ಬೆಂಗಳೂರು: ತವರಿನ ತಂಡ ಬೆಂಗಳೂರು ಬುಲ್ಸ್ ವಿರುದ್ಧ ಗುಜರಾತ್ ಸೂಪರ್ ಜೈಂಟ್ಸ್ 40-36 ಅಂತರದಿಂದ ಗೆದ್ದಿದೆ.
Advertisement
ಕೊನೆಯ ನಿಮಿಷಗಳಲ್ಲಿ ರೈಡಿಂಗ್‍ನಲ್ಲಿ ಮೇಲುಗೈ ಸಾಧಿಸಿದ ಗುಜರಾತ್ ಸೂಪರ್ ಜೈಂಟ್ಸ್ ಬುಲ್ಸ್ ವಿರುದ್ಧ 4 ಅಂಕಗಳ ಅಂತರದಿಂದ ಜಯ ಸಾಧಿಸಿದೆ. ಇದನ್ನೂ ಓದಿ: 1000ನೇ ಏಕದಿನ ಪಂದ್ಯ ಗೆದ್ದು ಸ್ಮರಣೀಯವಾಗಿಸಿಕೊಂಡ ಭಾರತ – ವಿಂಡೀಸ್‍ಗೆ ಹೀನಾಯ ಸೋಲು
Advertisement
Advertisement
ಎರಡು ತಂಡಗಳು ಕೂಡ ರೈಡಿಂಗ್‍ನಲ್ಲಿ ಮಿಂಚಿದವು. ಗುಜರಾತ್ ಪರ ಪ್ರದೀಪ್ ಕುಮಾರ್ 12 ರೈಡ್, 2 ಬೋನಸ್ ಸಹಿತ ಒಟ್ಟು 14 ಅಂಕ ಸಂಪಾದಿಸಿದರೆ, ಬುಲ್ಸ್ ಪರ ಪವನ್ ಶೆರವತ್ 10 ರೈಡ್, 2 ಬೋನಸ್ ಸಹಿತ 12 ಅಂಕ ಮತ್ತು ಭರತ್ 10 ರೈಡ್, 1 ಬೋನಸ್ ಸಹಿತ 11 ಅಂಕ ಕಲೆಹಾಕಿ ಮಿಂಚಿದರು. ಇದನ್ನೂ ಓದಿ: U19 World Cup ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ ರಾಜ್ ಬಾವ ಯಾರು ಗೊತ್ತಾ?
Advertisement
https://twitter.com/ProKabaddi/status/1490356834208989184
ಬೆಂಗಳೂರು 24 ರೈಡ್, 1 ಸೂಪರ್ ರೈಡ್, 8 ಟೇಕಲ್, 2 ಆಲೌಟ್, 2 ಇತರೆ ಅಂಕ ಸಹಿತ ಒಟ್ಟು 36 ಪಾಯಿಂಟ್ ಪಡೆದರೆ, ಗುಜರಾತ್ 23 ರೈಡ್, 1 ಸೂಪರ್ ರೈಡ್, 11 ಟೇಕಲ್, 2 ಆಲೌಟ್, 4 ಇತರೆ ಸಹಿತ ಒಟ್ಟು 40 ಪಾಯಿಂಟ್ ಸಂಪಾದಿಸಿ 4 ಅಂಕಗಳ ಅಂತರದ ಜಯ ಸಾಧಿಸಿದೆ.