ಸೋಶಿಯಲ್ ಮೀಡಿಯಾದಲ್ಲಿ ಅತೀ ಹೆಚ್ಚು ಟ್ರೋಲ್ ಆಗಿರುವ ತಮಿಳಿನ ಖ್ಯಾತ ನಿರ್ಮಾಪಕ ರವೀಂದ್ರ (Ravindar Chandrasekaran), ಮಹಾಲಕ್ಷ್ಮಿ (Mahalakshmi) ಜೋಡಿ ಇತ್ತೀಚೆಗೆ ಮೊದಲ ಮದುವೆ ವಾರ್ಷಿಕೋತ್ಸವ ಪೂರೈಸಿದ್ದರು. ಈ ಬೆನ್ನಲ್ಲೇ ವಂಚನೆ ಪ್ರಕರಣವೊಂದರಲ್ಲಿ ರವೀಂದ್ರ ಜೈಲು ಪಾಲಾದ್ರು. ಗಂಡ ಜೈಲು ಸೇರಿದ್ರೆ, ಹೆಂಡತಿ ಮಹಾಲಕ್ಷ್ಮಿ ಮಸ್ತ್ ಆಗಿ ಫೋಟೋಶೂಟ್ ಮಾಡಿಸಿದ್ದಾರೆ. ನಟಿಯ ನಡೆಗೆ ನೆಟ್ಟಿಗರು ಕಾಲೆಳೆದಿದ್ದಾರೆ.
ಲೈಟ್ ಬಣ್ಣ ಸೀರೆಯಲ್ಲಿ ಮತ್ತೊಂದು ಹಳದಿ ಬಣ್ಣದ ಸೀರೆಯಲ್ಲಿ ಮಸ್ತ್ ಆಗಿ ಫೋಟೋಶೂಟ್ ಮಾಡಿಸಿ ಮಿಂಚಿದ್ದಾರೆ. ಬಗೆ ಬಗೆಯ ಭಂಗಿಯಲ್ಲಿ ನಟಿ ಕ್ಯಾಮೆರಾ ಕಣ್ಣಿಗೆ ಪೋಸ್ ನೀಡಿದ್ದಾರೆ. ಗಂಡ ಜೈಲಿನಲ್ಲಿದ್ರೆ ನೀವು ಫೋಟೋ ತೆಗೆಸಿ ಮೋಜು ಮಾಡ್ತೀರಾ ಅಂತಾ ಬಗೆ ಬಗೆಯ ಕಾಮೆಂಟ್ಸ್ ಸೋಶಿಯಲ್ ಮೀಡಿಯಾದಲ್ಲಿ ಹರಿದು ಬರುತ್ತಿದೆ. ಇದನ್ನೂ ಓದಿ:ಕಣ್ಮುಂದೆಯೇ ರಶ್ಮಿಕಾ ಇದ್ದರೂ ಮುಖ ತಿರುಗಿಸಿಕೊಂಡು ಹೋದ ಶ್ರದ್ಧಾ ಕಪೂರ್
ರವೀಂದ್ರ ಚಂದ್ರಶೇಖರ್ ಅವರನ್ನು ವಂಚನೆ ಆರೋಪದ ಮೇಲೆ ತಮಿಳುನಾಡು ಪೊಲೀಸರು ಸೆ.8ರಂದು ಬಂಧಿಸಿದ್ದರು. 16 ಕೋಟಿ ರೂ. ವಂಚಿಸಿದ ಆರೋಪದಲ್ಲಿ ನಿರ್ಮಾಪಕ ರವೀಂದ್ರ ಅವರನ್ನು ಅರೆಸ್ಟ್ ಮಾಡಿದ್ದರು.

ಉದ್ಯಮಿ ಬಾಲಾಜಿ ಅವರ ದೂರಿನ ಮೇರೆಗೆ ನಿರ್ಮಾಪಕ ರವೀಂದ್ರ ವಿರುದ್ಧ ಪ್ರಕರಣ ದಾಖಲಾಗಿದ್ದು, ಈ ಬಗ್ಗೆ ತನಿಖೆ ನಡೆಯುತ್ತಿದೆ.
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]



