ನವದೆಹಲಿ: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮಗಳು ಪ್ರಿಯಾಂಕ ವಾದ್ರಾ ಡೆಂಗ್ಯೂನಿಂದ ಬಳಲುತ್ತಿದ್ದು, ಚಿಕಿತ್ಸೆಗಾಗಿ ನಗರದ ಶ್ರೀ ಗಂಗಾ ರಾಮ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಆಗಸ್ಟ್ 23 ರಂದು ಡಾಕ್ಟರ್ ಅರುಫ್ ಬಸುರವರನ್ನು ಸಂಪರ್ಕಿಸಿದಾಗ ಪ್ರಿಯಾಂಕಾರಿಗೆ ಡೆಂಗ್ಯೂವಿನ ಲಕ್ಷಣಗಳು ಕಂಡುಬಂದಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪ್ರಿಯಾಂಕಾ ತಲೆನೋವು ಹಾಗು ಜ್ವರದಿಂದ ನರಳುತ್ತಿದ್ದರು. ಪರೀಕ್ಷೆಗೆ ಒಳಪಡಿಸಿದಾಗ ಡೆಂಗ್ಯೂವಿರುವುದು ಖಚಿತವಾಗಿದೆ ಎಂದು ಶ್ರೀ ಗಂಗಾ ರಾಮ್ ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ. ಸದ್ಯ ಪ್ರಿಯಾಂಕಾ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ ಎಂದು ಆಸ್ಪತ್ರೆಯ ಚೇರ್‍ಮನ್ ಡಿ.ಎಸ್.ರಾಣಾ ತಿಳಿಸಿದ್ದಾರೆ.
Advertisement
ದೆಹಲಿಯಲ್ಲಿ ಇದೂವರೆಗೂ ಸುಮಾರು 657 ಡೆಂಗ್ಯೂ ಪ್ರಕರಣಗಳು ಆಸ್ಪತ್ರೆಯಲ್ಲಿ ದಾಖಲಾಗಿವೆ. ಅದರಲ್ಲಿ 325 ಜನ ದೆಹಲಿಯವರೆಂದು ಹಾಗೂ 332 ಜನರಿಗೆ ಬೇರೆ ರಾಜ್ಯದವರು ಎಂದು ದೆಹಲಿ ಆಸ್ಪತ್ರೆಯ ವರದಿಗಳು ತಿಳಿಸಿವೆ. ದೆಹಲಿಯ ಮುನ್ಸಿಪಲ್ ಕಾರ್ಪೋರೇಷನ್ ನಲ್ಲಿ ಒಟ್ಟು 64 ಜನರು ಡೆಂಗ್ಯೂನಿಂದ ಆಸ್ಪತ್ರೆಗೆ ದಾಖಲಾಗಿದ್ದು, ದಕ್ಷಿಣ ದೆಹಲಿಯಲ್ಲೇ 42 ಜನರು ಡೆಂಗ್ಯೂ ರೋಗಕ್ಕೆ ತುತ್ತಾಗಿದ್ದಾರೆ ಎಂದು ನಗರದ ಮುನ್ಸಿಪಲ್ ಕೌನ್ಸಿಲ್ ತಿಳಿಸಿದೆ.
Advertisement
#PriyankaVadra Suffers From Dengue, Admitted to Delhi's Sir Ganga Ram Hospitalhttps://t.co/pEDKy57Hqo
— India.com (@indiacom) August 25, 2017
Advertisement
#PriyankaVadra admitted to Ganga Ram with #denguehttps://t.co/J2cXDz0K4z pic.twitter.com/l6M0zUmdct
— Yes Punjab (@BawaHS) August 25, 2017