ಬಾಲಿವುಡ್‌ನ ಲೆಜೆಂಡರಿ ನಟಿ ಶ್ರೀದೇವಿಗೆ (Actress Sridevi) ಇಂದು (ಆ.13) 61ನೇ ವರ್ಷದ ಹುಟ್ಟುಹಬ್ಬವಾಗಿದ್ದು, ಅಗಲಿದ ಪತ್ನಿಗೆ ವಿಶೇಷವಾಗಿ ಬೋನಿ ಕಪೂರ್ (Boney Kapoor) ಶುಭಕೋರಿದ್ದಾರೆ. ಇದನ್ನೂ ಓದಿ:100 ಜನ್ಮದಲ್ಲೂ ನಿಮ್ಮನ್ನೇ ಆಯ್ಕೆ ಮಾಡಿಕೊಳ್ಳುತ್ತೇನೆ: ಯಶ್ ಕುರಿತು ರಾಧಿಕಾ ಲವ್ಲಿ ಪೋಸ್ಟ್
ಶ್ರೀದೇವಿ ನಿಧನರಾಗಿ 6 ವರ್ಷಗಳು ಕಳೆದಿವೆ. ಇಂದಿಗೂ ಶ್ರೀದೇವಿಯನ್ನು ಅವರ ಕುಟುಂಬ ಸ್ಮರಿಸುತ್ತಿದೆ. ಇದೀಗ ಪತ್ನಿ ಶ್ರೀದೇವಿಗೆ ‘ಹುಟ್ಟುಹಬ್ಬದ ಶುಭಾಶಯಗಳು ಮೈ ಜಾನ್’ ಎಂದು ಭಾವುಕವಾಗಿ ಬೋನಿ ಕಪೂರ್ ಪೋಸ್ಟ್ ಮಾಡಿದ್ದಾರೆ. ನೆಚ್ಚಿನ ನಟಿಯನ್ನು ಅಭಿಮಾನಿಗಳು ಕೂಡ ಸ್ಮರಿಸಿದ್ದಾರೆ.ಇದನ್ನೂ ಓದಿ:ಆಲಿಯಾ ಭಟ್ ನಟನೆಯ ‘ಹೈವೇ’ ಚಿತ್ರಕ್ಕೆ ಹಾಡಿದ್ದ ಪಾಕಿಸ್ತಾನಿ ಗಾಯಕಿ ನಿಧನ
View this post on Instagram
ಅಂದಹಾಗೆ, ಬಹುಭಾಷಾ ನಟಿಯಾಗಿ ಮಿಂಚಿ ಮರೆಯಾದ ಶ್ರೀದೇವಿ ಕನ್ನಡದಲ್ಲೂ ಹಲವು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ತಮ್ಮ 11ನೇ ವಯಸ್ಸಿಗೆ ‘ಭಕ್ತ ಕುಂಬಾರ’ ಸಿನಿಮಾದಲ್ಲಿ ನಟಿಸಿದರು. ಬಾಲ ಭಾರತ, ಸಂಪೂರ್ಣ ರಾಮಾಯಣ, ಯಶೋಧ ಕೃಷ್ಣ ಸಿನಿಮಾಗಳಲ್ಲಿ ಬಾಲ ಕಲಾವಿದೆಯಾಗಿ ಗುರುತಿಸಿಕೊಂಡರು.
ಬಳಿಕ 1975ರಲ್ಲಿ ‘ಹೆಣ್ಣು ಸಂಸಾರದ ಕಣ್ಣು’ ಸಿನಿಮಾದಲ್ಲಿ ಶ್ರೀದೇವಿ ನಟಿಸಿದರು. ‘ಪ್ರಿಯಾ’ ಎಂಬ ಚಿತ್ರದಲ್ಲಿ ರಜನಿಕಾಂತ್ ಮತ್ತು ಅಂಬರೀಶ್ ಜೊತೆ ಶ್ರೀದೇವಿ ತೆರೆಹಂಚಿಕೊಂಡಿದ್ದರು. ಇಂದಿಗೂ ಅವರು ಮಾಡಿದ ಪ್ರತಿಯೊಂದು ಪಾತ್ರವನ್ನು ಅಭಿಮಾನಿಗಳು ಸ್ಮರಿಸುತ್ತಾರೆ.