ದುಬೈ: ಅಕ್ಟೋಬರ್ 5 ರಿಂದ ನವೆಂಬರ್ 19ರ ವರೆಗೆ ಭಾರತದ ಸಂಪೂರ್ಣ ಆತಿಥ್ಯದಲ್ಲಿ ಏಕದಿನ ವಿಶ್ವಕಪ್ (ODI World Cup) ಟೂರ್ನಿ ನಡೆಯುತ್ತಿದ್ದು, ಟೂರ್ನಿಗೆ ಅಂತಾರಾಷ್ಟ್ರೀ ಕ್ರಿಕೆಟ್ ಮಂಡಳಿ (ICC) ನಗದು ಬಹುಮಾನದ ಮೊತ್ತವನ್ನು ಪ್ರಕಟಿಸಿದೆ. ಮುಂದಿನ ತಿಂಗಳು ಆರಂಭವಾಗುವ ಈ ಟೂರ್ನಿಯಲ್ಲಿ ಆಡಲಿರುವ ಎಲ್ಲಾ 48 ಪಂದ್ಯಗಳಿಗೆ ಬಹುಮಾನದ ಮೊತ್ತ (Prize Money) ಮತ್ತು ಪ್ರೋತ್ಸಾಹ ಧನವನ್ನು ಐಸಿಸಿ ಪ್ರಕಟಿಸಿದೆ.
Advertisement
ಈ ಟೂರ್ನಿಗೆ ಒಟ್ಟು 10 ಮಿಲಿಯನ್ ಡಾಲರ್ (83.10 ಕೋಟಿ) ಮೊತ್ತವನ್ನ ಘೋಷಿಸಿದೆ. ಏಕದಿನ ವಿಶ್ವಕಪ್ ವಿಜೇತ ತಂಡಕ್ಕೆ 4 ಮಿಲಿಯನ್ ಯುಎಸ್ ಡಾಲರ್ (USD) ಮೊತ್ತವನ್ನು (33.24 ಕೋಟಿ ರೂ.) ಪಡೆಯಲಿದೆ ಹಾಗೂ ರನ್ನರ್ ಅಪ್ ತಂಡ ಇದರಲ್ಲಿ ಅರ್ಧ ಅಂದರೆ, 16.62 ಕೋಟಿ ರೂ. ಗಳನ್ನು ಪಡೆದುಕೊಳ್ಳಲಿದೆ. ಇದನ್ನೂ ಓದಿ: ಶಮಿ ಮಾರಕ ಬೌಲಿಂಗ್ – ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ 5 ವಿಕೆಟ್‌ಗಳ ಜಯ
Advertisement
ಸೆಮಿಫೈನಲ್‌ನಲ್ಲಿ ಸೋತ ಎರಡೂ ತಂಡಗಳಿಗೆ ತಲಾ 8 ಲಕ್ಷ ಡಾಲರ್ (ಸುಮಾರು 6.64 ಕೋಟಿ ರೂ.) ಸಿಗಲಿದೆ. ಸೆಮಿಫೈನಲ್ ತಲುಪುವಲ್ಲಿ ವಿಫಲವಾಗುವ ಎಲ್ಲಾ ತಂಡಗಳಿಗೆ 1 ಲಕ್ಷ ಯುಎಸ್ ಡಾಲರ್ (ಅಂದಾಜು 83.10 ಲಕ್ಷ ರೂ.) ನೀಡಲಾಗುತ್ತದೆ.
Advertisement
Advertisement
ಗುಂಪು ಹಂತದ ಪಂದ್ಯಗಳಲ್ಲಿ ವಿಜೇತ ತಂಡಗಳು 40 ಸಾವಿರ ಯುಎಸ್ ಡಾಲರ್ ( 33.24 ಲಕ್ಷ ರೂ.) ಬಹುಮಾನ ಪಡೆಯಲಿವೆ. ಈ ಟೂರ್ನಿಯಲ್ಲಿ ವಿಜೇತ ತಂಡಗಳಿಗೆ ನಗದು ಬಹುಮಾನಕ್ಕಾಗಿ ಐಸಿಸಿ 1 ಕೋಟಿ ಡಾಲರ್ (ಸುಮಾರು 82.93 ಕೋಟಿ ರೂ.) ಖರ್ಚು ಮಾಡುತ್ತಿದೆ. ಟೂರ್ನಿಯನ್ನು ಹೆಚ್ಚು ಸ್ಪರ್ಧಾತ್ಮಕವಾಗಿಸಲು ಮತ್ತು ಆಟಗಾರರು ಮತ್ತು ಅಭಿಮಾನಿಗಳಿಗೆ ಮನರಂಜನೆ ನೀಡಲು ಐಸಿಸಿ ಈ ನಿರ್ಧಾರ ತೆಗೆದುಕೊಂಡಿದೆ. ಇದನ್ನೂ ಓದಿ: Asian Games 2023: ಅರುಣಾಚಲ ಪ್ರದೇಶದ ಮೂವರು ಅಥ್ಲೆಟ್‌ಗಳಿಗೆ ಪ್ರವೇಶ ನಿರಾಕರಿಸಿದ ಚೀನಾ
ಅಕ್ಟೋಬರ್ 5 ರಿಂದ ನವೆಂಬರ್ 19 ರವರೆಗೆ ಭಾರತದಲ್ಲಿ ವಿಶ್ವಕಪ್ ನಡೆಯಲಿದೆ. 45 ಲೀಗ್ ಪಂದ್ಯಗಳು ಮತ್ತು 3 ನಾಕೌಟ್ ಪಂದ್ಯಗಳು ನಡೆಯಲಿವೆ. ಭಾರತ, ಅಫ್ಘಾನಿಸ್ತಾನ, ಆಸ್ಟ್ರೇಲಿಯಾ, ಬಾಂಗ್ಲಾದೇಶ, ಇಂಗ್ಲೆಂಡ್, ನ್ಯೂಜಿಲೆಂಡ್, ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ಶ್ರೀಲಂಕಾ ಮತ್ತು ನೆದರ್ಲೆಂಡ್ ತಂಡಗಳು ಪ್ರಶಸ್ತಿಗಾಗಿ ಕಾದಾಡಲಿವೆ. ಇದನ್ನೂ ಓದಿ: Asia Cup 2023: ಒಂದೇ ಒಂದು ಕ್ಯಾಚ್ ಹಿಡಿದ ಜಡೇಜಾ, 6 ವಿಕೆಟ್ ಕಿತ್ತ ಸಿರಾಜ್‌ಗೆ ಲಕ್ಷ ಲಕ್ಷ ಬಹುಮಾನ
Web Stories