ಬಾಲಿವುಡ್ ಬ್ಯೂಟಿ (Bollywood) ಪ್ರಿಯಾಂಕಾ ಚೋಪ್ರಾ (Priyanka Chopra) ಇದೀಗ ಹಾಲಿವುಡ್ ಲೆವೆಲ್‌ನಲ್ಲಿ ಮಿಂಚ್ತಿರುವ ಮಹಾನ್ ನಟಿ, ಹಿಂದಿ ಮತ್ತು ಇಂಗ್ಲಿಷ್ ಎರಡು ಭಾಷೆಯ ಸಿನಿಮಾದಲ್ಲೂ ನಟಿ ಸಕ್ರಿಯರಾಗಿದ್ದಾರೆ. ಸದ್ಯ ಕ್ರಿಸ್‌ಮಸ್ ಹಬ್ಬ ಆಚರಿಸಲು ಮಗಳ ಜೊತೆ ವಿದೇಶಕ್ಕೆ ಪ್ರಿಯಾಂಕಾ ಹಾರಿದ್ದಾರೆ.
ಹಾಲಿವುಡ್ (Hollywood) ಸ್ಟಾರ್ ಗಾಯಕ ನಿಕ್ ಜೊತೆ ವೈವಾಹಿಕ ಜೀವನಕದಲ್ಲಿ ನಟಿ ಪ್ರಿಯಾಂಕಾ ಖುಷಿಯಾಗಿದ್ದಾರೆ. ಸಂಸಾರ, ಮಗಳ ಆರೈಕೆಯ ನಡುವೆ ಸಿನಿಮಾಗಳಲ್ಲಿ ಪ್ರಿಯಾಂಕಾ ಮಿಂಚ್ತಿದ್ದಾರೆ. ಇನ್ನೂ ಡಿ.25ಕ್ಕೆ ಕ್ರಿಸ್‌ಮಸ್ ಹಬ್ಬ ಹತ್ತಿರ ಬರುತ್ತಿದ್ದಂತೆ, ಹಬ್ಬದ ಆಚರಣೆಯ ತಯಾರಿ ಕೂಡ ತೆರೆಮರೆಯಲ್ಲಿ ಜೋರಾಗಿ ನಡೆಯುತ್ತಿದೆ. ಕ್ರಿಸ್‌ಮಸ್ (Chirstmas) ಸೆಲೆಬ್ರೇಟ್ ಮಾಡಲು ವಿಮಾನದಲ್ಲಿ ಮುದ್ದು ಮಗಳ ಜೊತೆ ಪ್ರಿಯಾಂಕಾ ಪ್ರಯಾಣ ಬೆಳೆಸಿದ್ದಾರೆ. ಈ ಕುರಿತ ಫೋಟೋವನ್ನ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ. ಇದನ್ನೂ ಓದಿ: ಮಗ ರೂಪಿಗಾಗಿ, ಮಗುವಿನಂತೆ ಗಳಗಳನೇ ಅತ್ತ ಆರ್ಯವರ್ಧನ್ ಗುರೂಜಿ
View this post on Instagram
ವಿಮಾನದಲ್ಲಿ ಕುಳಿತಿರುವ ತಮ್ಮ ಫೋಟೋಗೆ `ನಾವು ಹೋಗುತ್ತಿದ್ದೇವೆ’ ಎಂದು ಅಡಿಬರಹ ನೀಡಿ ಪ್ರಿಯಾಂಕಾ, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಇನ್ನೂ ತಾವು ಎಲ್ಲಿಗೆ ಟ್ರಾವೆಲ್ ಮಾಡ್ತಿದ್ದೇವೆ ಎಂದು ಮಾತ್ರ ಹೇಳಿಲ್ಲ. ಒಟ್ನಲ್ಲಿ ಈ ಜೋಡಿಗೆ, ಕ್ರಿಸ್‌ಮಸ್‌ಗೆ ಫ್ಯಾನ್ಸ್ ಸೋಷಿಯಲ್ ಮೀಡಿಯಾ ಮೂಲಕ ವಿಶ್ ಮಾಡ್ತಿದ್ದಾರೆ.