ನವದೆಹಲಿ: ಇಂದಿನ ರಾಜನಿಗೆ ಜನರ ನಡುವೆ ಹೋಗುವ ಧೈರ್ಯ ಇಲ್ಲ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಅವರಿಗೆ ಸಂಸದೆ ಪ್ರಿಯಾಂಕಾ ಗಾಂಧಿ (Priyanka Gandhi) ಟಾಂಗ್ ಕೊಟ್ಟಿದ್ದಾರೆ.
ಸಂಸತ್ ಅಧಿವೇಶನದಲ್ಲಿ ಮಾತನಾಡಿದ ಅವರು, ಬಾಲ್ಯದಲ್ಲಿ ನಾವು ಕಥೆ ಕೇಳುತ್ತಿದ್ದೆವು. ಹಿಂದೆ ರಾಜ ವೇಷ ಬದಲಿಸಿ ಜನರ ನಡುವೆ ಅಭಿಪ್ರಾಯ ಕೇಳಲು ಹೋಗುತ್ತಿದ್ದ. ಪ್ರಜೆಗಳು ನನ್ನ ಬಗ್ಗೆ ಏನು ಮಾತನಾಡುತ್ತಿದ್ದಾರೆ. ನಾನು ಸರಿಯಾದ ದಾರಿಯಲ್ಲಿದ್ದೇನೆಯೇ, ಇಲ್ವಾ ಅಂತಾ ತಿಳಿಯಲು. ಇಂದಿನ ರಾಜ ವೇಷ ಬದಲಿಸುತ್ತಿದ್ದಾರೆ. ಅವರಿಗೆ ವೇಷ ಬದಲಿಸುವ ಹವ್ಯಾಸ ಇದೆ. ಆದರೆ, ಅವರಿಗೆ ಜನರು ನಡುವೆ ಹೋಗುವ ಧೈರ್ಯ ಇಲ್ಲ ಎಂದು ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ಸಂಸತ್ ಭವನ ಮೇಲಿನ ದಾಳಿಗೆ 23 ವರ್ಷ – ಹುತಾತ್ಮಕರಿಗೆ ಮೋದಿ ಸೇರಿ ಗಣ್ಯರಿಂದ ನಮನ
Advertisement
Advertisement
ನಮ್ಮ ಸಂವಿಧಾನ ಸುರಕ್ಷಾ ಕವಚ. ನ್ಯಾಯ, ಸುರಕ್ಷೆ, ಅಭಿವ್ಯಕ್ತಿಯ ಕವಚ. ಸುರಕ್ಷಾ ಕವಚವನ್ನು ಮುರಿಯುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಲ್ಯಾಟರಲ್ ಎಂಟ್ರಿ ಮೂಲಕ ಮೀಸಲಾತಿ ಮುಗಿಸಲು ನೋಡುತ್ತಿದೆ. ಸಂವಿದಾನ ಬದಲಾಯಿಸುವ ಮಾತುಗಳು ದೇಶದಲ್ಲಿ ನಡೆಯುವುದಿಲ್ಲ. ಈ ಚುನಾವಣೆಯಲ್ಲಿ ಅದು ಗೊತ್ತಾಗಿದೆ. ಅದಕ್ಕೆ ಬಿಜೆಪಿ ಈಗ ಸಂವಿಧಾನದ ಬಗ್ಗೆ ಮಾತನಾಡುತ್ತಿದೆ ಎಂದು ವ್ಯಂಗ್ಯವಾಡಿದ್ದಾರೆ.
Advertisement
ದೇಶದಲ್ಲಿ ಜಾತಿ ಗಣತಿ ಅತಿ ಅವಶ್ಯಕ ಇದೆ. ಸರ್ಕಾರಿ ಸಂಸ್ಥೆಗಳನ್ನು ಮಾರಲಾಗುತ್ತಿದೆ. ಓರ್ವ ವ್ಯಕ್ತಿಗೆ ಎಲ್ಲವನ್ನು ನೀಡಲಾಗುತ್ತಿದೆ. ಇಂದಿರಾ ಗಾಂಧಿ ಬ್ಯಾಂಕ್‌ಗಳನ್ನು ರಾಷ್ಟ್ರೀಕರಣ ಮಾಡಿದ್ರು. ಮಹಿಳಾ ಮೀಸಲಾತಿಯನ್ನು ಯಾಕೆ ಅನುಷ್ಠಾನ ಮಾಡುತ್ತಿಲ್ಲ. ಈಗಲೇ ಯಾಕೆ ರಾಜಕೀಯದಲ್ಲಿ ಮೀಸಲಾತಿ ನೀಡುತ್ತಿಲ್ಲ. ಇನ್ನು 10 ವರ್ಷಗಳು ಯಾಕೆ ಕಾಯಬೇಕು. ಈಗಲೂ ನೆಹರೂ ಏನು ಮಾಡಿದ್ರು ಅನ್ನೋ ಚರ್ಚೆ ಮಾಡಲಾಗುತ್ತೆ. ಈಗಲೂ ನೆಹರೂ ಅವ್ರೆ ಬಂದು ಮಾಡಬೇಕಾ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ರಷ್ಯನ್ ಭಾಷೆಯಲ್ಲಿ ಆರ್‌ಬಿಐಗೆ ಬಾಂಬ್ ಬೆದರಿಕೆ
Advertisement
ದೇಶದ ರೈತರು ಸಂಕಷ್ಟದಲ್ಲಿದ್ದಾರೆ. ದೇಶದ ಕಾನೂನುಗಳು ಉದ್ಯೋಗಪತಿಗಳಿಗೆ ಮಾಡಲಾಗಿದೆ. ಓರ್ವ ವ್ಯಕ್ತಿಗಾಗಿ ಎಲ್ಲವನ್ನು ಬದಲಿಸಲಾಗುತ್ತಿದೆ. ಅದಾನಿಗೆ ಎಲ್ಲಾ ಕೋಲ್ಡ್ ಸ್ಟೋರೇಜ್ ಕೊಡಲಾಗಿದೆ. ಎಲ್ಲಾ ಅವಕಾಶಗಳನ್ನು ಓರ್ವ ವ್ಯಕ್ತಿಗೆ ನೀಡಲಾಗುತ್ತಿದೆ. ಬಡವರು ಬಡವರಾಗಿದ್ದಾರೆ, ಶ್ರೀಮಂತರು ಶ್ರೀಮಂತರಾಗೇ ಹೋಗುತ್ತಿದ್ದಾರೆ. ಹಿಂದೆ ಏನ್ ಮಾಡಿದ್ರು ಅನ್ನೋ ಚರ್ಚೆ ಮಾಡ್ತಾರೆ. ಬ್ಯಾಲೆಟ್ ಪೇಪರ್‌ನಲ್ಲಿಯೇ ಚುನಾವಣೆ ಮಾಡಿ. ಹಾಲು, ನೀರು ಏನ್ ಅನ್ನೋದು ಗೊತ್ತಾಗುತ್ತೆ. ಜನರು ಸಾಂವಿಧಾನಿಕವಾಗಿ ಆಯ್ಕೆ ಮಾಡಿದ ಸರ್ಕಾರ ಕೆಡುವುದು ಸರಿಯೇ? ಇದು ಸಂವಿಧಾನ ನಡೆಯೇ ಎಂದು ಕೇಳಿದ್ದಾರೆ.
ಬಹಳಷ್ಟು ಜನರು ಇಲ್ಲಿ ಕೂರುತ್ತಿದ್ದರು. ಈಗ ಅಲ್ಲಿ ಕೂರುತ್ತಿದ್ದಾರೆ. ವಾಷಿಂಗ್ ಮಷಿನ್‌ನಲ್ಲಿ ತೊಳೆದ ಮೇಲೆ ಅವರು ಅಲ್ಲೂ ಕಾಣ್ತಿಲ್ಲ ಎಂದು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ನಾಯಕರ ಬಗ್ಗೆ ವ್ಯಂಗ್ಯವಾಡಿದ್ದಾರೆ. ಭಯದ ವಾತಾವರಣ ನಿರ್ಮಾಣವಾಗುತ್ತಿದೆ. ಸತ್ಯ ಮಾತನಾಡುವವರನ್ನು ಬೆದರಿಸಲಾಗುತ್ತಿದೆ. ಇಡಿ, ಸಿಬಿಐ, ಐಟಿ ಮೂಲಕ ಸುಳ್ಳು ಕೇಸ್ ದಾಖಲಿಸಲಾಗುತ್ತಿದೆ. ವಿರೋಧ ಪಕ್ಷದ ನಾಯಕರನ್ನು ಜೈಲಿಗೆ ಕಳುಹಿಸಲಾಗುತ್ತಿದೆ. ಗಾಂಧಿ ವಿಚಾರಧಾರೆಯಲ್ಲಿ ಸ್ವಾತಂತ್ರ್ಯ ಹೋರಾಟ ಮಾಡಿದವರು ವಿರೋಧ ಪಕ್ಷದಲ್ಲಿದ್ದಾರೆ. ಭಯದಿಂದ ಬ್ರಿಟಿಷರ ಜೊತೆಗೆ ಸೇರಿದವರು ಆಡಳಿತದಲ್ಲಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಆಲಮಟ್ಟಿ – ಯಾದಗಿರಿ ರೈಲು ಮಾರ್ಗ ಯೋಜನೆ ಅನುಮೋದನೆಗೆ ಮನವಿ
ಈ ದೇಶದ ಭಯ ಅಲ್ಲ, ಸಾಹಸ ಮತ್ತು ಸಂಘರ್ಷದಿಂದಾಗಿದೆ. ಸಂವಿಧಾನ ಈ ಸಂಘರ್ಷಕ್ಕೆ ಶಕ್ತಿ ಕೊಡುತ್ತದೆ. ಈ ದೇಶ ಭಯದಿಂದಲ್ಲ, ಸಾಹಸದಿಂದಲೇ ನಡೆಯುತ್ತದೆ. ಭಯಭೀತರ ಕೈಯಲ್ಲಿ ಈ ದೇಶ ಹೆಚ್ಚು ದಿನ ಇರುವುದಿಲ್ಲ. ಈ ದೇಶ ಹೋರಾಡುತ್ತದೆ, ಸತ್ಯವನ್ನು ಕೇಳುತ್ತದೆ ಎಂದು ತಿಳಿಸಿದ್ದಾರೆ.