ನವದೆಹಲಿ: ಪ್ರಧಾನಿ ಮೋದಿ ವಿರುದ್ಧ ವಾರಣಾಸಿಯಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಆಗಿರುವ ಪ್ರಿಯಾಂಕ ಗಾಂಧಿ ವಾದ್ರಾ ಅವರು ಸ್ಪರ್ಧೆ ಮಾಡುವುದು ಖಚಿತ ಎನ್ನಲಾಗಿದೆ.
2019ರ ಚುನಾವನೆಯಲ್ಲಿ ಮೋದಿ ಅಶ್ವಮೇಧ ಕುದುರೆಯನ್ನು ಕಟ್ಟಿ ಹಾಕಲು ಪ್ರಿಯಾಂಕ ಅವರೇ ಸಮರ್ಥ ಅಭ್ಯರ್ಥಿ ಎಂದು ಕಾಂಗ್ರೆಸ್‍ನಲ್ಲಿ ಭಾರೀ ಲೆಕ್ಕಾಚಾರ ನಡೆದಿದೆ. ಈಗಾಗಲೇ ವಾರಣಾಸಿಯಾದ್ಯಂತ ಚುನಾವಣಾ ಪ್ರಚಾರ ಮಾಡಿರುವ ಪ್ರಿಯಾಂಕ ಸ್ಫರ್ಧೆಯ ಬಗ್ಗೆ ನಾಳೆ ವೇಳೆಗೆ ಅಧಿಕೃತ ಪ್ರಕಟಣೆ ಹೊರ ಬೀಳುವ ಸಾಧ್ಯತೆ ಇದೆ.
Advertisement
Advertisement
ಪ್ರಿಯಾಂಕ ಗಾಂಧಿ ವಾದ್ರಾ ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತರಾ ಎಂಬ ಪ್ರಶ್ನೆಗೆ ಈ ಹಿಂದೆ ಉತ್ತರ ನೀಡಿದ್ದ ಕಾಂಗ್ರೆಸ್ ವಕ್ತಾರರೊಬ್ಬರು, ‘ಇನ್ನೇನು ನಾನು ಸ್ಪರ್ಧೆ ಮಾಡಲು ಆಗುತ್ತಾ’ ಎಂದು ಮರುಪ್ರಶ್ನೆ ಮಾಡಿ ಉತ್ತರಿಸಿದ್ದರು. ಆ ಬಳಿಕ ವಾರಣಾಸಿಯಲ್ಲಿ ಪ್ರಿಯಾಂಕ ಸ್ಪರ್ಧೆ ಬಗ್ಗೆ ಸುದ್ದಿ ಹೆಚ್ಚಾಗಿತ್ತು. ಒಂದೊಮ್ಮೆ ಪ್ರಿಯಾಂಕ ಗಾಂಧಿ ಅವರು ವಾರಣಾಸಿಯಲ್ಲಿ ಸ್ಪರ್ಧೆ ಮಾಡಿದರೆ 2019 ಲೋಕಸಭಾ ಚುನಾವಣೆಯಲ್ಲಿ ಪ್ರಮುಖ ಕ್ಷೇತ್ರವಾಗಲಿದೆ. ಕಳೆದ ಫೆಬ್ರವರಿಯಲ್ಲಿ ಪ್ರಿಯಾಂಕ ಗಾಂಧಿ ಅವರು ಸಕ್ರಿಯ ರಾಜಕೀಯಕ್ಕೆ ಪ್ರವೇಶ ಮಾಡಿದ್ದರು.
Advertisement
ಇತ್ತ ಉತ್ತರ ಪ್ರದೇಶದ ಲಖನೌದಿಂದ ಇಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಭರ್ಜರಿ ರೋಡ್ ಶೋ ನಡೆಸಿ ನಾಮಪತ್ರ ಸಲ್ಲಿಸಿದರು. ಏಪ್ರಿಲ್ 18 ಕ್ಕೆ ನಾಮಪತ್ರ ಸಲ್ಲಿಕೆಗೆ ಮುಗಿಯಲಿದ್ದು, ಕಾಂಗ್ರೆಸ್ ಅಥವಾ ಇತರೆ ಪಕ್ಷದಿಂದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿಲ್ಲ. ಮೇ. 6 ರಂದು ಮತದಾನ ನಡೆಯಲಿದೆ.
Advertisement
Thank you Lucknow! Your affection and energy in today’s roadshow was overwhelming and it would remain etched in my memory. pic.twitter.com/V3WzJwOdRs
— Chowkidar Rajnath Singh (@rajnathsingh) April 16, 2019