ಲಕ್ನೋ: ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಉತ್ತರ ಪ್ರದೇಶದ ಪೊಲೀಸರು ಇಂದು ಮುಂಜಾನೆ ವಶಕ್ಕೆ ಪಡೆದುಕೊಂಡಿದ್ದಾರೆ.
Advertisement
ಭಾನುವಾರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಅವರ ತಂದೆಯ ಊರು ಲಖಿಂಪುರ ಖೇರಿಯ ಟಿಕೂನಿಯಾ ಎಂಬಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮಕ್ಕೆ ಉತ್ತರ ಪ್ರದೇಶ ಉಪ ಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ಅವರು ಮುಖ್ಯ ಅತಿಥಿಯಾಗಿ ಆಗಮಿಸಿಬೇಕಿತ್ತು. ಆದರೆ ಕೃಷಿ ಕಾಯ್ದೆ ವಿರೋಧಿಸಿ ರೈತರು ಒಟ್ಟುಗೂಡಿ ಪ್ರತಿಭಟನೆ ನಡೆಸುವ ಮೂಲಕ ಕಾರನ್ನು ತಡೆದಿದ್ದಾರೆ. ಬಳಿಕ ಇದು ಹಿಂಸಾಚಾರ ಕೃತ್ಯಕ್ಕೆ ಪರಿವರ್ತನೆಗೊಂಡು ರೈತರು ಕಾರು ಹಾಗೂ ವಾಹನಗಳಿಗೆ ಬೆಂಕಿ ಹಚ್ಚಿದ್ದರು. ಇದನ್ನೂ ಓದಿ: ಡ್ರಗ್ಸ್ ಪಾರ್ಟಿ ಪ್ರಕರಣ – ಇಂದು ಆರ್ಯನ್ ಖಾನ್ ಜಾಮೀನು ಅರ್ಜಿ ಸಲ್ಲಿಕೆ
Advertisement
Advertisement
#UPDATE | Congress General Secretary Priyanka Gandhi Vadra along with party leader Deepender Singh Hooda will visit Lakhimpur Kheri tonight to meet the farmers pic.twitter.com/y5GoiCGWNv
— ANI UP (@ANINewsUP) October 3, 2021
Advertisement
ಈ ಹಿಂಸಾಚಾರ ಘಟನೆಯಲ್ಲಿ ಮೃತಪಟ್ಟ ನಾಲ್ಕು ರೈತರ ಕುಟುಂಬಗಳನ್ನು ಪ್ರಿಯಾಂಕ ಗಾಂಧಿ ಅವರು ಭೇಟಿ ಮಾಡಿದರು. ಈ ವೇಳೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಸೀತಾಪುರ ಪೊಲೀಸರು ಠಾಣೆಗೆ ಕರೆದೊಯ್ದಿದ್ದಾರೆ ಎಂದು ಕಾಂಗ್ರೆಸ್ ತನ್ನ ಟ್ವಿಟ್ಟರ್‍ನಲ್ಲಿ ವೀಡಿಯೋವನ್ನು ಶೇರ್ ಮಾಡಿಕೊಳ್ಳುವ ಮೂಲಕ ತಿಳಿಸಿದೆ.
Congress General Secretary Priyanka Gandhi Vadra arrives in Lucknow.
She will be visiting Lakhimpur Kheri tomorrow.
(File photo) pic.twitter.com/MYZfDNJGGE
— ANI UP (@ANINewsUP) October 3, 2021
ವೀಡಿಯೋದಲ್ಲಿ ಪ್ರಿಯಾಂಕಾ ಗಾಂಧಿ ಅವರು, ಜನರನ್ನು ಕೊಂದವರಿಗಿಂತ ನಾನು ಮುಖ್ಯವಾದವಳಲ್ಲ. ನೀವು ಸರ್ಕಾರವನ್ನು ರಕ್ಷಿಸುತ್ತಿದ್ದೀರಾ. ನೀವು ಅರೆಸ್ಟ್ ಮಾಡುವ ಮುನ್ನ ವಾರೆಂಟ್, ಕಾನೂನು ಆಧಾರವನ್ನು ನೀಡಿ. ಇಲ್ಲದಿದ್ದರೆ ನಾನು ಇಲ್ಲಿಂದ ಕದಲುವುದಿಲ್ಲ ಮತ್ತು ನೀವು ನನ್ನನ್ನು ಮುಟ್ಟುವಂತಿಲ್ಲ ಎಂದು ಹೇಳುತ್ತಿದ್ದಾರೆ. ಆದರೂ ಪೊಲೀಸರು ಅವರನ್ನು ಸುತ್ತುವರಿದಿರುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ಅಲ್ಲದೇ ಮಹಿಳಾ ಪೊಲೀಸ್ ಸಿಬ್ಬಂದಿಗೆ ಪಕ್ಕಕ್ಕೆ ಸರಿಯುವಂತೆ ವಿನಂತಿಸಿದ್ದಾರೆ. ಇದನ್ನೂ ಓದಿ: ರೈತರ ಮೇಲೆ ಕಾರು ಹತ್ತಿಸಿದ ಕೇಂದ್ರ ಸಚಿವನ ಮಗ – ನಾಲ್ವರು ರೈತರು ಸೇರಿ 8 ಮಂದಿ ಸಾವು
Congress General Secretary Priyanka Gandhi Vadra left for Lakhimpur; earlier visuals from Lucknow pic.twitter.com/5jlWetJftU
— ANI UP (@ANINewsUP) October 3, 2021
ವಾರೆಂಟ್ ಅಥವಾ ಕಾನೂನು ಆಧಾರಗಳನ್ನು ನೀಡದೇ ಇದ್ದಲ್ಲಿ ನೀವು ನನ್ನನ್ನು ಕರೆದುಕೊಂಡು ಹೋಗುವಂತಿಲ್ಲ. ಆದರೂ ನೀವು ಕಾರಿನೊಳಗೆ ನನ್ನನ್ನು ದಬ್ಬಿದರೆ ನಾನು ನಿಮ್ಮ ಮೇಲೆ ಕಿಡ್ನಾಪ್ ಕೇಸ್ ಹಾಕುತ್ತೇನೆ. ಅದು ಪೊಲೀಸರ ಮೇಲೆ ಎಂದು ಕಿಡಿಕಾರಿದ್ದಾರೆ.
श्रीमती @priyankagandhi जी को हरगांव से गिरफ्तार करके सीतापुर पुलिस लाइन ले जाया जा रहा हूं, कृपया सभी लोग पहुंचे। pic.twitter.com/d0GClYamvr
— UP Congress (@INCUttarPradesh) October 3, 2021
ಇದೇ ವೇಳೆ ಪ್ರಿಯಾಂಕ ಅವರ ಪಕ್ಕ ನಿಂತಿದ್ದ ಕಾಂಗ್ರೆಸ್ ನಾಯಕ ದೀಪೇಂದರ್ ಹೂಡಾ, ಪ್ರಿಯಾಂಕ ವಿರುದ್ಧ ಪೊಲೀಸರು ಹೇಗೆ ಕೈ ಎತ್ತಿದ್ರಿ. ಅವರಿಗೆ ಪೆಟ್ಟು ಬಿದ್ದಿದ್ದರೆ ಏನಾಗುತ್ತಿತ್ತು ಗೊತ್ತಿದ್ಯಾ? ನಾನು ಈ ಘಟನೆಯನ್ನು ನೋಡಿದ್ದೇನೆ. ನಾನು ಈ ಬಗ್ಗೆ ಸಾಕ್ಷಿ ಹೇಳುತ್ತೇನೆ ಎಂದು ಹೇಳುತ್ತಿದ್ದಂತೆ ಪೊಲೀಸರು ಅವರನ್ನು ಸಹ ಕಾರಿನೊಳಗೆ ತಳ್ಳಿದ್ದಾರೆ. ಆಗ ಮಹಿಳೆಯಯೊಂದಿಗೆ ಮಾತನಾಡಲು ಸಾಧ್ಯವಾಗದೇ ಅವರನ್ನು ಹೊಡೆಯುತ್ತಿದ್ದೀರಾ ಎಂದು ಪ್ರಿಯಾಂಕಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.