ಇದು ರಾಜಸ್ತಾನದ ಉದಯಪುರದಲ್ಲಿ ಬಾಲಿವುಡ್ ನಟಿ ಪರಿಣಿತಿ ಚೋಪ್ರಾ (Parineeti Chopra) ಮತ್ತು ಸಂಸದ ರಾಘವ್ ಚಡ್ಡಾ (Raghav Chadha) ಅವರ ವಿವಾಹ ನಡೆಯುತ್ತಿದೆ. ವಿವಾಹ ಮಹೋತ್ಸವದಲ್ಲಿ ಭಾಗಿಯಾಗುವುದಕ್ಕಾಗಿಯೇ ಪರಿಣಿತಿ ಅವರ ಸೋದರ ಸಂಬಂಧಿ ಪ್ರಿಯಾಂಕಾ ಚೋಪ್ರಾ (Priyanka Chopra) ಅಮೆರಿಕಾದಿಂದ ಬಂದಿಳಿಸಿದ್ದಾರೆ. ಜೊತೆಗೆ ಮಗಳನ್ನೂ ಕರೆತಂದಿದ್ದಾರೆ. ಆದರೆ, ಪತಿಗೆ ಪೂರ್ವ ನಿಯೋಜಿತ ಕಾರ್ಯಕ್ರಮ ಫಿಕ್ಸ್ ಆಗಿರುವುದರಿಂದ ನಿಕ್ ಗೈರಾಗಿದ್ದಾರೆ.
ಈಗಾಗಲೇ ಮುಂಬೈನ ಪರಿಣಿತಿ ಮನೆಯು ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ. ಜೊತೆಗೆ ಮದುವೆ ಆಗಲಿರುವ ಉದಯಪುರದ ಲೀಲಾ ಪ್ಯಾಲೇಸ್ ಕೂಡ ಸಜ್ಜಾಗುತ್ತಿದೆ. ಸೆ.23 ಮತ್ತು 24 ರಂದು ಎರಡು ದಿನಗಳ ಕಾಲ ಅದ್ದೂರಿಯಾಗಿ ವಿವಾಹ ನಡೆಯಲಿದೆ. ಇದನ್ನೂ ಓದಿ:ಕಾವೇರಿ ಹೋರಾಟಕ್ಕೆ ನೇರವಾಗಿ ಇಳಿದ ನಟ ಅಭಿಷೇಕ್ ಅಂಬರೀಶ್
ರಾಘವ್- ಪರಿಣಿತಿ ಸೆ.24ರಂದು ಉದಯಪುರದಲ್ಲಿ (Udaipur) ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ಪಂಜಾಬ್ ಸಂಪ್ರದಾಯದಂತೆ ಮದುವೆ ನಡೆಯಲಿದೆ. ವಿವಾಹ ಸಮಾರಂಭಗಳು ಸೆ.22ರಿಂದ ಪ್ರಾರಂಭವಾಗಲಿದ್ದು, ಸೆ.24ರವರೆಗೆ ನಡೆಯಲಿದೆ. ಮದುವೆಯ ಕುರಿತು ಸಂಪೂರ್ಣ ವಿವರ ಈ ಕಾರ್ಡ್ನಲ್ಲಿದೆ. ಸೆ.30ರಂದು ಚಂಡೀಗಢದ ತಾಜ್ ಹೋಟೆಲ್ನಲ್ಲಿ ಆರತಕ್ಷತೆ ನಡೆಯಲಿದೆ.
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್- ಪಂಜಾಬ್ ಸಿಎಂ ಭಗವಂತ್ ಮಾನ್ ಸೇರಿದಂತೆ ಇತರ ರಾಜಕೀಯ ನಾಯಕರು ಉದಯಪುರಕ್ಕೆ ಬರಲಿದ್ದಾರೆ. ಅವರಿಗೆ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಇದಲ್ಲದೇ ಮದುವೆ ನಡೆಯುವ ಲೀಲಾ ಪ್ಯಾಲೇಸ್ ಬಳಿ ಇರುವ ಐಷಾರಾಮಿ ಹೋಟೆಲ್ಗಳನ್ನು ಕಾಯ್ದಿರಿಸಲಾಗಿದೆ.
Web Stories