ಬೆಂಗಳೂರು: ಕ್ರಿಕೆಟ್‌ನಲ್ಲಿ ವಿವಾದಾತ್ಮಕ ತೀರ್ಪು ಆಯ್ತು ಈಗ ಪ್ರೊ ಕಬಡ್ಡಿಯಲ್ಲೂ ವಿವಾದಾತ್ಮಕ ತೀರ್ಪು ಪ್ರಕಟಗೊಂಡಿದ್ದು, ಬೆಂಗಳೂರು ಬುಲ್ಸ್ 1 ಅಂಕಗಳಿಂದ ವಿರೋಚಿತ ಸೋಲನ್ನು ಅನುಭವಿಸಿದೆ.
Advertisement
ಫಸ್ಟ್ ಆಫ್‍ನಲ್ಲಿ 13 – 14 ಪಾಯಿಂಟ್‍ಗಳಿಂದ 1 ಅಂಕಗಳ ಮುನ್ನಡೆಯನ್ನು ಬೆಂಗಾಲ್ ಪಡೆದುಕೊಂಡಿತ್ತು. ಬಳಿಕ ಸೆಕೆಂಡ್ ಆಫ್‍ನಲ್ಲಿ ತೀವ್ರ ಕುತೂಹಲ ಮೂಡಿಸಿದ ಕಾಳಗದಲ್ಲಿ ಒಂದು ಹಂತದಲ್ಲಿ ಬೆಂಗಾಲ್ ಇನ್ನೇನು ಆಲೌಟ್ ಆಗುವ ಸನ್ನಿವೇಶದಲ್ಲಿತ್ತು. ಈ ವೇಳೆ ಕೊನೆಯವರಾಗಿ ರೈಡ್ ಮಾಡಿದ ನಬಿಬಕ್ಷ್ ಒಂದೇ ರೈಡ್‍ನಲ್ಲಿ 8 ಅಂಕಗಳನ್ನು ಪಡೆದ ಪರಿಣಾಮ ತಿರುವು ಪಡೆದ ಪಂದ್ಯ ಅಂತಿಮ ಹಂತದ ವರೆಗೂ ರೋಚಕತೆ ಮೂಡಿಸಿ ಅಂತಿಮವಾಗಿ ಬುಲ್ಸ್ ವಿರುದ್ಧ ಬೆಂಗಾಲ್ 1 ಅಂಕಗಳ ಜಯ ಸಾಧಿಸಿತು. ಬೆಂಗಾಲ್ ಜಯ ಸಾಧಿಸುತ್ತಿದ್ದಂತೆ ಅಂಪೈರ್ ತೀರ್ಪಿನ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಕಿಡಿಕಾರುತ್ತಿದ್ದಾರೆ. ಇದನ್ನೂ ಓದಿ: ಬೂಸ್ಟರ್ ಡೋಸ್ ಪಡೆದ ಬಳಿಕ ಅಜ್ಜನ ಭರ್ಜರಿ ಬ್ಯಾಟಿಂಗ್ – ವೀಡಿಯೋ ವೈರಲ್
Advertisement
Ye Warriors kisi bhi team ke aage jhukenge nahi ????
Check out the updated points table after Match 67 of #SuperhitPanga ????
Which team do you think has the upper hand? ????#CHEvGG #BENvBLR pic.twitter.com/fR4BlEjYeH
— ProKabaddi (@ProKabaddi) January 20, 2022
Advertisement
ಬೆಂಗಳೂರು 25 ರೈಡ್, 10 ಟೇಕಲ್, 2 ಆಲೌಟ್, 2 ಇತರೆ ಅಂಕ ಸೇರಿ ಒಟ್ಟು 39 ಅಂಕ ಗಳಿಸಿದರೆ, ಬೆಂಗಾಲ್ 20 ರೈಡ್, 10 ಟೇಕಲ್, 2 ಆಲೌಟ್, 8 ಇತರೆ ಅಂಕ ಸಹಿತ 40 ಅಂಕ ಸಂಪಾದಿಸಿ 1 ಅಂಕಗಳಿಂದ ಗೆದ್ದು ಬೀಗಿತು. ಬೆಂಗಳೂರು ಪರ ಪವನ್ ಶೆರವತ್ 10 ರೈಡ್, 3 ಬೋನಸ್ ಸಹಿತ 13 ಅಂಕ ಸಂಪಾದಿಸಿದರೆ, ಬೆಂಗಾಲ್ ಪರ ಮನಿಂದರ್ ಸಿಂಗ್ 4 ರೈಡ್, 1 ಟೇಕಲ್, 4 ಬೋನಸ್ ಸಹಿತ 9 ಅಂಕ ತಂಡಕ್ಕೆ ಕೊಡುಗೆ ನೀಡಿದರು. ಇದನ್ನೂ ಓದಿ: ಐಸಿಸಿ ವರ್ಷದ ಟಿ20, ಏಕದಿನ ತಂಡದಲ್ಲಿಲ್ಲ ಭಾರತೀಯರು – ಪಾಕ್ ಆಟಗಾರರ ಮೇಲುಗೈ
Advertisement