ಬೆಂಗಳೂರು: ಅಪ್ಪು ಇಷ್ಟೆಲ್ಲ ಸಮಾಜಕ್ಕೆ ದಾನ ಮಾಡಿದ್ದಾನೆ ಎಂದು ನಾನು ತಿಳಿದುಕೊಂಡಿರಲಿಲ್ಲ ಎಂದು ಪುನೀತ್ ಮಾವ ನಿರ್ಮಾಪಕ ಗೋವಿಂದರಾಜು ಪಬ್ಲಿಕ್ ಟಿವಿ ಜೊತೆ ಮಾತನಾಡಿ ಕಣ್ಣೀರು ಹಾಕಿದರು.
ಅಪ್ಪು ಅಗಲಿಕೆಯಿಂದ ಇಡೀ ಕುಟುಂಬವೇ ಕಣ್ಣೀರು ಹಾಕುತ್ತಿದ್ದು, ಗೋವಿಂದರಾಜು ಅವರು ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ್ದು, ಗೋವಿಂದ್ ಮಾಮ.. ಗೋವಿಂದ್ ಮಾಮ… ಎಂದು ಮುದ್ದು ಮುದ್ದಾಗಿ ಕರೆಯುತ್ತಿದ್ದ ನಮ್ಮ ಅಪ್ಪುಗೆ ಈ ರೀತಿಯಾಗಿದೆ ಎಂದು ನಂಬುಲು ಆಗುತ್ತಿಲ್ಲ. ಅಪ್ಪು ಫ್ಯಾಮಿಲಿ ಜೊತೆ ನಾನು ಸದಾ ಇರುತ್ತೇನೆ ಎಂದು ಭಾವುಕರಾದರು. ಇದನ್ನೂ ಓದಿ: ಅಪ್ಪು ಮರಕೋತಿ ಆಟವಾಡುತ್ತಿದ್ದನ್ನು ಸದಾ ನೆನಪಿಸಿಕೊಳ್ಳುವ ಬಾಲ್ಯದ ಗೆಳೆಯ
Advertisement
ನಮ್ಮ ಮದುವೆಯಲ್ಲಿ ಪುನೀತ್ ಇನ್ನು ಪುಟಾಣಿ ಕಂದ. ಲಾಸ್ಟ್ ಟೈಮ್ ಅಪ್ಪು ನೋಡಿದಾಗ ಅಪ್ಪಾಜಿ ನೋಡಿದಂತೆ ಆಯ್ತು. ಮದುವೆಗೆ ಬಂದ ಅಪ್ಪು ವೈಟ್ ಪಂಚೆ, ವೈಟ್ ಶರ್ಟ್ ಹಾಕಿದ್ದ. ಆಗ ಏನ್ ಅಪ್ಪು ಅಪ್ಪಾಜಿ ಥರ ಕಾಣ್ತಾ ಇದ್ದಿಯಾ ಮನೆಗೆ ಹೋಗಿ ದೃಷ್ಟಿ ತೆಗೆಸಿಕೊ ಎಂದಿದ್ದೆ. ಅದಕ್ಕೆ ಅಪ್ಪು, ಮಾಮ ಇದು ಜಾಹೀರಾತು ಮಾಡಿದೆ ಆಗ ತಗೆದುಕೊಂಡೆ ಎಂದು ಹೇಳಿದ್ದು, ಈಗಲೂ ಕಿವಿಯಲ್ಲಿ ಕೇಳ್ತಾ ಇದೆ ಎಂದು ನೆನೆದರು.
Advertisement
Advertisement
ಅಪ್ಪು ಸಮಾಜಕ್ಕೆ ಇಷ್ಟೆಲ್ಲ ಮಾಡಿದ ಅಂತ ಎನಿಸಿರಲಿಲ್ಲ. ಯಾರಿಗೂ ಹೇಳಿಬೇಡಿ ಎಂದು ಹೇಳಿ ಸಹಾಯ ಮಾಡ್ತಾ ಇದ್ದ ನಮ್ಮ ಅಪ್ಪು ಎಂದು ಹೆಮ್ಮೆಯಿಂದ ಹೇಳಿದರು. ಏನನ್ನು ಮಾಡಬೇಕಾದರೂ ನಮ್ಮನ್ನು ಕೇಳಿಯೇ ಮಾಡುತ್ತಾ ಇದ್ದ. ನಮಗೆ ಹೇಳಿದೆ ಜನರಿಗೆ ಸಹಾಯ ಮಾತ್ರ ಮಾಡಿರುವುದು. ಕಡೆಯ ಬಾರಿ ಅಪ್ಪು ಕಂಡಾಗ ದೃಷ್ಟಿ ಆಗುವಷ್ಟು ಚೆಂದವಾಗಿ ಕಂಡ ಪುಟಾಣಿ. ಈಗ ನಮ್ಮ ಪವರ್ ಇಲ್ಲ ಎಂದು ನಂಬಲು ಆಗಲ್ಲ. ಪುನೀತ್ ಕುಟುಂಬದ ಜತೆ ನಾವಿದ್ದೀವಿ. ಅವರಿಗೆ ಏನ್ ಬೇಕಾದ್ರೂ ನಾವು ಮಾಡ್ತಿವಿ. ಹೆಂಡ್ತಿ ಅಶ್ವಿನಿ, ಇಬ್ಬರು ಮಕ್ಕಳು ಜವಾಬ್ದಾರಿ ನೋಡ್ತಿವಿ. ಪದೇ ಪದೇ ಮನೆಗೆ ಹೋಗಿ ಬರ್ತಿವಿ ಎಂದರು. ಇದನ್ನೂ ಓದಿ: ಸಣ್ಣ ವಯಸ್ಸಿನ ದೊಡ್ಡ ಕಲಾವಿದನನ್ನು ಕಳೆದುಕೊಂಡಿದ್ದೇವೆ: ರಮೇಶ್ ಜಾರಕಿಹೊಳಿ