ನವದೆಹಲಿ: ಭಾರತದಲ್ಲಿ ಕೋವಿಡ್-19 ನಾಲ್ಕನೇ ಅಲೆಯ ಪ್ರಾಬಲ್ಯ ತುಂಬಾ ಕಡಿಮೆ ಇರಲಿದೆ ಎಂದು ಪ್ರಖ್ಯಾತ ವೈರಾಣು ತಜ್ಞ ವೆಲ್ಲೂರ್ ಪ್ರೊ. ಟಿ.ಜಾಕೇಬ್ ಜಾಬ್ ಹೇಳಿದ್ದಾರೆ.
ಕಳೆದ ಎರಡರಿಂದ ಮೂರು ವಾರಗಳಲ್ಲಿ ದೆಹಲಿ ಮತ್ತು ಹರಿಯಾಣದಲ್ಲಿ ಕೋವಿಡ್ ಸಂಖ್ಯೆಯಲ್ಲಿ ಅಲ್ಪ ಏರಿಕೆ ಕಂಡುಬಂದಿದೆ. ಆದರೆ ಹೆಚ್ಚಳವನ್ನು ಅದೇ ಪ್ರಮಾಣದಲ್ಲಿ ಉಳಿಸಿಕೊಳ್ಳಲಾಗುತ್ತಿಲ್ಲ. ಯಾವುದೇ ರಾಜ್ಯವು ಕೋವಿಡ್-19 ಪ್ರಕರಣಗಳಲ್ಲಿ ಉಲ್ಬಣವನ್ನು ವರದಿ ಮಾಡಿಲ್ಲ ಎಂದು ತಿಳಿಸಿದ್ದಾರೆ.
Advertisement
Advertisement
ಯಾವುದೇ ರಾಜ್ಯವು ಕೋವಿಡ್-19 ಪ್ರಕರಣಗಳಲ್ಲಿ ಏರಿಕೆಯನ್ನು ವರದಿ ಮಾಡುತ್ತಿಲ್ಲ. ಭಾರತವು ಇಲ್ಲಿಯವರೆಗೆ ಮಾರ್ಚ್ ಮತ್ತು ಏಪ್ರಿಲ್‌ನಲ್ಲಿ ಕಡಿಮೆ ಮತ್ತು ಸ್ಥಿರ ಸಂಖ್ಯೆಗಳೊಂದಿಗೆ ಉಳಿದಿದೆ ಎಂದು ವಿಶ್ಲೇಷಿಸಿದ್ದಾರೆ. ಇದನ್ನೂ ಓದಿ: 4ನೇ ಅಲೆ ತಡೆಯೋದು ನಮ್ಮ ಕೈಯಲ್ಲಿಯೇ ಇದೆ: ತಜ್ಞ ವೈದ್ಯರು
Advertisement
ಮಾಸ್ಕ್ ಧರಿಸುವ ಕುರಿತು ಮಾತನಾಡಿದ ಅವರು, ಮಾಸ್ಕ್ ಬಳಸದಿರುವವರು ನಂಬರ್ ಒನ್ ಅಪರಾಧಿ. ಮಾಸ್ಕ್ ಧರಿಸುವುದರ ಅಗಾಧ ಮೌಲ್ಯವನ್ನು ಜನರಿಗೆ ತಿಳಿಸುವಲ್ಲಿ ಪರಿಣತರು ಮತ್ತು ನೀತಿ ನಾಯಕರು ಸೋತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
Advertisement
ಎಲ್ಲೆಲ್ಲಿ ಏರಿಕೆಯಿದೆಯೋ, ಅಲ್ಲಲ್ಲಿ ಇಳಿತವೂ ಇದೆ. ಏರಿಳಿತಗಳು ಸಂಪೂರ್ಣವಾಗಿ ಉಳಿಯುವುದಿಲ್ಲ ಎಂದು ಹೊಸ ರೂಪಾಂತರಿಗಳ ಕುರಿತು ಜಾಬ್ ತಿಳಿಸಿದ್ದಾರೆ. ಇದನ್ನೂ ಓದಿ: 4ನೇ ಅಲೆ ಆತಂಕ, ಕೂಡಲೇ ಜನರು 3ನೇ ಡೋಸ್ ತೆಗೆದುಕೊಳ್ಳಬೇಕು: ಸುಧಾಕರ್