ನಿರ್ಮಾಪಕಿಯಾದ ದುನಿಯಾ ವಿಜಯ್ 2ನೇ ಪತ್ನಿ ಕೀರ್ತಿ

Public TV
1 Min Read
Keerthi Gowda 3

ದುನಿಯಾ ವಿಜಯ್ (Duniya Vijay)  ನಟನೆಯಿಂದ ನಿರ್ದೇಶಕರ ಭಡ್ತಿ ಪಡೆದಿದ್ದರೆ, ಇದೀಗ ಅವರ 2ನೇ ಪತ್ನಿ ಕೀರ್ತಿ ಗೌಡ (Keerthi Gowda) ನಿರ್ಮಾಪಕಿಯಾಗುತ್ತಿದ್ದಾರೆ. ಅರ್ಜುನ್ ಎಂಟರ್ ಟೇನ್ಮೆಂಟ್ ಹೆಸರಿನಲ್ಲಿ ನಿರ್ಮಾಣ ಸಂಸ್ಥೆಯೊಂದನ್ನು ಶುರು ಮಾಡಿದ್ದಾರೆ. ಈ ಸಂಸ್ಥೆಯ ಮೂಲಕ ಮೊದಲ ಬಾರಿಗೆ ಕಿರುಚಿತ್ರವೊಂದನ್ನು ನಿರ್ಮಾಣ ಮಾಡಿದ್ದಾರೆ.

Keerthi Gowda 2

ಕೀರ್ತಿ ಗೌಡ ಅವರಿಗೆ ಸಿನಿಮಾ ರಂಗ ಹೊಸದೇನೂ ಅಲ್ಲ. ನಾಯಕಿಯಾಗಿ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟವರು. ಹಲವಾರು ಚಿತ್ರಗಳಲ್ಲೂ ನಟಿಸಿದ್ದಾರೆ. ಮದುವೆ ನಂತರ ನಟನೆಯಿಂದ ದೂರ ಉಳಿದಿದ್ದರು. ವಿಜಯ್ ಅವರ ಸಿನಿಮಾಗಳಿಗೆ ಸಹಾಯ ಮಾಡುತ್ತಿದ್ದರು. ಇದೀಗ ನಿರ್ಮಾಣಕ್ಕೆ ಮುಂದಾಗಿದ್ದಾರೆ.

Keerthi Gowda 1

ಮೊದಲ ನಿರ್ಮಾಣದ ಕಿರುಚಿತ್ರದಲ್ಲಿ ಬುಡಕಟ್ಟು ಮಕ್ಕಳ ಶಿಕ್ಷಣದ ಕುರಿತು ವಿಷಯ ಆಯ್ಕೆ ಮಾಡಿಕೊಂಡಿದ್ದಾರಂತೆ. ಈ ಮೂಲಕ ಸಮಾಜಕ್ಕೆ ಒಂದು ಸಂದೇಶವನ್ನು ನೀಡುವಂತಹ ಕೆಲಸಕ್ಕೆ ಅವರು ಮುಂದಾಗಿದ್ದಾರೆ.

 

ಕೀರ್ತಿ ಗೌಡ ಕೇವಲ ನಟಿ ಮಾತ್ರವಲ್ಲ, ಸಂಗೀತದಲ್ಲೂ ಅವರಿಗೆ ಆಸಕ್ತಿಯಿದೆ. ಈ ಹಿಂದೆ ಹಿಂದೂಸ್ತಾನಿ ಸಂಗೀತ ಕಲಿಯುತ್ತಿರುವ ಕುರಿತು ಅವರು ಬರೆದುಕೊಂಡಿದ್ದರು. ಜೊತೆಗೆ ವಿಜಯ್ ಅವರ ಕಷ್ಟ, ಸಂಭ್ರಮದಲ್ಲಿ ಭಾಗಿಯಾಗುವ ಮೂಲಕ  ವಿಜಯ್ ಅಭಿಮಾನಿಗಳ ಪಾಲಿಗೆ ನೆಚ್ಚಿನ ಅತ್ತಿಗೆ ಕೂಡ ಆಗಿದ್ದಾರೆ.

Share This Article