ಲಕ್ನೋ: ಪ್ರಿಯಾಂಕಾ ಗಾಂಧಿ ಕಸ ಗುಡಿಸುತ್ತಿರುವ ವಿಡಿಯೋ ವೈರಲ್ ಆಗಿತ್ತು. ಈ ವಿಚಾರವಾಗಿ ಮಾತನಾಡಿದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥ್ ಅವರು ಅದಕ್ಕೆ ಲಾಯಕ್ಕು ಎಂದು ಹೇಳಿದ್ದಾರೆ.
Advertisement
ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ(Priyanaka Gandhi) ಅವರು ಸೀತಾಪುರ(Seethapura) ಅತಿಥಿ ಗೃಹದಲ್ಲಿ ಕಸ ಗುಡಿಸುತ್ತಿರುವ ದೃಶ್ಯ ವೈರಲ್ ಆಗಿತ್ತು, ಜನ್‍ತಾ ಉನ್ ಕೋ ಉಸೀ ಲಾಯಕ್ ಬನಾನ ಚಾಹ್‍ತೀ ಹೈ (ಜನರು ಅವರನ್ನು ಅದಕ್ಕೆ ಲಾಯಕ್ಕಾಗಿಸಲು ಬಯಸುತ್ತಾರೆ)ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್(Uttar Pradesh CM Yogi Adithyanath) ಹೇಳಿದ್ದಾರೆ. ಗೆಸ್ಟ್ ಹೌಸ್‌ನಲ್ಲಿ ಕಸ ಗುಡಿಸುತ್ತಿರೋ ಪ್ರಿಯಾಂಕಾ ಗಾಂಧಿ ವೀಡಿಯೋ ವೈರಲ್
Advertisement
सीतापुर पुलिस लाइन के अंदर महात्मा गांधी के दिखाए रास्ते पर श्रीमती @priyankagandhi जी ने श्रमदान के साथ शुरू किया अनशन,
जब तक अन्नदाताओं के हत्यारों की गिरफ्तारी नही तब तक ये आंदोलन सतत जारी रहेगा.. pic.twitter.com/drJUU0dTC3
— Srinivas BV (@srinivasiyc) October 4, 2021
Advertisement
ಲಖಿಂಪುರ್ ಖೇರಿಯಲ್ಲಿ ಕೆಲವು ದಿನಗಳ ಹಿಂದೆ ನಡೆದ ಹಿಂಸಾಚಾರದಲ್ಲಿ ಎಂಟು ಜನರು ಸಾವನ್ನಪ್ಪಿದ್ದರು7. ಅಲ್ಲಿಗೆ ಭೇಟಿ ನೀಡಲು ಪ್ರಿಯಾಂಕಾ ಹೋಗುತ್ತಿದ್ದ ವೇಳೆ ಪೊಲೀಸರು ತಡೆದಿದ್ದರು. ನಂತರ ಪೊಲೀಸರು ಪ್ರಿಯಾಂಕಾ ಅವರನ್ನು ವಶಕ್ಕೆ ಪಡೆದುಕೊಂಡಿದ್ದರು. ಈ ವೇಳೆ ಪ್ರಿಯಾಂಕಾ ಅವರು ಸೀತಾಪುರ ಅತಿಥಿಗೃಹದಲ್ಲಿ ನೆಲವನ್ನು ಗುಡಿಸಿದ್ದರು. ದನ್ನೂ ಓದಿ: ಹತ್ಯಾಕಾಂಡದ ನಂತರವೂ ಮೌನವಾಗಿರುವವರು ಈಗಾಗಲೇ ಸತ್ತಿದ್ದಾರೆ: ರಾಹುಲ್ ಗಾಂಧಿ
Advertisement
ಪ್ರಿಯಾಂಕಾ ಗಾಂಧಿಯ ಈ ನಡೆಯನ್ನು ಹೊಗಳುತ್ತಾ, ಕಾಂಗ್ರೆಸ್ 42 ಸೆಕೆಂಡುಗಳ ವೀಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ, ಪೋಸ್ಟ್ ಮಾಡಿದ್ದು, ಬ್ರೀಟಿಷರು ಆಡಳಿತದ ವಿರುದ್ಧ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರು ಅಹಿಂಸಾ ಸತ್ಯಾಗ್ರಹ ನಡೆಸಿದಾಗ ತೋರಿಸಿಕೊಟ್ಟ ದಾರಿಯಲ್ಲಿ ತಮ್ಮ ನಾಯಕಿ ನಡೆಯುತ್ತಿದ್ದಾರೆ ಎಂದು ಹೇಳಿ ವೀಡಿಯೋ ವನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿ ಬಿಟ್ಟಿದ್ದರು. ಈ ವಿಚಾರವಾಗಿ ಉತ್ತರಪ್ರದೇಶ ಮುಖ್ಯಂತ್ರಿ ಕಾಮೆಂಟ್ ಮಾಡಿದ್ದಾರೆ. ಇದನ್ನೂ ಓದಿ: ನೀವು ಹತ್ಯೆ ಮಾಡಿದ ಜನರಿಗಿಂತ ನಾನು ಮುಖ್ಯ ಅಲ್ಲ: ಪ್ರಿಯಾಂಕಾ ಗಾಂಧಿ