ಚಂಡೀಗಢ: ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆಯ ಭಾಗವಾಗಿ ಹರಿಯಾಣದ ಕಾಂಗ್ರೆಸ್ ಶಾಸಕ ರಾವ್ ದಾನ್ ಸಿಂಗ್ (Rao Dan Singh) ಮತ್ತು ಅವರ ಪುತ್ರ ಹಾಗೂ ಇತರ ಕೆಲ ಪ್ರಭಾವಿಗಳಿಗೆ ಸೇರಿದ 44 ಕೋಟಿ ರೂ.ಗಿಂತಲೂ ಹೆಚ್ಚು ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಲಾಗಿದೆ ಎಂದು ಜಾರಿ ನಿರ್ದೇಶನಾಲಯ (Enforcement Directorate) ಗುರುವಾರ ಹೇಳಿದೆ.
ಹರಿಯಾಣ ಮಹೇಂದ್ರಗಢ ಕ್ಷೇತ್ರದ ಹಾಲಿ ಶಾಸಕರೂ ಆಗಿರುವ 65 ವರ್ಷ ವಯಸ್ಸಿನ ರಾವ್ ದಾನ್ ಸಿಂಗ್, ಇದೇ ಅಕ್ಟೋಬರ್ 5 ರಂದು ನಡೆಯಲಿರುವ ಚುನಾವಣೆಗೆ ಕಣಕ್ಕಿಳಿದ್ದಾರೆ. ಇದನ್ನೂ ಓದಿ: Bilkis Bano case | ಕಟು ಟೀಕೆಯನ್ನು ಆದೇಶದಿಂದ ತೆಗೆಯುವಂತೆ ಗುಜರಾತ್ ಮಾಡಿದ್ದ ಮನವಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್
Advertisement
Advertisement
ಜಪ್ತಿ ಮಾಡಿದ ಆಸ್ತಿಗಳ ಪೈಕಿ, ರಾವ್ ದಾನ್ ಸಿಂಗ್ ಮತ್ತು ಅವರ ಮಗ ಅಕ್ಷತ್ ಸಿಂಗ್‌ಗೆ ಸೇರಿದ ಆಸ್ತಿಗಳು ಹೆಚ್ಚಾಗಿವೆ. ಗುರುಗ್ರಾಮ್‌ನ ಸೆಕ್ಟರ್ 99A ನಲ್ಲಿರುವ ಕೋಬನ್ ರೆಸಿಡೆನ್ಸಿಯಲ್ಲಿನ 31 ಫ್ಲಾಟ್‌ಗಳು, ಹರ್ಸಾರು ಗ್ರಾಮದಲ್ಲಿ 2.25 ಎಕರೆ ಜಮೀನು ಹಾಗೂ ಇತರ ಸಂಸ್ಥೈಗಳು ಸೇರಿವೆ ಎಂದು ಇಡಿ ಹೇಳಿಕೆಯಲ್ಲಿ ತಿಳಿಸಿದೆ.
Advertisement
ದೆಹಲಿ, ಗುರುಗ್ರಾಮ್, ರೇವಾರಿ (ಹರಿಯಾಣ) ಮತ್ತು ಜೈಪುರ (ರಾಜಸ್ಥಾನ) ನಲ್ಲಿರುವ ಫ್ಲಾಟ್‌ಗಳು ಮತ್ತು ಲ್ಯಾಂಡ್ ಪಾರ್ಸೆಲ್‌ಗಳು ಸನ್‌ಸಿಟಿ ಪ್ರಾಜೆಕ್ಟ್ಸ್ ಪ್ರೈ. ಲಿಮಿಟೆಡ್ ಮತ್ತು ILD ಗ್ರೂಪ್ ಸಂಸ್ಥೆಯನ್ನೂ ಜಪ್ತಿ ಮಾಡಿರುವುದಾಗಿ ಇಡಿ ತಿಳಿಸಿದೆ. ಇದನ್ನೂ ಓದಿ: Badlapur Encounter | ಆರೋಪಿ ಗುಂಡು ಹಾರಿಸಿದ್ರೆ ಪೊಲೀಸರು ಚಪ್ಪಾಳೆ ತಟ್ಟಬೇಕಾ?: ದೇವೇಂದ್ರ ಫಡ್ನವೀಸ್
Advertisement
1,392 ಕೋಟಿ ರೂ. ಮೊತ್ತದ ಬ್ಯಾಂಕ್ ಸಾಲ ವಂಚನೆ ಮಾಡಿದ್ದಕ್ಕಾಗಿ ಅಲೈಡ್ ಸ್ಟ್ರಿಪ್ಸ್ ಲಿಮಿಟೆಡ್ ಹೆಸರಿನ ಕಂಪನಿಯ ವಿರುದ್ಧ ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ) ಎಫ್‌ಐಆರ್ ದಾಖಲಿಸಿದ ನಂತರ ಅಕ್ರಮ ಹಣ ವರ್ಗಾವಣೆ ಪ್ರಕರಣ ಬೆಳಕಿಗೆ ಬಂದಿದೆ. ಆಸ್ತಿಯನ್ನು ಜಪ್ತಿ ಮಾಡಿದ ಹೊರತಾಗಿಯೂ ರಾವ್ ದಾನ್ ಸಿಂಗ್ ಮತ್ತು ಮತ್ತವರ ಕುಟುಂಬಸ್ಥರನ್ನು ಇಡಿ ಇನ್ನೂ ತನಿಖೆಗೆ ಒಳಪಡಿಸಿಲ್ಲ ಎಂದು ಸ್ಪಷ್ಟಪಡಿಸಿದೆ. ಇದನ್ನೂ ಓದಿ: ಜಿತಿಯಾ ಪವಿತ್ರ ಸ್ನಾನದ ವೇಳೆ ಅವಘಡ – ಬಿಹಾರದಲ್ಲಿ 37 ಮಕ್ಕಳು ಸೇರಿ 46 ಮಂದಿ ನದಿಯಲ್ಲಿ ಮುಳುಗಿ ದುರ್ಮರಣ