Bengaluru CityCinemaKarnatakaLatestMain PostSandalwoodTV Shows

ಮೊದಲ ಬಾರಿಗೆ ಮುದ್ದು ಮಗಳ ಫೋಟೋ ಹಂಚಿಕೊಂಡ ಪ್ರಿಯಾಂಕಾ ಚೋಪ್ರಾ

ಬಾಲಿವುಡ್ ನಟಿ(Bollywood) ಪ್ರಿಯಾಂಕಾ ಚೋಪ್ರಾ ತಾಯ್ತನದ ಖುಷಿಯಲ್ಲಿದ್ದಾರೆ. ಸಿನಿಮಾಗಳ ಜೊತೆಗೆ ಮಗಳ ಆರೈಕೆಯಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಮೊದಲ ಬಾರಿಗೆ ಮುದ್ದು ಮಗಳ ಫೋಟೋ ಹಂಚಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ.

ಹಿಂದಿ ಸಿನಿಮಾಗಳ ಮೂಲಕ ಸಂಚಲನ ಮೂಡಿಸಿರುವ ನಟಿ ಪ್ರಿಯಾಂಕಾ ಚೋಪ್ರಾ (Priyanka Chopra), ಮದುವೆ, ಮಗಳು, ಸಂಸಾರ ಅಂತಾ ಬ್ಯುಸಿಯಾಗಿದ್ದಾರೆ. ಹಾಲಿವುಡ್(Hollywood) ಚಿತ್ರಗಳನ್ನ ಮಾಡ್ತಾ, ಅಮೆರಿಕಾದಲ್ಲಿ ಸೆಟಲ್ ಆಗಿದ್ದಾರೆ. ಇತ್ತೀಚೆಗಷ್ಟೇ ಭಾರತಕ್ಕೆ ಪಿಗ್ಗಿ ಬಂದಿದ್ದರು. ಕೆಲವೇ ದಿನಗಳಿದ್ದು, ಪತಿಯ ಮನೆ ವಿದೇಶಕ್ಕೆ ಹಾರಿದ್ದರು. ಇದೀಗ ಮುದ್ದು ಮಗಳ ಫೋಟೋ ಶೇರ್ ಮಾಡುವ ಮೂಲಕ ನಟಿ ಸುದ್ದಿಯಲ್ಲಿದ್ದಾರೆ. ಇದನ್ನೂ ಓದಿ: EXCLUSIVE:ಆಗಿದ್ದು ಎಂಗೇಜ್‌ಮೆಂಟ್ ಅಲ್ಲ, ನಾನಿನ್ನೂ ಒಪ್ಪಿಲ್ಲ: ವೈಷ್ಣವಿ

ಮುದ್ದು ಮಗಳು ನಿದ್ದೆ ಮಾಡಿರುವ ಫೋಟೋವನ್ನ ನಟಿ ಶೇರ್ ಮಾಡಿದ್ದಾರೆ. ಇದುವೆರೆಗೂ ಮಗಳ ಮುಖ ತೋರಿಸದೇ ನಟಿ ಫೋಟೋ ಹಾಕುತ್ತಿದ್ದರು. ಆದರೆ ಇದೀಗ ಪ್ರಿಯಾಂಕಾ ಮಗಳ ಫೋಟೋ ನೋಡಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ.

Live Tv

Back to top button