ನವದೆಹಲಿ: ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗುತ್ತಿದಂತೆ ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ವಾದ್ರಾ ಚುನಾವಣಾ ಪ್ರಚಾರ ಕಾರ್ಯವನ್ನು ಚುರುಕುಗೊಳಿಸಿದ್ದು, ಸುಮಾರು 140 ಕಿಮೀ ದೂರದ ಮೂರು ದಿನಗಳ ಗಂಗಾ ಯಾತ್ರೆಯನ್ನು ಆರಂಭಿಸಿದ್ದಾರೆ.
ಇದೇ ವೇಳೆ ಸಾಮಾಜಿಕ ಜಾಲತಾಣದಲ್ಲಿ ಸಾರ್ವಜನಿಕರೊಂದಿಗೆ ಉತ್ತಮ ಸಂಪರ್ಕ ಸಾಧಿಸಲು ಉದ್ದೇಶಿಸಿರುವ ಅವರು, ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ಜನಿಸಿದ ಕೊಠಡಿಯ ಫೋಟೋವನ್ನು ಟ್ವೀಟ್ ಮಾಡಿದ್ದಾರೆ. ಸ್ವರಾಜ್ ಭವನ್ ನಲ್ಲಿ ಇರುವ ವೇಳೆ ನಾನು ಅಜ್ಜಿ ಜನಿಸಿದ ಈ ಕೊಠಡಿಯನ್ನು ನೋಡುತ್ತೇನೆ. ಇದೇ ಕೊಠಡಿಯಲ್ಲಿ ಅವರು ನನಗೆ ಕಥೆ ಹೇಳಿ ಮಲಗಿಸುತ್ತಿದ್ದರು. ಅವರು ನನಗೆ ಯಾವಾಗಲು ಧೈರ್ಯವಾಗಿರು, ಎಲ್ಲವೂ ಒಳ್ಳೆಯದಾಗುತ್ತದೆ ಎಂದು ಹೇಳುತ್ತಿದ್ದರು ಎಂದು ಟ್ವೀಟ್‍ನಲ್ಲಿ ಬರೆದುಕೊಂಡಿದ್ದಾರೆ.
Advertisement
स्वराज भवन के आँगन में बैठे हुए वह कमरा दिख रहा है जहाँ मेरी दादी का जन्म हुआ। रात को सुलाते हुए दादी मुझे जोन ऑफ आर्क की कहानी सुनाया करती थीं। आज भी उनके शब्द दिल में गूँजते हैं। कहती थीं- निडर बनो और सब अच्छा होगा। pic.twitter.com/q8Ecdb2RsL
— Priyanka Gandhi Vadra (@priyankagandhi) March 17, 2019
Advertisement
ಪ್ರಿಯಾಂಕ ಗಾಂಧಿ ಅವರ ಈ ಟ್ವೀಟ್ ಅನ್ನು 6.5 ಸಾವಿರ ಮಂದಿ ರೀ ಟ್ವೀಟ್ ಮಾಡಿದ್ದಾರೆ. 26 ಸಾವಿರ ಮಂದಿ ಲೈಕ್ ಮಾಡಿದ್ದಾರೆ. ಸದ್ಯ ಪ್ರಿಯಾಂಕ ಅವರು ಉತ್ತರ ಪ್ರದೇಶದ ಪ್ರವಾಸದಲ್ಲಿ ಇರಲಿದ್ದು, ನಾಲ್ಕು ದಿನಗಳ ಕಾಲ ಗಂಗಾ ನದಿಯ ದಡದ ಯಾತ್ರೆಯಲ್ಲಿ ಭಾಗವಹಿಸಿದ್ದಾರೆ. ಸುಮಾರು 140 ಕಿಮೀ ದೂರದ ಹಾದಿಯಾಗಿದ್ದು, 3 ದಿನಗಳ ಅವಧಿಯಲ್ಲಿ ಕ್ರಮಿಸಲಿದ್ದಾರೆ.
Advertisement
ಅಂದಹಾಗೇ 1917 ನವೆಂಬರ್ 19 ರಂದು ಇಂದಿರಾ ಗಾಂಧಿ ಅವರು ಸ್ವರಾಜ್ ಭವನದಲ್ಲಿ ಜನಿಸಿದ್ದರು. ಅಲ್ಲದೇ ತಮ್ಮ ಪ್ರಾರಂಭಿಕ ಜೀವನವನ್ನು ಅಲ್ಲೆ ಕಳೆದಿದ್ದರು. ಈ ಕೊಠಡಿಯಲ್ಲಿ ಬಾಲ್ಯದ ದಿನಗಳಲ್ಲಿ ಇಂದಿರಾ ಗಾಂಧಿ ಅವರು ಮಹಾತ್ಮ ಗಾಂಧೀಜಿ ಅವರೊಂದಿಗೆ ಇರುವ ಫೋಟೋವನ್ನು ಕಾಣಬಹುದಾಗಿದೆ.
Advertisement
जाति-वर्ण की संकीर्णता, भेदभाव से ऊपर उठकर तीर्थ स्थान सभी को एक समान रूप से गले लगाकर विश्वधर्म, मानवता का संदेश देते हैं।
त्रिवेणी संगम, प्रयागराज। pic.twitter.com/a3IUZknZPr
— UP Congress (@INCUttarPradesh) March 18, 2019