ಮುಂಬೈ: ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ 2018 ಡಿಸೆಂಬರ್ ನಲ್ಲಿ ತಮ್ಮ ಗೆಳೆಯ ನಿಕ್ ಜೋನಸ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆ ಆದ 2 ತಿಂಗಳ ಬಳಿಕ ನನ್ನ ತಾಯಿ ಮದುವೆಯಲ್ಲಿ ಬೇಸರದಿಂದ ಇದ್ದರು ಎಂದು ಪ್ರಿಯಾಂಕಾ ಚೋಪ್ರಾ ಹೇಳಿದ್ದಾರೆ.
ಇತ್ತೀಚೆಗೆ ಪ್ರಿಯಾಂಕ ಚೋಪ್ರಾ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದಾಗ ತಮ್ಮ ಮದುವೆಯ ಅನುಭವವನ್ನು ಹೇಳಿಕೊಂಡಿದ್ದಾರೆ. ಭಾರತದ ಮದುವೆಯಲ್ಲಿ ಸಾವಿರಾರೂ ಮಂದಿ ಸೇರುತ್ತಾರೆ. ಆದರೆ ನನ್ನ ಮದುವೆಯಲ್ಲಿ ಕುಟುಂಬದ ಆಪ್ತರಿಗೆ ಮಾತ್ರ ನಾನು ಆಹ್ವಾನಿಸಲಾಗಿತ್ತು. ನನ್ನ ಹಾಗೂ ನಿಕ್ ಇಬ್ಬರ ಕುಟುಂಬದವರು ಸೇರಿ ಕೇವಲ 200 ಮಂದಿ ಮದುವೆಯಲ್ಲಿ ಭಾಗಿಯಾಗಿದ್ದರು. ನನ್ನ ಮದುವೆಯಲ್ಲಿ ಕೇವಲ ಆಪ್ತರು ಮಾತ್ರ ಆಗಮಿಸಬೇಕು ಎಂದು ನಾನು ನಿರ್ಧರಿಸಿದ್ದರಿಂದ ಅಮ್ಮ ಕೋಪಗೊಂಡಿದ್ದರು ಎಂದು ಪ್ರಿಯಾಂಕ ಎಂದು ಹೇಳಿಕೊಂಡಿದ್ದಾರೆ.
ಮದುವೆಗೆ ಕೇವಲ 200 ಮಂದಿಗೆ ಆಹ್ವಾನ ಮಾಡಿದ್ದು, ನನ್ನ ತಾಯಿಗೆ ಇಷ್ಟವಿರಲಿಲ್ಲ. ತನ್ನ ಮಗಳ ಮದುವೆಗೆ ಎಲ್ಲರನ್ನು ಕರೆಯಲು ಸಾಧ್ಯವಾಗಲಿಲ್ಲ ಎಂಬ ಬೇಸರ ನನ್ನ ತಾಯಿಗಿದೆ. ನನ್ನ ಮದುವೆ ಸಂದರ್ಭದಲ್ಲಿ ಅವರು ನನ್ನ ಮೇಲೆ ಬೇಸರಗೊಂಡಿದ್ದರು. ಅಲ್ಲದೇ 1,50,000 ಮಂದಿಗೆ ನಾನು ಮತ್ತೊಂದು ಪಾರ್ಟಿಯನ್ನು ಆಯೋಜಿಸಬೇಕೇ, ನನ್ನ ಮಗಳ ಮದುವೆಗೆ ನನ್ನ ಜಿವೆಲರ್ಸ್, ನನ್ನ ಹೇರ್ ಡ್ರೆಸ್ಸರ್ ನ ನಾನು ಹೇಗೆ ಆಹ್ವಾನಿಸದೇ ಇರಲಿ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು ಎಂದು ಪ್ರಿಯಾಂಕ ತಿಳಿಸಿದ್ದಾರೆ.
ಪ್ರಿಯಾಂಕ ಚೋಪ್ರಾ ಹಾಗೂ ಅಮೆರಿಕಾ ಗಾಯಕ ನಿಕ್ ಜೋಧಪುರದ ಉಮೈದ್ ಭವನದಲ್ಲಿ 2018 ಡಿಸೆಂಬರ್ 1 ಹಾಗೂ 2ರಂದು ಕ್ರಿಶ್ಚಿಯನ್ ಹಾಗೂ ಹಿಂದೂ ಸಂಪ್ರದಾಯದಂತೆ ಮದುವೆಯಾಗಿದ್ದರು. ಪ್ರಿಯಾಂಕ ಹಾಗೂ ನಿಕ್ ಒಟ್ಟು ಮೂರು ಆರತಕ್ಷತೆ ಮಾಡಿಕೊಂಡಿದ್ದಾರೆ. ಅಲ್ಲದೇ ತಮ್ಮ ನಾಲ್ಕನೇ ಆರತಕ್ಷತೆಯನ್ನು ಅವರು ಅಮೆರಿಕಾದಲ್ಲಿ ಮಾಡಿಕೊಂಡಿದ್ದರು. ದೆಹಲಿಯಲ್ಲಿ ನಡೆದ ಆರತಕ್ಷತೆಯಲ್ಲಿ ಪ್ರಧಾನಿ ಮೋದಿ ಆಗಮಿಸಿ ನವದಂಪತಿಗೆ ಶುಭಕೋರಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv