ನವದೆಹಲಿ: ಎಲ್‍ಪಿಜಿ ಸಿಲಿಂಡರ್ ಕೊಡೋದು, ಟಾಯ್ಲೆಟ್ ಕಟ್ಟಿಸಿಕೊಡುವುದು ಮಹಿಳಾ ಸಬಲೀಕರಣ ಅಲ್ಲ ಎಂದು ಕಾಂಗ್ರೆಸ್‍ನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.
ಮುಂದಿನ ಉತ್ತರಪ್ರದೇಶ ಚುನಾವಣೆಗಾಗಿ ರಾಯ್ ಬರೇಲಿಯಲ್ಲಿ ನಡೆದ ಶಕ್ತಿ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಿಯಾಂಕಾ ಗಾಂಧಿ, ಮಹಿಳೆಯರ ಸ್ವಾಭಿಮಾನದಿಂದ ಬದುಕುವುದು ಹಾಗೂ ಎಲ್ಲಾ ತಾರತಮ್ಯಗಳ ವಿರುದ್ಧ ಹೋರಾಡೋದು ಮಹಿಳಾ ಸಬಲೀಕರಣವೇ ಹೊರತು, ಎಲ್‍ಪಿ ಮತ್ತು ಟಾಯ್ಲೆಟ್ ಕಟ್ಟೋದು ಅಲ್ಲ ಎಂದು ಆಡಳಿಯ ಪಕ್ಷದ ವಿರುದ್ಧವಾಗಿ ಕಿಡಿಕಾರಿದ್ದಾರೆ. ಇದನ್ನೂ ಓದಿ: ನಕಲಿ ದಾಖಲೆಯಿಂದ ರೈಲು ಇಂಜಿನ್ ಮಾರಾಟ ಮಾಡಿದ ಎಂಜಿನಿಯರ್
Advertisement
Advertisement
ಧರ್ಮದ ಹೆಸರಿನಲ್ಲಿ ಕೇಂದ್ರ ಸರ್ಕಾರ ರಾಜಕೀಯ ಮಾಡುತ್ತಿದೆ. ರಾಹುಲ್ ಗಾಂಧಿ ಹಿಂದು ಮತ್ತು ಹಿಂದುತ್ವದ ಕುರಿತಾಗಿ ಹೇಳಿರುವುದು ಸರಿ ಇದೆ. 2 ಪದಗಳ ನಡುವೆ ಇರುವ ವ್ಯತ್ಯಾಸದ ಕುರಿತಾಗಿ ರಾಹುಲ್ ಮಾತನಾಡಿದ್ದನು. ಹಿಂದುತ್ವ ಪ್ರೀತಿ ಮತ್ತು ಏಕತೆಯನ್ನು ಕಲಿಸುತ್ತದೆ. RSS ಮತ್ತು ಬಿಜೆಪಿ ಅವರು ಬಲಪಂಥೀಯರು ಆಗಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮಾಜಿ ಪತ್ನಿಗೆ 5516 ಕೋಟಿ ಜೀವನಾಂಶ ನೀಡುವಂತೆ ದುಬೈ ದೊರೆಗೆ ಹೈಕೋರ್ಟ್ ಆದೇಶ
Advertisement
Advertisement
ಮಹಿಳೆಯರ ಬಲವರ್ಧನೆಗೆ ಮೋದಿವ ಅವರ ನೇತೃತ್ವದ ಸರ್ಕಾರ ಯಾವುದೇ ಕೊಡುಗೆ ಕೊಟ್ಟಿಲ್ಲ. ಮುಂದಿನ ಚುನಾವಣೆಯಲ್ಲಿ ವೋಟ್ ನೀಡಬೇಕಾದ ಸಮಯದಲ್ಲಿ ಸರಿಯಾಗಿ ಯೋಚಿಸಿ ಎಂದು ಪ್ರಿಯಾಂಕಾ ಗಾಂಧಿ ಎಚ್ಚರಿಕೆಯ ಸೂಚನೆ ನೀಡಿದ್ದಾರೆ.