ಬಾಲಿವುಡ್‌ನ ಹಾಟ್ ಬ್ಯೂಟಿ ಪ್ರಿಯಾಂಕ ಚೋಪ್ರಾಗೆ (Priyanka Chopra) ಹುಟ್ಟುಹಬ್ಬದ (Birthday) ಸಂಭ್ರಮ. ಪತ್ನಿಯ ಹುಟ್ಟು ಹಬ್ಬಕ್ಕೆ ನಿಕ್ ಜೋನ್ಸ್ (Nick Jones) ಭರ್ಜರಿ ಸರ್ಪ್ರೈಸ್ ನೀಡಿದ್ದಾರೆ. ಈ ಸರ್ಪ್ರೈಸ್ ಗೆ ನೆಟ್ಟಿಗರನ್ನ ಕಣ್ಣರಳಿಸಿ ನೋಡುವಂತೆ ಮಾಡಿದೆ. ಹೌದು, ತಮ್ಮ ಪತ್ನಿಯ 42ನೇ ಹುಟ್ಟುಹಬ್ಬಕ್ಕೆ ಕೊಟ್ಟ ಗಿಫ್ಟ್ ಏನು ಗೊತ್ತಾ..? ಮುಂದೆ ಓದಿ..
ಪತ್ನಿ ಹುಟ್ಟುಹಬ್ಬ ಅಂದ್ರೆ ಸಾಕು ಒಂದು ವಾರಕ್ಕಿಂತಲೂ ಮುಂಚೆ ವಿವಿಧ ರೀತಿಯಲ್ಲಿ ಪ್ಲಾನ್ ಮಾಡುವ ಸಿನಿ ಜೋಡಿಗಳು ಅದಕ್ಕೆ ತಕ್ಕಂತೆ ಸರ್ಪ್ರೈಸ್ ಗಿಫ್ಟ್ಗಳನ್ನೂ ಸಹ ರೆಡಿ ಮಾಡಿಕೊಂಡಿರ್ತಾರೆ. ಅದೇ ಸಾಲಿನಲ್ಲಿ ನಟಿ ಪ್ರಿಯಾಂಕ ಚೋಪ್ರಾ ಹುಟ್ಟುಹಬ್ಬಕ್ಕೆ ನಿಕ್ ಜೋನ್ಸ್ ಇಲ್ಲಿಯವರೆಗೂ ಹಂಚಿಕೊಳ್ಳದ ರೋಮ್ಯಾಂಟಿಕ್ ಫೋಟೋಗಳನ್ನ ಹಂಚಿಕೊಂಡು ಪತ್ನಿಗೆ ಸರ್ಪ್ರೈಸ್ ನೀಡಿದ್ದಾರೆ. ನಿನ್ನಂತವಳನ್ನ ಹೆಂಡತಿಯಾಗಿ ಪಡೆದ ನಾನು ಅದೃಷ್ಟವಂತ. ಹುಟ್ಟು ಹಬ್ಬದ ಶುಭಾಶಯಗಳು ಅಂತಾ ವಿಶ್ ಮಾಡಿದ್ದಾರೆ.
ನಿಕ್ ಜೋನ್ಸ್ ಹಾಗೂ ಪ್ರಿಯಾಂಕ ಚೋಪ್ರಾ ಪ್ರೀತಿಸಿ, ೨೦೧೮ರಲ್ಲಿ ಮದುವೆಯಾದ ಜೋಡಿ. ತನಗಿಂತಲೂ ಹಿರಿಯಳಾದ ಪ್ರಿಯಾಂಕರನ್ನ ಕೈಹಿಡಿದ ನಿಕ್ ಸುಖಿ-ಸುಂದರ ಸಂಸಾರವನ್ನ ನಡೆಸುತ್ತಿದ್ದಾರೆ. ಸದ್ಯ ನಟಿ ಪ್ರಿಯಾಂಕ ಚೋಪ್ರಾ `ಬ್ಲಫ್’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಬಿಡುವಿನ ವೇಳೆ ಮಗಳ ಜೊತೆ ಹಾಗೂ ಗಂಡ ನಿಕ್ ಜೊತೆ ಕಾಲ ಕಳೆಯುತ್ತಾ ಸದಾ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿರ್ತಾರೆ.