂ ನನ್ನ ನಾಲ್ಕು ಜನ ಸ್ನೇಹಿತರಿದ್ದರು. ನನ್ನ ಮದುವೆಗೆ ನನ್ನ ಕುಟುಂಬದವರ ಯಾವುದೇ ಆಕ್ಷೇಪವಿರಲಿಲ್ಲ ಎಂದು ಸುಂದರ್ ವಿವರಿಸಿದರು.
Advertisement
ನಾವಿಬ್ಬರೂ ಒಬ್ಬರಿಗೊಬ್ಬರು ಇಷ್ಟಪಟ್ಟು ಮದುವೆಯಾಗಿದ್ದೇವೆ. ಇದರಿಂದ ಎಲ್ಲರಿಗೂ ನೋವಾಗಿದೆ ಎಂದು ನನಗೆ ಗೊತ್ತು. ಅದಕ್ಕಾಗಿ ನಾನು ಕ್ಷಮೆ ಕೇಳುತ್ತೇನೆ. ನಾವು ಯಾವುದೇ ಆಸೆ ಅಥವಾ ವ್ಯಾಮೋಹಕ್ಕೆ ಮದುವೆಯಾಗಲಿಲ್ಲ. ಒಬ್ಬರಿಗೊಬ್ಬರು ಇಷ್ಟಪಟ್ಟು ಮದುವೆಯಾಗಿದ್ದೇವೆ. ನಾವು ಮಾಡಿದ್ದು ತಪ್ಪು ಎಂದು ನಿಮಗೆ ಅನಿಸಿದ್ದರೆ ನಾನು ಕ್ಷಮೆ ಕೇಳುತ್ತೇನೆ. ಲಕ್ಷ್ಮೀ ತುಂಬಾ ಬಬ್ಲಿ ಹುಡುಗಿ, ತುಂಬಾ ಕೇರ್ ಮಾಡುತ್ತಾಳೆ ಹಾಗೂ ಎಲ್ಲರ ಜೊತೆ ಸೋಶಿಯಲ್ ಆಗಿ ಇರುತ್ತಾಳೆ. ಹೀಗಾಗೀ ಲಕ್ಷ್ಮೀ ನನಗೆ ಇಷ್ಟ ಎಂದು ಸುಂದರ್ ತಿಳಿಸಿದ್ದರು.
Advertisement
ಲಕ್ಷ್ಮಿ ಮಾತನಾಡಿ, ನಮ್ಮ ಕುಟುಂಬದವರು ಒಟ್ಟಿಗೆ ಇರಬೇಕು, ಎಲ್ಲರು ಜೊತೆಯಲ್ಲಿಯೇ ಕುಳಿತು ಊಟ ಮಾಡುವುದು ಎಂದರೆ ನನ್ನ ತಂದೆಗೆ ಇಷ್ಟವಾಗುತ್ತದೆ. ಅದೇ ಗುಣ ನನಗೆ ಸುಂದರ್ ಅವರ ಹತ್ತಿರ ಕಾಣಿಸಿತ್ತು. ಪ್ರತಿ ಮಗಳಿಗೆ ತನ್ನ ತಂದೆಯೇ ಮೊದಲ ಹೀರೋ ಆಗಿರುತ್ತಾರೆ. ಹಾಗೆಯೇ ನನಗೆ ನನ್ನ ತಂದೆಯೇ ಹೀರೋ. ಸುಂದರ್ ಅವರು ನನ್ನ ತಂದೆಯ ಗುಣ ಹೊಂದಿದರಿಂದ ಅದು ನನಗೆ ಇಷ್ಟವಾಯಿತು ಎಂದು ಹೇಳಿದರು.
ಲಕ್ಷ್ಮೀ ಅವರಿಗೆ ಡಾಕ್ಟರ್ ಆಗಬೇಕೆಂದು ತುಂಬಾ ಆಸೆಯಿದೆ. ಸದ್ಯ ಈಗ ಅವರು 3ನೇ ವರ್ಷದ ಎಂಬಿಬಿಎಸ್ ಓದುತ್ತಿದ್ದಾರೆ. ಇದಾದ ಬಳಿಕ ಐಎಎಸ್ ಅಥವಾ ಐಪಿಎಸ್ ಮಾಡಬೇಕೆಂಬ ಆಸೆ ಅವರಿಗಿದೆ. ಅವರ ಆಸೆಯನ್ನು ನಾನು ಪೂರ್ಣ ಮಾಡಬೇಕು. ಲವ್ ಮಾಡಿ ಮದುವೆಯಾಗೋದು ದೊಡ್ಡ ವಿಷಯ ಅಲ್ಲ. ಮದುವೆಯಾದ ಮೇಲೆ ಬದುಕಿ ತೋರಿಸುವುದು ಮುಖ್ಯ. ನಾನು ಹಾಗೆಯೇ ಮಾಡಿ ತೋರಿಸುತ್ತೇನೆ. ಎಲ್ಲರೂ ಮಾತಿನಲ್ಲಿ ಹೇಳುತ್ತಾರೆ. ಆದರೆ ನಾನು ಅದನ್ನು ಮಾಡಿ ತೋರಿಸುತ್ತೇನೆ ಎಂದು ಸುಂದರ್ ಹೇಳಿದರು.
ಸದ್ಯ ಈಗ ನನ್ನ ಕುಟುಂಬದವರಿಗೆ ನಮ್ಮ ಮೇಲೆ ಕೋಪ ಇದೆ. ಹಾಗಂತ ನಾನು ಅವರನ್ನು ಹಾಗೆಯೇ ಬಿಡುವುದಿಲ್ಲ. ನಮ್ಮ ಇಬ್ಬರು ಕುಟುಂಬ ಒಂದಾಗಬೇಕು. ನಾನು ನಮ್ಮ ಇಬ್ಬರ ಪರವಾಗಿ ಕ್ಷಮೆ ಕೋರುತ್ತೇನೆ ಎಂದು ಲಕ್ಷ್ಮೀ ಹೇಳಿದ್ದಾರೆ.