ನವದೆಹಲಿ: ಉತ್ತರಪ್ರದೇಶ ಮಹಿಳೆಯರು ಆಭರಣ ಧರಿಸಿ ಮಧ್ಯರಾತ್ರಿ ಎಲ್ಲಿಗೆ ಬೇಕಾದರೂ ತೆರಳಬಹುದು ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆ ವಿರುದ್ಧ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಕಿಡಿಕಾರಿದ್ದಾರೆ.
Advertisement
ಪ್ರತಿನಿತ್ಯ ಯಾವ ಸಂಕಷ್ಟ ಎದುರಿಸಬೇಕು ಎಂಬುದು ಉತ್ತರ ಪ್ರದೇಶದ ಮಹಿಳೆಯರಿಗೆ ಮಾತ್ರ ಗೊತ್ತು ಎಂದಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಪ್ರಿಯಾಂಕಾ, ದೇಶದ ಗೃಹ ಸಚಿವರು ಆಭರಣಗಳನ್ನು ಧರಿಸುತ್ತಾರೆ ಎಂದು ಹೇಳುತ್ತಾರೆ, ಆದರೆ ಅವರು ಪ್ರತಿದಿನ ಯಾವ ರೀತಿಯ ವಿಷಯಗಳನ್ನು ಎದುರಿಸಬೇಕೆಂದು ಉತ್ತರಪ್ರದೇಶ ಮಹಿಳೆಯರಿಗೆ ಮಾತ್ರ ತಿಳಿದಿದೆ ಎಂದು ಟ್ವೀಟ್‍ಮಾಡಿ ವಾಗ್ದಾಳಿ ಮಾಡಿದ್ದಾರೆ. ಇದನ್ನೂ ಓದಿ: ಕಂಗನಾಗೆ ನೀಡಿರುವ ಪದ್ಮಶ್ರೀ ಪ್ರಶಸ್ತಿ ವಾಪಸ್ ಪಡೆಯುವಂತೆ ನವಾಬ್ ಮಲ್ಲಿಕ್ ಒತ್ತಾಯ
Advertisement
देश के गृहमंत्री जी “गहने लादकर निकलने” वाला जुमला देते हैं, लेकिन ये तो उप्र की महिलाओं को ही पता है कि उन्हें रोज किस तरह की चीजों से जूझना पड़ता है।
इसलिए ‘लड़की हूं लड़ सकती हूं’ जरूरी है। ताकि राजनीति में व सुरक्षा से जुड़ी नीतियां बनाने में महिलाओं की भागीदारी बढ़े। pic.twitter.com/3ck3WUEKBH
— Priyanka Gandhi Vadra (@priyankagandhi) November 13, 2021
Advertisement
ಹೀಗಾಗಿಯೇ ಲಡ್ಕಿ ಹೂಂ, ಲಢ್ ಸಕ್ತಿ ಹೂಂ ಬೇಕು. ರಾಜಕೀಯದಲ್ಲಿ ಮತ್ತು ಭದ್ರತೆಗೆ ಸಂಬಂಧಿಸಿದ ನೀತಿಗಳನ್ನು ರೂಪಿಸುವಲ್ಲಿ ಮಹಿಳೆಯರ ಭಾಗವಹಿಸುವಿಕೆ ಮುಖ್ಯವಾಗಿದೆ ಎಂದು ಹೇಳಿದ್ದು, ಕಾನ್ಪುರದಲ್ಲಿ ಮೂವರು ಮಹಿಳೆಯರ ಸರ ಅಪಹರಣದ ಬಗ್ಗೆ ಪ್ರಿಯಾಂಕಾ ಟ್ವಿಟ್ಟರ್ ನಲ್ಲಿ ಮಾಧ್ಯಮ ವರದಿಯನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ನನ್ನ ತಪ್ಪು ಸಾಬೀತಾದರೆ ಪದ್ಮಶ್ರೀ ಹಿಂದಿರುಗಿಸುವೆ: ಕಂಗನಾ ರಣಾವತ್