ಸದ್ಯ ಹಾಲಿವುಡ್ ನಲ್ಲಿ ಮಿಂಚುತ್ತಿರುವ ಪ್ರಿಯಾಂಕಾ ಚೋಪ್ರಾ (Priyanka Chopra) ಬಾಲಿವುಡ್ ಬಿಡುವುದಕ್ಕೆ ನಿರ್ಮಾಪಕ, ನಿರ್ದೇಶಕ ಕರಣ್ ಜೋಹಾರ್ (Karan Johar) ಕಾರಣ ಎಂದು ಮೊನ್ನೆಯಷ್ಟೇ ಕಂಗನಾ ರಣಾವತ್ (Kangana Ranaut) ಹೇಳಿದ್ದರು. ಇದಕ್ಕೆ ದಿ ಕಾಶ್ಮೀರ್ ಫೈಲ್ಸ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ (Vivek Agnihotri) ಧ್ವನಿಗೂಡಿಸಿದ್ದರು. ಈ ಸುದ್ದಿ ಬಿಟೌನ್ ನಲ್ಲಿ ಭಾರೀ ಸದ್ದು ಮಾಡಿತ್ತು. ಕಂಗನಾ ಹಚ್ಚಿರುವ ಬೆಂಕಿ ಇನ್ನೂ ಉರಿಯುತ್ತಿರುವಾಗಲೇ ಬಾಲಿವುಡ್ ಗೆ ಬಂದಿಳಿದಿದ್ದಾರೆ ಪ್ರಿಯಾಂಕಾ ಚೋಪ್ರಾ.
Advertisement
ಅಂಬಾನಿ (Ambani) ಸಾಂಸ್ಕೃತಿಕ ಕೇಂದ್ರದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳುವುದಕ್ಕಾಗಿ ಮೊದಲ ಬಾರಿಗೆ ಮಗಳ ಜೊತೆ ಆಗಮಿಸಿರುವ ಪ್ರಿಯಾಂಕಾ ಚೋಪ್ರಾಗೆ ಅಚ್ಚರಿಯ ಕ್ಷಣವೊಂದು ಎದುರಾಯಿತು. ಕಂಗನಾ ಯಾರು ಮೇಲೆ ಆರೋಪ ಮಾಡಿದ್ದರೋ, ಅವರೇ ಪ್ರಿಯಾಂಕಾಗೆ ಎದುರಾಗಿ ತಬ್ಬಿಕೊಂಡ ಘಟನೆ ನಡೆಯಿತು. ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸಿದ್ದ ಕರಣ್ ಜೋಹಾರ್ ಮತ್ತು ಪ್ರಿಯಾಂಕಾ ಪರಸ್ಪರ ತಬ್ಬಿಕೊಂಡು ಮತ್ತೊಂದು ಸಂದೇಶ ರವಾನಿಸಿದ್ದಾರೆ. ಇದನ್ನೂ ಓದಿ: ಹಿಂದಿ ಚಿತ್ರರಂಗದಲ್ಲಿ ಸೌತ್ನಷ್ಟು ಶಿಸ್ತಿಲ್ಲ: ಕಾಜಲ್ ಅಗರ್ವಾಲ್
Advertisement
Advertisement
ಈ ದೃಶ್ಯವನ್ನು ಕ್ಯಾಮೆರಾಗಳು ಕೂಡ ಅಚ್ಚರಿಯಿಂದಲೇ ಸೆರೆ ಹಿಡಿದಿವೆ. ಆ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಕೂಡ ಆಗಿವೆ. ಅಲ್ಲದೇ, ಈ ದೃಶ್ಯಕ್ಕೆ ನಿಮ್ಮ ಪ್ರತಿಕ್ರಿಯೆ ಏನು ಎಂದು ಕೆಲವರು ಕಂಗನಾ ರಣಾವತ್ ಅವರಿಗೆ ಕಾಲೆಳೆದಿದ್ದಾರೆ. ಈ ವಿಡಿಯೋ ಕುರಿತಾಗಿ ಈವರೆಗೂ ಕಂಗನಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಏನು ಹೇಳುತ್ತಾರೆ ಎನ್ನುವ ಕುತೂಹಲವಂತೂ ಇದ್ದೇ ಇದೆ.
Advertisement
ನಿನ್ನೆ ನಡೆದ ಅಂಬಾನಿ ಸಾಂಸ್ಕೃತಿಕ ಕೇಂದ್ರದ ಉದ್ಘಾಟನಾ ಸಮಾರಂಭಕ್ಕೆ ಬಾಲಿವುಡ್ ನ ಅನೇಕ ಗಣ್ಯರು ಹಾಜರಿದ್ದರು. ದೀಪಿಕಾ ಪಡುಕೋಣೆ, ರಣವೀರ್ ಸೇರಿದಂತೆ ಇಡೀ ಚಿತ್ರೋದ್ಯಮವೇ ಈ ಸಮಾರಂಭದಲ್ಲಿ ಪಾಲ್ಗೊಂಡಿತ್ತು. ಈ ಕಾರ್ಯಕ್ರಮದ ಸಲುವಾಗಿಯೇ ಪತಿ ಮತ್ತು ಮಗಳ ಜೊತೆ ಪ್ರಿಯಾಂಕಾ ಚೋಪ್ರಾ ಕೂಡ ಆಗಮಿಸಿದ್ದರು.