LatestLeading NewsMain PostSports

ತಮಿಳ್ ತಲೈವಾಸ್‍ಗೆ ಫುಲ್ ಚಾರ್ಜ್ ಮಾಡಿ ಗೆದ್ದ ಬೆಂಗಳೂರು ಬುಲ್ಸ್

Advertisements

ಬೆಂಗಳೂರು: ತಮಿಳ್ ತಲೈವಾಸ್ ವಿರುದ್ಧ ಭರ್ಜರಿ ಪ್ರದರ್ಶನ ನೀಡಿದ ಬೆಂಗಳೂರು ಬುಲ್ಸ್ ಟೂರ್ನಿಯ ಮೊದಲ ಜಯ ಸಾಧಿಸಿದೆ.

ರೈಡಿಂಗ್ ಮತ್ತು ಡಿಫೆನ್ಸ್ ವಿಭಾಗದಲ್ಲಿ ಉತ್ತಮ ಪ್ರದರ್ಶನ ತೋರಿದ ಬೆಂಗಳೂರು ತಂಡ 38 – 30 ಅಂಕಗಳ ಅಂತರದಲ್ಲಿ ಜಯಗಳಿಸಿತು. ಬೆಂಗಳೂರು ಪರ ರೈಡಿಂಗ್‍ನಲ್ಲಿ ನಾಯಕ ಪವನ್ ಕುಮಾರ್ ಶೆರಾವತ್ 9 ಅಂಕಗಳನ್ನು ಸಂಪಾದಿಸಿ ಮಿಂಚಿದರೆ, ಡಿಫೆನ್ಸ್ ವಿಭಾಗದಲ್ಲಿ ಸೌರಭ ನಂದಾಲ್ 5 ಅಂಕ ಸಂಪಾದಿಸಿ ಗೆಲುವಿನಲ್ಲಿ ಮಹತ್ವದ ಪಾತ್ರವಹಿಸಿದರು. ಇದನ್ನೂ ಓದಿ: ಅಂತರಾಷ್ಟ್ರೀಯ ಕ್ರಿಕೆಟ್‍ಗೆ ನಿವೃತ್ತಿ ಘೋಷಿಸಿದ ಹರ್ಭಜನ್ ಸಿಂಗ್

ಮೊದಲಾರ್ಧದ ಮುಕ್ತಾಯದ ವೇಳೆಗೆ ತಮಿಳ್ 13 – 19 ಬೆಂಗಳೂರು ಮುನ್ನಡೆ ಸಂಪಾದಿಸಿಕೊಂಡಿತ್ತು. ಆ ಬಳಿಕ ತೀವ್ರ ಜಿದ್ದಾಜಿದ್ದಿನಿಂದ ನಡೆದ ಕಾದಾಟದಲ್ಲಿ ಬೆಂಗಳೂರು ಗೆದ್ದು ಬೀಗಿದೆ. ಬೆಂಗಳೂರು ಬುಲ್ಸ್ ರೈಡಿಂಗ್‍ನಲ್ಲಿ 19, ಟೇಕಲ್ 14, ಆಲ್‍ಔಟ್‍ನಲ್ಲಿ 4 ಮತ್ತು ಇತರೆ 1 ಪಾಯಿಂಟ್‍ನೊಂದಿಗೆ ಒಟ್ಟು 38 ಅಂಕ ಗಳಿಸಿತ್ತು. ತಮಿಳ್ ತಲೈವಾಸ್ ರೈಡಿಂಗ್‍ನಲ್ಲಿ 15, ಟೇಕಲ್ 12, ಆಲ್‍ಔಟ್ 2 ಮತ್ತು ಇತರೆ 1 ಪಾಯಿಂಟ್‍ನೊಂದಿಗೆ 30 ಅಂಕಗಳಿಸಿ 8 ಅಂಕಗಳ ಅಂತರದ ಸೋಲು ಕಂಡಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಫೆ.12,13 ರಂದು ಐಪಿಎಲ್ ಮೆಗಾ ಹರಾಜು?

 

Leave a Reply

Your email address will not be published.

Back to top button