ಮುಂಬೈ: ದೇಸಿ ಗರ್ಲ್ ಪ್ರಿಯಾಂಕಾ ಚೋಪ್ರಾ ಅಂತರಾಷ್ಟ್ರೀಯ ಮಟ್ಟದಲ್ಲಿ ಜನಪ್ರಿಯರಾಗಿರೋದು ನಿಮಗೆಲ್ಲ ಗೊತ್ತೆಯಿದೆ. ಮೇರಿ ಕೋಮ್ ಅವರ ಆತ್ಮಚರಿತ್ರೆಯಲ್ಲಿ ನಟಿಸಿದ ಮೇಲೆ ಪಿಗ್ಗಿ ಈಗ ಇಬ್ಬರು ಗಗನಯಾತ್ರಿಗಳ ಆತ್ಮಚರಿತ್ರೆಯಲ್ಲಿ ನಟಿಸಲಿದ್ದಾರೆ.
ಗಗನಯಾತ್ರಿಯಾದ ಕಲ್ಪನಾ ಚಾವ್ಲಾ ಅವರ ಆತ್ಮಚರಿತ್ರೆಯಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿದರೆ, ರಾಕೇಶ್ ಶರ್ಮಾ ಅವರ ಆತ್ಮಚರಿತ್ರೆಯಲ್ಲಿ ಅಮೀರ್ ಖಾನ್ ಜೊತೆ ನಟಿಸುತ್ತಿದ್ದಾರೆ. ಅಮೀರ್ ಜೊತೆ ನಟಿಸುತ್ತಿರುವ ಚಿತ್ರಕ್ಕೆ ಸೆಲ್ಯೂಟ್ ಎಂದು ಹೆಸರಿಡಲಾಗಿದೆ.
ಈಗಾಗಲೇ ಕಲ್ಪನಾ ಚಾವ್ಲಾ ಚಿತ್ರದ ಪ್ರೀ-ಪ್ರೊಡಕ್ಷನ್ ಕೆಲಸ ಶುರುವಾಗಿದೆ. ಇನ್ನೂ ಪ್ರಿಯಾಂಕಾ ಅಥ್ಲೆಟಿಕ್ಸ್ ಪಿ.ಟಿ.ಉಷಾ ಅವರ ಜೀವನಾಧರಿತ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂದು ಬಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ.