ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ದರ್ಶನ್‌ಗೆ (Darshan) 6 ವಾರಗಳ ಕಾಲ ಮಧ್ಯಂತರ ಜಾಮೀನು ಸಿಕ್ಕ ಹಿನ್ನೆಲೆ ಅ.30ರಂದು ಬಳ್ಳಾರಿ ಜೈಲಿನಿಂದ ರಿಲೀಸ್ ಆಗಿದ್ದಾರೆ. ಹಾಗಾಗಿ ‘ಯಜಮಾನ’ ಚಿತ್ರದ ನಿರ್ಮಾಪಕಿ ಶೈಲಜಾ ನಾಗ್ (Shylaja Nag), ನಿರ್ದೇಶಕ ವಿ. ಹರಿಕೃಷ್ಣ (V.Harikrishna) ವಿಜಯಲಕ್ಷ್ಮಿ ನಿವಾಸದಲ್ಲಿ ದರ್ಶನ್‌ರನ್ನು ಭೇಟಿಯಾಗಿದ್ದಾರೆ. ಇದನ್ನೂ ಓದಿ:ಮಗನನ್ನು ನೋಡಲು ವಿಜಯಲಕ್ಷ್ಮಿ ಮನೆಗೆ ಆಗಮಿಸಿದ ಮೀನಾ ತೂಗುದೀಪ
5 ತಿಂಗಳುಗಳ ದರ್ಶನ್ ಜೈಲು ವಾಸಕ್ಕೆ ತಾತ್ಕಾಲಿಕ ರಿಲೀಫ್ ಸಿಕ್ಕ ಹಿನ್ನೆಲೆ, ನಟನ ಯೋಗಕ್ಷೇಮ ವಿಚಾರಿಸಲು ನಿರ್ಮಾಪಕಿ ಶೈಲಜಾ ನಾಗ್, ಸಂಗೀತ ನಿರ್ದೇಶಕ ವಿ. ಹರಿಕೃಷ್ಣ ಹೊಸಕೆರೆಹಳ್ಳಿಯ ಅಪಾರ್ಟ್‌ಮೆಂಟ್‌ಗೆ ಆಗಮಿಸಿದ್ದಾರೆ. ನಟನ ಆರೋಗ್ಯದ ಕುರಿತು ವಿಚಾರಿಸಿ ಕೆಲ ಕಾಲ ಸಮಯ ಕಳೆದಿದ್ದಾರೆ.
ಇನ್ನೂ ಇಂದು ಮಧ್ಯಾಹ್ನ (ಅ.31) ಮಗನನ್ನು ನೋಡಲು ಮೀನಾ ತೂಗುದೀಪ (Meena Thoogudeepa) ಕೂಡ ಮನೆ ಭೇಟಿ ನೀಡಿದ್ದಾರೆ. ದೀಪಾವಳಿ ಹಬ್ಬದ ಸಡಗರದ ಜೊತೆಗೆ ವಿನೀಶ್ ಹುಟ್ಟುಹಬ್ಬ, ದರ್ಶನ್ ಬಿಡುಗಡೆ ಹಿನ್ನೆಲೆಯಿಂದ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ.