ಬೆಂಗಳೂರು: ಕೊನೆಯ ಸೆಕೆಂಡ್‌ವರೆಗೆ ಗೆಲುವಿಗಾಗಿ ಹೋರಾಡಿದ ಬೆಂಗಳೂರು ಬುಲ್ಸ್ ಮತ್ತು ದಬಾಂಗ್ ಡೆಲ್ಲಿ ನಡುವಿನ ಪಂದ್ಯ ರೋಚಕ ಟೈನಲ್ಲಿ ಅಂತ್ಯಗೊಂಡಿದೆ.
Advertisement
ಕಡೆಯ 1 ನಿಮಿಷಗಳಲ್ಲಿ ಎರಡು ತಂಡದ ಆಟಗಾರರ ನಡುವೆ ಜಿದ್ದಾಜಿದ್ದಿನ ಕಾಳಗ ರಂಗೇರಿತ್ತು. ಬೆಂಗಳೂರು ಬುಲ್ಸ್ ಪರ ಕೊನೆಯ ರೈಡ್ ಮಾಡಿದ ಪವನ್ ಶೆರವತ್ ಅವರನ್ನು ಡೆಲ್ಲಿ ತಂಡದ ಮಂಜಿತ್ ಚಿಲ್ಲರ್ ಬೇಟೆಯಾಡಿ ಒಂದಂಕ್ಕದ ಮುನ್ನಡೆಯಲ್ಲಿದ್ದ ಪಂದ್ಯವನ್ನು ಸಮಬಲಗೊಳಿಸಿದರು. ಅಂತಿಮವಾಗಿ 4 ಸೆಕೆಂಡ್‍ನ ಆಟ ಬಾಕಿ ಇತ್ತು ಡೆಲ್ಲಿ ಪರ ಕೊನೆಯ ರೈಡ್ ಮಾಡಿದ ನವೀನ್ ಕುಮಾರ್ ಯಾವುದೇ ಅಂಕ ಗಳಿಸದೆ ಹಿಂದಿರುಗಿ ಪಂದ್ಯ ಡ್ರಾದಲ್ಲಿ ಮುಕ್ತಾಯಗೊಳ್ಳುವಂತೆ ನೋಡಿಕೊಂಡರು. ಇದನ್ನೂ ಓದಿ: Under-19 World Cup: ಫೈನಲ್‍ನಲ್ಲಿ ಟೀಂ ಇಂಡಿಯಾ ದಾಖಲೆ
Advertisement
The #Superhitpanga between table-toppers got us like ????#DELvBLR #VIVOProKabaddi @BengaluruBulls @DabangDelhiKC pic.twitter.com/Ahprjh2Q0C
— ProKabaddi (@ProKabaddi) February 4, 2022
Advertisement
ಬೆಂಗಳೂರು ಪರ ಪವನ್ ಶೆರವತ್ 11 ರೈಡ್, 1 ಟೇಕಲ್ ಮತ್ತು 5 ಬೋನಸ್ ಸಹಿತ 17 ಪಾಯಿಂಟ್ ಗಳಿಸಿದರೆ, ಡೆಲ್ಲಿ ಪರ ನವೀನ್ ಕುಮಾರ್ 11 ರೈಡ್, 2 ಬೋನಸ್ ಸಹಿತ 13 ಅಂಕ ಕಲೆಹಾಕಿದರು. ಇವರಿಬ್ಬರೂ ಕೂಡ ಸೂಪರ್ 10 ಸಾಧಿಸಿದರು. ಎರಡು ತಂಡಗಳು ಕೂಡ ರೈಡಿಂಗ್‍ನಲ್ಲಿ ಮಿಂಚಿದವು. ಡೆಲ್ಲಿ 21 ರೈಡ್, 11 ಟೇಕಲ್, 4 ಆಲೌಟ್ ಅಂಕ ಸಹಿತ ಒಟ್ಟು 36 ಪಾಯಿಂಟ್ ಗಳಿಸಿದರೆ, ಬೆಂಗಳೂರು, 21 ರೈಡ್, 9 ಟೇಕಲ್, 4 ಆಲೌಟ್ ಮತ್ತು 2 ಇತರೆ ಅಂಕ ಸಹಿತ 36 ಅಂಕ ಕಲೆಹಾಕಿ ಸಮಬಲ ಸಾಧಿಸಿತು. ಇದನ್ನೂ ಓದಿ: ಕೊನೆಯ ಎಸೆತದಲ್ಲಿ 5 ರನ್ ಗುರಿ – ಸಿಕ್ಸ್, ಫೋರ್ ಬಾರಿಸದೆ ಪಂದ್ಯ ಗೆದ್ದ ತಂಡ, ವೀಡಿಯೋ ವೈರಲ್!
Advertisement