ನವದೆಹಲಿ: ಉತ್ತರ ಪ್ರದೇಶದಲ್ಲಿ ಉದ್ಯೋಗ ಹಾಗೂ ಶಿಕ್ಷಣದ ಸಮಸ್ಯೆಯ ಕುರಿತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ವಾಗ್ದಾಳಿ ನಡೆಸಿದರು.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಉತ್ತರ ಪ್ರದೇಶದಲ್ಲಿ ಕಳೆದ ಐದು ವರ್ಷಗಳಲ್ಲಿ 16.5 ಲಕ್ಷ ಯುವಕರು ಉದ್ಯೋಗ ಕಳೆದುಕೊಂಡಿದ್ದಾರೆ ಹಾಗೂ ನಾಲ್ಕು ಕೋಟಿ ಜನರು ಉದ್ಯೋಗದ ಭರವಸೆಯನ್ನು ಕಳೆದುಕೊಂಡಿದ್ದಾರೆ. ಆದರೆ ಈ ಬಗ್ಗೆ ಉತ್ತರಪ್ರದೇಶದಲ್ಲಿ ಯಾರು ಮಾತನಾಡುವುದಿಲ್ಲ. ಏಕೆಂದರೆ ಈ ಬಗ್ಗೆ ಯಾರು ಮಾತನಾಡುತ್ತಿಲ್ಲ ಎಂದು ಯೋಗಿ ಆದಿತ್ಯನಾಥ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
Advertisement
..@myogiadityanath जी की सरकार ने 5 सालों में उप्र के शिक्षा बजट में भारी कटौती की।
बजट ज्यादा मिलता तो युवाओं को नए विवि, इंटरनेट, छात्रवृत्तियां, लाइब्रेरी व हॉस्टल मिलते
युवाओं यही इस चुनाव का असली एजेंडा है। इस पर सवाल पूछिए व जो भटकाए, उसको वोट की ताकत से करारा जवाब दीजिए pic.twitter.com/yMZCfJqyMW
— Priyanka Gandhi Vadra (@priyankagandhi) January 18, 2022
Advertisement
ಯೋಗಿ ಸರ್ಕಾರವು ಈ 5 ವರ್ಷದಲ್ಲಿ ಬಜೆಟ್‍ನಲ್ಲಿ ಶಿಕ್ಷಣಕ್ಕೆ ಅಧಿಕ ಒತ್ತನ್ನು ನೀಡಿಲ್ಲ. ಬಜೆಟ್ ಹೆಚ್ಚು ಇದ್ದರೆ, ಯುವಕರು ಉನ್ನತ ವಿಶ್ವವಿದ್ಯಾಲಯಗಳು, ಇಂಟರ್ ನೆಟ್, ವಿದ್ಯಾರ್ಥಿ ವೇತನಗಳು, ಗ್ರಂಥಾಲಯಗಳು ಮತ್ತು ಹಾಸ್ಟೆಲ್‍ಗಳನ್ನು ಬಳಸಿಕೊಳ್ಳಬಹುದಾಗಿತ್ತು. ಈ ರೀತಿ ವಂಚನೆ ಮಾಡಿದ ಸರ್ಕಾರಕ್ಕೆ ನಿಮ್ಮ ಮತದ ಮೂಲಕ ಉತ್ತರ ಕೊಡಬಹುದು ಎಂದು ಯುವಕರಲ್ಲಿ ಮನವಿ ಮಾಡಿಕೊಂಡರು. ಇದನ್ನೂ ಓದಿ: ಕ್ಯೂನಲ್ಲಿ ನಿಂತೆ 16 ಸಾವಿರ ರೂಪಾಯಿ ಸಂಪಾದಿಸುತ್ತಾನೆ
Advertisement
उत्तरप्रदेश में पिछले 5 सालों में 16.5 लाख युवाओं की नौकरी छिन गई। 4 करोड़ लोगों ने हताश होकर नौकरी की आशा छोड़ दी।
लेकिन @myogiadityanath जी इस पर न बात करते हैं, न ट्वीट। क्योंकि उन्हें मालूम है कि पर्दा जो उठ गया तो राज खुल जाएगा।
युवाओं आप रोजगार के एजेंडे पर डटे रहना। pic.twitter.com/IW5hY2Fcym
— Priyanka Gandhi Vadra (@priyankagandhi) January 18, 2022
Advertisement
ಪಂಚರಾಜ್ಯಗಳ ಚುನಾವಣೆಗೆ ಕೆಲವೇ ದಿನ ಬಾಕಿ ಇದ್ದು, ಎಲ್ಲಾ ರಾಜಕೀಯ ಪಕ್ಷಗಳು ತಮ್ಮ ಪ್ರಚಾರವನ್ನು ಪ್ರಾರಂಭಿಸಿದೆ. ಉತ್ತರ ಪ್ರದೇಶದಲ್ಲಿ ಫೆ.10 ರಿಂದ ಮಾ.7ರವರೆಗೆ ಏಳು ಹಂತಗಳಲ್ಲಿ ಮತದಾನ ನಡೆಯಲಿದೆ. ಮಾ. 10ರಂದು ಫಲಿತಾಂಶ ಹೊರಬೀಳಲಿದೆ. ಇದನ್ನೂ ಓದಿ: ಯೋಗಿ ಆದಿತ್ಯನಾಥ್ ವಿರುದ್ಧ ಆಕ್ಷೇಪಾರ್ಹ ಪೋಸ್ಟ್ – 17ರ ಹುಡುಗ ಅರೆಸ್ಟ್