-ಬೇರೆಯವ್ರ ಸಾಧನೆಯನ್ನ ವ್ಯಂಗ್ಯ ಮಾಡ್ಬೇಡಿ
ನವದೆಹಲಿ: ಬಿಜೆಪಿ ನಾಯಕರು ಮತ್ತು ಕೇಂದ್ರ ಸಚಿವರು ಕಾಮಿಡಿ ಮಾಡೋದನ್ನು ಬಿಟ್ಟು ದೇಶದ ಆರ್ಥಿಕ ಪರಿಸ್ಥಿತಿ ಮತ್ತು ಸುಧಾರಣೆಯತ್ತ ಗಮನ ನೀಡಬೇಕೆಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಟ್ವಿಟ್ಟರ್ ಮೂಲಕ ಚಾಟಿ ಬೀಸಿದ್ದಾರೆ. ಆಟೋಮೊಬೈಲ್ ನಿಧಾನಗತಿಯ ಬೆಳವಣಿಗೆಯ ಲೇಖನ ಶೇರ್ ಮಾಡಿಕೊಳ್ಳುವ ಮೂಲಕ ಬಿಜೆಪಿ ಸರ್ಕಾರ ದೇಶದ ಆರ್ಥಿಕ ಪರಿಸ್ಥಿತಿಯತ್ತ ತಮ್ಮ ಗಮನ ನೀಡಬೇಕೆಂದು ಆಗ್ರಹಿಸಿದ್ದಾರೆ.
Advertisement
ಕೇಂದ್ರ ರೈಲ್ವೇ ಸಚಿವ ಪಿಯೂಷ್ ಗೋಯಲ್, ನೊಬೆಲ್ ಪ್ರಶಸ್ತಿ ಪುರಸ್ಕøತ ಅಭಿಜಿತ್ ಬ್ಯಾನರ್ಜಿ ಅವರಿಗೆ ಶುಭಾಶಯ ತಿಳಿಸುವಾಗ ಅವರು ಎಡಪಂಥಿಯ ಅರ್ಥಶಾಸ್ತ್ರಜ್ಞೆ ಎಂದಿದ್ದರು. ಸಚಿವರ ಹೇಳಿಕೆಯನ್ನು ಖಂಡಿಸಿರುವ ಪ್ರಿಯಾಂಕ ಗಾಂಧಿ, ಬಿಜೆಪಿ ನಾಯಕರು ತಮಗೆ ದೊರೆತಿರುವ ಕೆಲಸ ಮಾಡೋದನ್ನು ಬಿಟ್ಟು, ಬೇರೆಯವರ ಬಗ್ಗೆ ಮಾತನಾಡುತ್ತಾ ಕಾಲಹರಣ ಮಾಡುತ್ತಿದ್ದಾರೆ. ತಮ್ಮ ಕೆಲಸವನ್ನು ನಿಷ್ಟೆ ಮತ್ತು ಪ್ರಾಮಾಣಿಕತೆಯಿಂದ ಮಾಡಿದ್ದಕ್ಕೆ ಅಭಿಜಿತ್ ಬ್ಯಾನರ್ಜಿ ನೊಬೆಲ್ ಪ್ರಶಸ್ತಿ ಪಡೆದುಕೊಂಡರು. ದೇಶದ ಅರ್ಥವ್ಯವಸ್ಥೆ ಕುಸಿಯುತ್ತಿದ್ದು, ಅದನ್ನು ಸರಿದೂಗಿಸುವ ಕೆಲಸವನ್ನು ಬಿಜೆಪಿ ಮರೆತು ಕಾಮಿಡಿ ಸರ್ಕಸ್ ಶುರು ಮಾಡಿಕೊಂಡಿದೆ ಎಂದು ವ್ಯಂಗ್ಯ ಮಾಡಿದ್ದಾರೆ.
Advertisement
ನ್ಯಾಯ ಯೋಜನೆ:
ಲೋಕಸಭಾ ಚುನಾವಣೆ ವೇಳೆ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ‘ನ್ಯಾಯ’ ಯೋಜನೆಯನ್ನು ಘೋಷಿಸಿತ್ತು. ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಸಹ ನ್ಯಾಯ ಯೋಜನೆಯನ್ನು ಅಸ್ತ್ರವನ್ನಾಗಿಸಿಕೊಂಡು ಭರ್ಜರಿ ಪ್ರಚಾರ ನಡೆಸಿತ್ತು. ಅಂದು ನ್ಯಾಯ ಯೋಜನೆಗೆ ಸಂಬಂಧಿಸಿದಂತೆ ಅರ್ಥಶಾಸ್ತ್ರಜ್ಞರಾದ ಅಭಿಜಿತ್ ಬ್ಯಾನರ್ಜಿಯವರ ಸಲಹೆಯನ್ನು ಪಡೆದುಕೊಂಡಿತ್ತು.
Advertisement
Advertisement
ಭಾರತದ ಮೂಲದವರಾಗಿರುವ ಅಭಿಜಿತ್ ಬ್ಯಾನರ್ಜಿ ಅವರಿಗೆ ನೊಬೆಲ್ ಪ್ರಶಸ್ತಿ ಲಭಿಸಿದೆ. ಅಂದು ಪಿಯೂಷ್ ಗೋಯಲ್ ಮಾಧ್ಯಮಗಳ ಜೊತೆ ಮಾತನಾಡುತ್ತಾ, ಪ್ರಶಸ್ತಿ ಸ್ವೀಕರಿಸಿರುವ ಅಭಿಜಿತ್ ಬ್ಯಾನರ್ಜಿಯವರಿಗೆ ಶುಭಾಶಯ ತಿಳಿಸುತ್ತೇನೆ. ಬ್ಯಾನರ್ಜಿ ಅವರು ಯಾವ ವಿಷಯಗಳನ್ನು ಪ್ರತಿನಿಧಿಸುತ್ತಾರೆ ಎಂಬ ವಿಚಾರ ಎಲ್ಲರಿಗೆ ತಿಳಿದಿದೆ. ಬ್ಯಾನರ್ಜಿ ಅವರು ಎಡಪಂಥೀಯ ಅರ್ಥಶಾಸ್ತ್ರಜ್ಞರಾಗಿದ್ದಾರೆ ಎಂದಿದ್ದರು.