ಬೆಂಗಳೂರು: ಮಾಸ್ತಿಗುಡಿ ನಿರ್ಮಾಪಕ ಸುಂದರ್ ಗೌಡ ಜೊತೆ ಶಾಸಕರ ಪುತ್ರಿ ಲಕ್ಷ್ಮೀ ನಾಯ್ಕ್ ಪ್ರೇಮ ವಿವಾಹ ಪ್ರಕರಣದ ಹಿನ್ನಲೆಯಲ್ಲಿ ಇಂದು ಯಲಹಂಕ ನ್ಯೂಟೌನ್ ಠಾಣೆಗೆ ನವದಂಪತಿ ಆಗಮಿಸಿದ್ದಾರೆ.
ಯಲಹಂಕ ನ್ಯೂಟೌನ್ ಠಾಣೆಯಲ್ಲಿ ಲಕ್ಷ್ಮೀ ನಾಯ್ಕ್ ಕಿಡ್ನ್ಯಾಪ್ ಪ್ರಕರಣ ದಾಖಲಾಗಿತ್ತು. ಮಾಸ್ತಿಗುಡಿ ನಿರ್ಮಾಪಕ ಸುಂದರ್ ಗೌಡ ವಿರುದ್ಧ ಲಕ್ಷ್ಮಿ ಪೋಷಕರು ಕಿಡ್ನ್ಯಾಪ್ ಪ್ರಕರಣ ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ದಂಪತಿಯನ್ನು ನಟ ದುನಿಯಾ ವಿಜಯ್ ಠಾಣೆಗೆ ಕರೆತಂದರು.
ಗುರುವಾರ ಮೈಸೂರಿನಲ್ಲಿ ಸುಂದರ್ ಹಾಗೂ ಲಕ್ಷ್ಮೀ ಮದುವೆಯಾಗಿದ್ದು, ಬಳಿಕ ಇಂದು ಮುಂಜಾನೆ ನೇರವಾಗಿ ಬೆಂಗಳೂರಿನ ಕತ್ರಿಗುಪ್ಪೆಯಲ್ಲಿರುವ ದುನಿಯಾ ವಿಜಿ ನಿವಾಸಕ್ಕೆ ಆಗಮಿಸಿದ್ದರು. ಲಕ್ಷ್ಮಿ ನಾಯ್ಕ್ ನಾಪತ್ತೆಯಾಗಿದ್ದ ಬಗ್ಗೆ ಲಕ್ಷ್ಮೀ ಷೋಷಕರು ದೂರು ನೀಡಿದ್ದ ಹಿನ್ನೆಲೆಯಲ್ಲಿ ಇಂದು ಠಾಣೆಗೆ ಬಂದ ನವದಂಪತಿ ಸ್ವ ಇಚ್ಛೆಯಿಂದ ಮದುವೆ ಆಗಿರುವುದಾಗಿ ಹೇಳಿಕೆ ನೀಡಿದ್ದಾರೆ.
ಲಕ್ಷ್ಮೀ ಯನ್ನ ನಮ್ಮ ಸೊಸೆಯಾಗಿ ಮಾಡಿಕೊಂಡಿದ್ದೇವೆ ಎಂದು ಸುಂದರ್ ಗೌಡ ತಂದೆ, ತಾಯಿ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.