-ಸಿಎಂ ಬದಲಾವಣೆಯಾದ್ರೆ ನಮ್ಮ ತಂದೆಗೆ ಚಾನ್ಸ್!
ದಾವಣಗೆರೆ: ದೆಹಲಿಯಲ್ಲಿ ಕಾಂಗ್ರೆಸ್ (Congress) ಸೋಲಿಗೆ ಇವಿಎಂ (EVM) ಕಾರಣ ಎಂದು ಸಂಸದೆ ಪ್ರಿಯಾಂಕಾ ಜಾರಕಿಹೊಳಿ (Priyanka Satish Jarkiholi) ಆರೋಪಿಸಿದ್ದಾರೆ.
ದಾವಣಗೆರೆ (Davanagere) ಜಿಲ್ಲೆಯ ಹರಿಹರದ ರಾಜನಹಳ್ಳಿ ವಾಲ್ಮೀಕಿ ಪೀಠದಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಈ ವೇಳೆ, ದೆಹಲಿ ಚುನಾವಣಾ ಫಲಿತಾಂಶದ ವಿಚಾರವಾಗಿ, ಬಿಜೆಪಿಯವರದ್ದು ಗೋತ್ತಲ್ಲ, ಇವಿಯಂನ ಗೊಂದಲ ಮಾಡಿಕೊಂಡು ಬಂದಿದ್ದಾರೆ. ಮಹಾರಾಷ್ಟ್ರದಲ್ಲಿ ಕೂಡ ಅದೇ ರೀತಿ ಮಾಡಿ ಗೆದ್ದಿದ್ದಾರೆ ಎಂದರು.
ನಮ್ಮ ನಾಯಕರಾದ ರಾಹುಲ್ ಗಾಂಧಿಯವರು ಕೂಡ ಇದೇ ಆರೋಪ ಮಾಡಿದ್ದಾರೆ. ಒಂದೇ ತಿಂಗಳಲ್ಲಿ ಮತದಾರರ ಸಂಖ್ಯೆ ಹೆಚ್ಚಾಗಿದೆ ಎಂದು ಆರೋಪಿಸಿದ್ದಾರೆ ಎಂದು ತಿಳಿಸಿದರು.
ಸಿಎಂ ಬದಲಾವಣೆ ವಿಚಾರವಾಗಿ, ಹೈಕಮಾಂಡ್ ಸಿಎಂ ಬದಲಾವಣೆ ವಿಚಾರದಲ್ಲಿ ನಿರ್ಧಾರ ಮಾಡುತ್ತದೆ. ಹೈಕಮಾಂಡ್ ಏನು ಹೇಳುತ್ತೋ ಅದೇ ಅಂತಿಮ. ಬದಲಾವಣೆ ಆದ್ರೆ ನಮ್ಮ ತಂದೆಗೆ ಅವಕಾಶ ಇದೆ. ನಮ್ಮ ತಂದೆಯವರಿಗೆ (Satish Jarkiholi) ಅವಕಾಶ ಸಿಕ್ಕರೆ ರಾಜ್ಯವನ್ನು ಒಳ್ಳೆಯ ರೀತಿ ಕೊಂಡೊಯ್ಯುತ್ತಾರೆ ಎಂದು ತಿಳಿಸಿದ್ದಾರೆ.