BollywoodCinemaLatestMain PostNational

ಪ್ರಿಯಾಂಕಾ ಚೋಪ್ರಾ ಪತಿಯಿಂದ ಮಾಜಿ ಲವರ್ ಒಲಿವಿಯಾಗೆ ಮಹಾಮೋಸ

ಬಾಲಿವುಡ್ ಹೆಸರಾಂತ ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಅವರ ಪತಿ, ಅಮೆರಿಕಾದ ಗಾಯಕ ನಿಕ್ ಜೋಸನ್ ಬಗ್ಗೆ ಗುರುತರ ಆರೋಪವೊಂದು ಕೇಳಿ ಬಂದಿದ್ದು, ನಿಕ್ ಅವರ ಮಾಜಿ ಲವರ್ ಒಲಿವಿಯಾ ಕಲ್ಪೋ ಮೊದಲ ಬಾರಿಗೆ ಈ ಆರೋಪ ಮಾಡಿದ್ದಾರೆ. ಪ್ರಿಯಾಂಕಾ ಮತ್ತು ನಿಕ್ ಮದುವೆಯ ಹೊತ್ತಿನಲ್ಲಿ ಕೆಲ ಹುಡುಗಿಯರು ನಿಕ್ ಬಗ್ಗೆ ಮಾತನಾಡಿದ್ದರು. ತಮ್ಮೊಂದಿಗೆ ಅವರಿಗೆ ಅಫೇರ್ ಇದೆ ಎಂದು ಹೇಳಿಕೊಂಡಿದ್ದರು. ಆ ಲಿಸ್ಟ್ ನಲ್ಲಿ ಒಲಿವಿಯಾ ಕಲ್ಫೋ (Olivia Culfo) ಮೊದಲಿಗರಾಗಿದ್ದರು.

ಸತತ ಮೂರು ವರ್ಷಗಳ ಕಾಲ ನಿಕ್ ಜೊತೆ ತಾವು ಡೇಟಿಂಗ್ ಮಾಡಿರುವುದಾಗಿ ಒಲಿವಿಯಾ ಹೇಳಿಕೊಂಡಿದ್ದಾರೆ. ತಮ್ಮಿಬ್ಬರ ಸಂಬಂಧ ಎಷ್ಟೊಂದು ಗಾಢವಾಗಿತ್ತು ಎಂದೂ ಅವರು ವಿವರಿಸಿದ್ದಾರೆ. ಅಂದುಕೊಂಡಂತೆ ಆಗಿದ್ದರೆ, ತಾವಿಬ್ಬರೂ ಮದುವೆ ಆಗಬೇಕಿತ್ತು. ಆದರೆ, ನಿಕ್ (Nick Johnson) ಮೋಸದಿಂದಾಗಿ ನಾನು ದೂರವಾದೆ, ಪ್ರಿಯಾಂಕಾ ಮದುವೆ ಆಗಿದ್ದಾರೆ ಎಂದು ನೇರವಾಗಿಯೇ ಮಾಜಿ ಲವರ್ ಬಗ್ಗೆ ಆರೋಪ ಮಾಡಿದ್ದಾರೆ ಒಲವಿಯಾ. ಇದನ್ನೂ ಓದಿ:`ಮಿಸ್ ಯೂ ಸಾನ್ಯ’ ಎಂದು ಬಿಕ್ಕಿ ಬಿಕ್ಕಿ ಅತ್ತ ರೂಪೇಶ್ ಶೆಟ್ಟಿ

ಗಾಢವಾಗಿ ಪ್ರೀತಿಸುತ್ತಿದ್ದವರು ಮತ್ತು ಮೂರ್ನಾಲ್ಕು ವರ್ಷಗಳ ಕಾಲ ಡೇಟಿಂಗ್ ನಲ್ಲಿದ್ದಾಗ, ಅದೊಂದು ಅದ್ಭುತ ಅನುಭವವಾಗಿತ್ತು ಎಂದು ಹೇಳಿಕೊಂಡಿರುವ ಒಲಿವಿಯಾ, ನಿಕ್ ಬಿಟ್ಟು ಹೋದ ಸಮಯದಲ್ಲಿ ತಮ್ಮೊಂದಿಗೆ ಹಣವಿರಲಿಲ್ಲ. ಬಾಡಿಗೆ ಕಟ್ಟಲೂ ದುಡ್ಡಿರಲಿಲ್ಲ. ರೇಷನ್ ತರಲು ಪರದಾಡಿದ್ದೇನೆ. ಅಷ್ಟೊಂದು ಪ್ರೀತಿಸುತ್ತಿದ್ದ ನಿಕ್, ಸಡನ್ನಾಗಿ ದೂರವಾದರು. ನನ್ನ ಹೆಸರು ಕೂಡ ಎಲ್ಲಿಯೂ ಕೇಳಿ ಬರದಂತೆ ಹತ್ತಿಕ್ಕಿದರು. ಅದೊಂದು ನರಕಯಾತನೆಯ ಸಮಯ ಎಂದು ಅವರು ಹೇಳಿಕೊಂಡಿದ್ದಾರೆ.

Live Tv

Leave a Reply

Your email address will not be published. Required fields are marked *

Back to top button