ಚಿಕ್ಕಬಳ್ಳಾಪುರ: ಪ್ರಿಯಾಂಕ ಗಾಂಧಿ ಆಗಮನದಿಂದ ಕಾಂಗ್ರೆಸ್ಸಿಗೆ ನೂರು ಆನೆಬಲ ಬಂದಿದೆ. ಇದರಿಂದ ಬಿಜೆಪಿ ದುರ್ಬಲ ಆಗಲಿದ್ದು, ಮುಂದೆ ಸರ್ಕಾರ ಮಾಡುವುದಿಲ್ಲ ಎಂದು ಸಂಸದ ವೀರಪ್ಪ ಮೊಯ್ಲಿ ಹೇಳಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಚ್ಚೇಗೌಡ ಸ್ಪರ್ಧೆ ವಿಚಾರವಾಗಿ ಪ್ರತಿಕ್ರಿಯಿಸಿ, ನಾನು ಹತ್ತು ವರ್ಷದಿಂದ ಸಂಸತ್ ಸದಸ್ಯನಾಗಿ ಸಾಕಷ್ಟು ಕೆಲಸ ಮಾಡಿದ್ದೇನೆ. ಕ್ಷೇತ್ರಕ್ಕೆ ಮಂತ್ರಿಯಾಗಿದ್ದಾಗ ಬಚ್ಚೇಗೌಡರ ಕೊಡುಗೆ ಏನು? ನನ್ನ ಕೊಡುಗೆ ಏನು? ಮುಂದೆ ಯಾರನ್ನ ಅಧಿಕಾರಕ್ಕೆ ತರಬೇಕು ಎನ್ನುವುದನ್ನು ಚುನಾವಣೆಯಲ್ಲಿ ಜನ ತೀರ್ಮಾನಿಸಲಿದ್ದಾರೆ ಎಂದರು. ಇದನ್ನೂ ಓದಿ: ಎನ್‍ಡಿಎ ಮೈತ್ರಿಕೂಟಕ್ಕೆ ಬಹುಮತ ಕಷ್ಟ- ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಅತಂತ್ರ ಫಲಿತಾಂಶ
Advertisement
Advertisement
ಸಿ ವೋಟರ್ ಸಮೀಕ್ಷೆ ವಿಚಾರವಾಗಿ ಪ್ರತಿಕ್ರಿಯಿಸಿ, ಸಮೀಕ್ಷೆ ಪ್ರಕಾರವೇ ದಿನದಿಂದ ದಿನಕ್ಕೆ ಬಿಜೆಪಿ ವೀಕ್ ಆಗುತ್ತಿದೆ. ಮುಂದೆ ಸರ್ಕಾರ ರಚಿಸುವ ಸಾಮರ್ಥ್ಯ ಬಿಜೆಪಿಗಿಲ್ಲ. ದಿನ ಕಳೆದಂತೆ ಬಿಜೆಪಿ ಪಕ್ಷ ಮತ್ತಷ್ಟು ತನ್ನ ಸಾಮರ್ಥ್ಯ ಕಳೆದುಕೊಳ್ಳುತ್ತಿದೆ. ಅದರಲ್ಲೂ ಕಾಂಗ್ರೆಸ್ ಪಕ್ಷಕ್ಕೆ ಪ್ರಿಯಾಂಕ ಗಾಂಧಿ ಅವರು ಬಂದಿರುವುದರಿಂದ ಬಿಜೆಪಿ ಇನ್ನಷ್ಟು ವೀಕ್ ಆಗಲಿದೆ ಎಂದರು.
Advertisement
Advertisement
ಪ್ರಾದೇಶಿಕ ಪಕ್ಷಗಳ ಬೆಂಬಲದಿಂದ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲಿದೆ. ಇಂದಿರಾ ಗಾಂಧಿ ಆಡಳಿತವನ್ನು ನಾವು ಪ್ರಿಯಾಂಕ ಗಾಂಧಿ ಮೂಲಕ ನೋಡುತ್ತೇವೆ ಎಂಬ ನಂಬಿಕೆ ಇದೆ. ರಾಜ್ಯದಲ್ಲಿ ಯಡಿಯೂರಪ್ಪ 20 ಸೀಟು ಅಲ್ಲ 5 ಸೀಟ್ ಗೆದ್ರೆ ಹೆಚ್ಚು. ಜನಾರ್ದನ ಪೂಜಾರಿಯವರು ಬಹಳ ಹಿರಿಯ ನಾಯಕರು. ಅವರು ಸಿದ್ದರಾಮಯ್ಯ ಅವರ ಬಗ್ಗೆ ಮಾತನಾಡಿದ್ದು ತಪ್ಪು. ಹೇಳಿಕೆ ಕೊಡುವಾಗ ಜಾಗೃತೆ ವಹಿಸಿದರೆ ಒಳ್ಳೆಯದು. ಪಕ್ಷದ ಹಿತದೃಷ್ಟಿಯಿಂದ ನಮ್ಮ ನಾಯಕರ ಮೇಲೆ ಟೀಕೆ ಮಾಡುವುದು ಸರಿಯಲ್ಲ. ಇದು ಕಾಂಗ್ರೆಸ್ ಪಕ್ಷಕ್ಕೆ ಹಿತ ತರುವುದಿಲ್ಲ ಎಂದು ವೀರಪ್ಪ ಮೊಯ್ಲಿ ಹೇಳಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv