ಲಕ್ನೋ: ಪೊಲೀಸರ ವಶದಲ್ಲಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರು ಗೆಸ್ಟ್ ಹೌಸ್‌ನಲ್ಲಿ ಕಸ ಗುಡಿಸುತ್ತಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಪೊಲೀಸರ ವಶದಲ್ಲಿರುವ ಪ್ರಿಯಾಂಕಾ ಅವರು ಸದ್ಯ ಸೀತಾಪುರದ ಅತಿಥಿಗೃಹದಲ್ಲಿದ್ದು, ಅಲ್ಲಿ ಅವರು ಕಸ ಗುಡಿಸುತ್ತಿದ್ದಾರೆ. ಈ ವೀಡಿಯೋವನ್ನು ಕಾಂಗ್ರೆಸ್ ಯುವ ಘಟಕದ ರಾಷ್ಟ್ರೀಯ ಅಧ್ಯಕ್ಷ ಶ್ರೀನಿವಾಸ್ ಬಿವಿ ಟ್ವೀಟ್ ಮಾಡಿದ್ದಾರೆ. ಸೀತಾಪುರ ಪೊಲೀಸ್ ವಶದಲ್ಲಿರುವ ಪ್ರಿಯಾಂಕಾ ಅವರು, ಗಾಂಧೀಜಿ ಅವರ ರ್ಮಾಗವನ್ನು ಅನುಸರಿಸುತ್ತಿದ್ದಾರೆ. ಶ್ರಮದಾನ ಮಾಡುವ ಮೂಲಕವಾಗಿ ಉಪವಾಸವನ್ನು ಆರಂಭಿಸಿದ್ದಾರೆ. ಅನ್ನದಾತರ ಸಾವಿಗೆ ಕಾರಣವಾಗಿರುವ ಕೊಲೆಗಾರರನ್ನು ಬಂಧಿಸುವವರೆಗೂ ಈ ಚಳುವಳಿ ಮುಂದುವರಿಯುತ್ತದೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಹತ್ಯಾಕಾಂಡದ ನಂತರವೂ ಮೌನವಾಗಿರುವವರು ಈಗಾಗಲೇ ಸತ್ತಿದ್ದಾರೆ: ರಾಹುಲ್ ಗಾಂಧಿ
सीतापुर पुलिस लाइन के अंदर महात्मा गांधी के दिखाए रास्ते पर श्रीमती @priyankagandhi जी ने श्रमदान के साथ शुरू किया अनशन,
जब तक अन्नदाताओं के हत्यारों की गिरफ्तारी नही तब तक ये आंदोलन सतत जारी रहेगा.. pic.twitter.com/drJUU0dTC3
— Srinivas BV (@srinivasiyc) October 4, 2021
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಇಂದು ಬೆಳಗ್ಗೆ ಉತ್ತರಪ್ರದೇಶದ ಸೀತಾಪುರ ಜಿಲ್ಲೆಯ ಹರ್‍ಗಾಂವ್ ನಲ್ಲಿ ಬಂಧಿಸಲಾಗಿದೆ. ಲಖಿಂಪುರ್ ಖೇರಿಯಲ್ಲಿ ಭಾನುವಾರ ನಡೆದ ಹಿಂಸಾಚಾರದಲ್ಲಿ ಎಂಟು ಜನರು ಸಾವನ್ನಪ್ಪಿದ್ದು ಅಲ್ಲಿಗೆ ಭೇಟಿ ನೀಡಲು ಪ್ರಿಯಾಂಕಾ ಹೋಗುತ್ತಿದ್ದ ವೇಳೆ ಪೊಲೀಸರು ತಡೆದಿದ್ದಾರೆ. ಭಾನುವಾರದ ಘಟನೆಯ ನಂತರ ಲಖಿಂಪುರ್ ಖೇರಿಗೆ ಹೋಗುತ್ತಿರುವ ಹಲವಾರು ವಿರೋಧ ಪಕ್ಷದ ನಾಯಕರನ್ನು ತಡೆಯಲಾಗಿದೆ. ಇದನ್ನೂ ಓದಿ: ನೀವು ಹತ್ಯೆ ಮಾಡಿದ ಜನರಿಗಿಂತ ನಾನು ಮುಖ್ಯ ಅಲ್ಲ: ಪ್ರಿಯಾಂಕಾ ಗಾಂಧಿ
Always remember!!
Who stood with the farmers against the state-sponsored massacre in Lakhimpur and who stood against them. Period#लखीमपुर_किसान_नरसंहार#KhooniDarpokBJP pic.twitter.com/faXNrQHV8H
— Srinivas BV (@srinivasiyc) October 4, 2021
ಪ್ರಿಯಾಂಕಾ ಗಾಂಧಿ ಲಕ್ನೋಗೆ ಭೇಟಿ ನೀಡಿದಾಗ, ಆಕೆಯ ಬೆಂಗಾವಲು ವಾಹನಕ್ಕೆ ತಡೆಯೊಡ್ಡಲಾಯಿತು. ಪ್ರಿಯಾಂಕಾ ಲಕ್ನೋಗೆ ಭೇಟಿ ನೀಡಿದಾಗ ತಂಗಿದ್ದ ಕೌಲ್ ಹೌಸ್ ಅನ್ನು ಉತ್ತರ ಪ್ರದೇಶ ಪೊಲೀಸರು ಸುತ್ತುವರಿದರು. ಪ್ರಿಯಾಂಕಾ ಪೊಲೀಸರ ಕಣ್ತಪ್ಪಿಸಿ ತನ್ನ ನಿವಾಸದಿಂದ ಪಕ್ಕದ ಗೇಟ್ ಮೂಲಕ ಹೊರ ಬಂದು ಕಾರು ಹತ್ತಿದ್ದರು. ಕಾಂಗ್ರೆಸ್ ನಾಯಕ ದೀಪೇಂದ್ರ ಸಿಂಗ್ ಹೂಡಾ, ಪ್ರಿಯಾಂಕಾ ಅವರನ್ನು ಕಾರಿನಲ್ಲಿ ಲಖಿಂಪುರ್ ಖೇರಿಗೆ ಕರೆದೊಯ್ದಿದ್ದಾರೆ. ವಶದಲ್ಲಿರುವ ಪ್ರಿಯಾಂಕಾ ಅವರನ್ನು ಉತ್ತರ ಪ್ರದೇಶದ ಪೊಲೀಸರು ಗೃಹ ಬಂಧನದಲ್ಲಿ ಇರಿಸಿದ್ದಾರೆ.