ಬೆಂಗಳೂರು: ತಾನು ಸ್ಥಾಪಿಸಿದ ಕೆಪಿಜೆಪಿ ಪಕ್ಷಕ್ಕೆ ನಟ ಉಪೇಂದ್ರ ಅವರು ಈಗಾಗಲೇ ರಾಜೀನಾಮೆ ನೀಡಿದ್ದು, ಈ ಕುರಿತು ಪತ್ನಿ ಪ್ರಿಯಾಂಕಾ ಉಪೇಂದ್ರ ಪ್ರತಿಕ್ರಿಯಿಸಿದ್ದಾರೆ.
ನಗರದಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಘಟನೆಯಿಂದ ಸಾಕಷ್ಟು ಬೇಸರವಾಗಿದೆ. ಉಪೇಂದ್ರರವರ ಇಮೇಜ್ ಗೆ ಧಕ್ಕೆ ಆಗುತ್ತೇನೋ ಅನ್ನೋ ಬೇಸರವಾಗಿತ್ತು. ಉಪ್ಪಿ ಹೊಸ ಪಕ್ಷದ ನಿರ್ಧಾರ ಒಳ್ಳೆಯದೇ ಆಯ್ತು. ಮಹೇಶ್ ಗೌಡ ಚೆನ್ನಾಗಿಯೇ ಇದ್ರು. ನಮ್ಮ ಕುಟುಂಬದವರ ಜೊತೆ ಇದ್ದು, ಉಪ್ಪಿಗೆ ಹಾಗೂ ನನಗೆ ಜೀವನದಲ್ಲಿ ದೊಡ್ಡ ಪಾಠ ಕಲಿಸಿದ್ರು ಅಂತ ಬೇಸರ ವ್ಯಕ್ತಪಡಿಸಿದ್ರು.
Advertisement
Advertisement
ಉಪ್ಪಿ ಸೇರಿದಕ್ಕೆ ಕೆಪಿಜೆಪಿ ಪಕ್ಷದ ಹೆಸರಿಗೆ ಪಬ್ಲಿಸಿಟಿ ಸಿಕ್ತು. ಉಪ್ಪಿ ಇಲ್ಲದೇ ಇದ್ರೆ ಆ ಪಕ್ಷದ ಬಗ್ಗೆ ಯಾರಿಗೂ ಗೊತ್ತಿರಲಿಲ್ಲ ಬಿಡಿ. ಸಜೆಷನ್ ಕೊಟ್ಟಿದ್ದನ್ನೇ ಸರ್ವಾಧಿಕಾರಿ ಅಂತಾ ತಿಳ್ಕೊಂಡ್ರೇ ಹೇಗೆ? ಎಲೆಕ್ಷನ್ ಹತ್ರ ಬರುವ ದಿನಗಳಲ್ಲಿಯೇ ಈ ರೀತಿ ವರ್ತನೆ ಎಷ್ಟರ ಮಟ್ಟಿಗೆ ಸರಿ? ಉಪ್ಪಿ ಅಭ್ಯರ್ಥಿಗಳನ್ನ ಪಕ್ಷೇತರವಾಗಿ ನಿಲ್ಲಿಸುವ ಯೋಚನೆ ಕೂಡ ಮಾಡಿದ್ದರು. ಅಭ್ಯರ್ಥಿಗಳು ಈಗಾಗಲೇ ರೆಡಿಯಾಗಿದ್ದಾರೆ ಅಂತ ಅವರು ತಿಳಿಸಿದ್ರು. ಇದನ್ನೂ ಓದಿ: ಕೆಪಿಜೆಪಿಗೆ ನಟ ಉಪೇಂದ್ರ ರಾಜೀನಾಮೆ – ಹೊಸ ಪಕ್ಷ ಸ್ಥಾಪನೆಗೆ ನಿರ್ಧಾರ
Advertisement
Advertisement
ನಾನು ಕಂಟೆಸ್ಟ್ ಮಾಡಲ್ಲ: ಉಪ್ಪಿಗೆ ಎಲ್ಲಾ ರಾಷ್ಟ್ರೀಯ ಪಕ್ಷದಲ್ಲೂ ಸ್ನೇಹಿತರಿದ್ದಾರೆ. ಕಾಂಗ್ರೆಸ್, ಬಿಜೆಪಿಯಿಂದಲೂ ಆಹ್ವಾನ ಇತ್ತು. ಆದ್ರೆ ಹೊಸ ಪಕ್ಷದ ಕನಸು ಅವರಿಗಿದೆ. ಇನ್ನು ಮುಂದೆ ನಾವು ಕೇರ್ ಫುಲ್ ಆಗಿರ್ತೀವಿ. ನಾನು ಕಂಟೆಸ್ಟ್ ಮಾಡಲ್ಲ, ಹೊಸ ಪಕ್ಷಕ್ಕೆ ಎಲ್ಲ ಸಪೋರ್ಟ್ ಕೊಡ್ತೀನಿ ಅಂತ ಪ್ರಿಯಾಂಕಾ ಸ್ಪಷ್ಟಪಡಿಸಿದ್ರು.
https://www.youtube.com/watch?v=RBF3GyZURh4