ತುಮಕೂರು: ಸಿಎಂ ಸಿದ್ದರಾಮಯ್ಯ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಮಹಿಳಾ ಐಎಎಸ್ ಪ್ರೊಬೇಷನರಿ ಅಧಿಕಾರಿಯೊಬ್ಬರು ನಾಡಗೀತೆಗೆ ಅಗೌರವ ತೋರಿರುವ ಘಟನೆ ಜಿಲ್ಲೆಯ ಶಿರಾ ಪಟ್ಟಣದಲ್ಲಿ ನಡೆದಿದೆ.
ಶಿರಾ ನಗರದ ಸರ್ಕಾರಿ ಕಾಲೇಜು ಮೈದಾನದಲ್ಲಿ ಸಿಎಂ ಸಿದ್ದರಾಮಯ್ಯ ವಿವಿಧ ಕಾಮಗಾರಿಗಳಿಗೆ ಶಂಕು ಸ್ಥಾಪನೆ ನೆರವೇರಿಸುವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದ ಪ್ರಾರಂಭಕ್ಕೂ ಮೊದಲು ನಾಡಗೀತೆ ಹಾಡುವ ವೇಳೆ ಸಿಎಂ ಸಿದ್ದರಾಮಯ್ಯ, ಸಚಿವ ಟಿ.ಬಿ ಜಯಚಂದ್ರ, ಎಚ್. ಆಂಜನೇಯ, ಸೇರಿದಂತೆ ಸ್ಥಳೀಯ ಶಾಸಕರು, ಉನ್ನತ ಮಟ್ಟದ ಅಧಿಕಾರಿಗಳು ಎದ್ದು ನಿಂತು ಗೌರವ ಸೂಚಿಸುತ್ತಿದ್ದರು.
Advertisement
Advertisement
ಈ ಸಂದರ್ಭದಲ್ಲಿ ಐಎಎಸ್ ಅಧಿಕಾರಿ ಪ್ರೀತಿ ಗೆಲ್ಹೋಟ್, ಚೂಯಿಂಗ್ ಗಮ್ ಜಗಿಯುವ ಮೂಲಕ ನಾಡಗೀತೆಗೆ ಅಗೌರವ ತೋರಿದ್ದಾರೆ. ಪ್ರೀತಿ ಗೆಲ್ಹೋಟ್ ತುಮಕೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರೊಬೇಷನರಿ ಸೇವಾವಧಿಯಲ್ಲಿ ಕೆಲಸ ನಿರ್ವಹಿಸುವ ಮೂಲಕ ತರಬೇತಿ ಪಡೆಯುತ್ತಿದ್ದಾರೆ. ಪ್ರೊಬೇಷನರಿ ಸೇವಾ ಅವಧಿಯಲ್ಲೇ ನಾಡಗೀತೆಗೆ ಅಗೌರವ ತೋರಿರುವುದು ಅಸಮಧಾನಕ್ಕೆ ಕಾರಣವಾಗಿದೆ.