6 ತಿಂಗಳಿಗೆ ಹುಟ್ಟಿದ ಹೆಣ್ಣು ಮಗುವಿನ ಪೋಷಕರಾದ ಪ್ರಿಯಾಂಕಾ

Public TV
2 Min Read
priyanka chopra nick jonas

ಮುಂಬೈ: ಬಾಡಿಗೆ ತಾಯ್ತನದ ಮೂಲಕ ಪ್ರಿಯಾಂಕಾ ಚೋಪ್ರಾ, ನಿಕ್ ಜೋನಸ್ ಆರೂವರೆ ತಿಂಗಳಿಗೆ ಹುಟ್ಟಿದ ಹೆಣ್ಣು ಮಗುವಿನ ಪೋಷಕರಾಗಿದ್ದಾರೆ.

priyanka chopra and nick jonas 3

ಬಾಡಿಗೆ ತಾಯಿ 27 ವಾರಕ್ಕೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಸ್ ಪೋಷಕರಾಗಿ ಬಡ್ತಿ ಪಡೆದ ಸಂತಸದಲ್ಲಿದ್ದಾರೆ. ಏಪ್ರಿಲ್‍ನಲ್ಲಿ ಪ್ರಿಯಾಂಕ ತಾಯಿ ಆಗುವ ನಿರೀಕ್ಷೆಯಲ್ಲಿದ್ದರು. ಆದರೆ 12 ವಾರಗಳ ಮೊದಲೇ ಹೆಣ್ಣು ಮಗು ಅಮೆರಿಕದ ಲಾಸ್ ಎಂಜಲೀಸ್ ಆಸ್ಪತ್ರೆಯಲ್ಲಿ ಜನಿಸಿದೆ.

priyankachopra 80665284 680522819146956 659024711412004964 n

6 ತಿಂಗಳಿಗೆ ಹುಟ್ಟಿದ ಪ್ರೀ-ಮೆಚ್ಯೂರ್ ಬೇಬಿಯಾಗಿರುವುದರಿಂದ ಮಗು, ಬಾಡಿಗೆ ತಾಯಿ ವಾರ ಆಸ್ಪತ್ರೆಯಲ್ಲೇ ವೈದ್ಯರ ನಿಗಾದಲ್ಲಿ ಇರಲಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

priyankachopra 50523489 621054358307774 4935854773481769727 n
ಪ್ರಿಯಾಂಕಾ ಚೋಪ್ರಾ, ನಿಕ್ ಜೋನಸ್ ಮಗುವನ್ನು ಹೊಂದಲು ಬಯಸಿದ್ದರು. ಆದರೆ ಅವರಿಬ್ಬರ ಬ್ಯುಸಿ ಶೆಡ್ಯೂಲ್ ಅಡ್ಡಿಯುಂಟು ಮಾಡಿತ್ತು. ದಂಪತಿಗೆ ಯಾವುದೇ ಸಮಸ್ಯೆಗಳು ಇರಲಿಲ್ಲ. ಆದರೆ ಪ್ರಿಯಾಂಕಾ ಅವರಿಗೀಗ ವಯಸ್ಸು 39. ಹೀಗಾಗಿ ಸುಲಭವಾಗಿಯೂ ಇರಲಿಲ್ಲ. ಬಿಡುವಿಲ್ಲದ ಕೆಲಸದ ಮಧ್ಯೆ ಗರ್ಭ ಧರಿಸುವುದು ಕಷ್ಟ ಎಂದು ಅರಿತ ಬಳಿಕ ಅವರು ಪ್ರಿಯಾಂಕಾ ದಂಪತಿ ಬಾಡಿಗೆ ತಾಯ್ತನದ ಮೊರೆ ಹೋಗಿ ಇದೀಗ ಹೆಣ್ಣು ಮಗುವಿನ ಪೋಷಕರಾಗಿದ್ದಾರೆ.

nick jonas priyanka chopra 2 e1582882659224

ಬಾಡಿಗೆ ತಾಯ್ತನದ ಮೂಲಕವಾಗಿ ಮಗುವನ್ನು ಪಡೆಯಲು ಒಬ್ಬ ಮಹಿಳೆಯನ್ನು ಭೇಟಿಯಾದರು. ಇದು ಆ ಮಹಿಳೆಗೆ ಐದನೇ ಸರೋಗಸಿಯಾಗಿತ್ತು. ಏಪ್ರಿಲ್‍ನಲ್ಲಿ ಮಗು ಪಡೆಯಲು ಪ್ರಿಯಾಂಕಾ ಚೋಪ್ರಾ ಪ್ಲಾನ್ ಮಾಡಿದ್ದರು. ಇದನ್ನೂ ಓದಿ: ತಂದೆ-ತಾಯಿಯಾದ ಪ್ರಿಯಾಂಕಾ ಚೋಪ್ರಾ, ನಿಕ್ ಜೋನಸ್!

priyanka chopra 3 1

ಸರೋಗಸಿ ಮೂಲಕ ನಾವು ಮಗುವನ್ನು ಸ್ವಾಗತಿಸಿದ್ದೇವೆ. ನಾವು ಕುಟುಂಬದ ಕಡೆಗೆ ಈ ವಿಶೇಷ ಸಮಯದಲ್ಲಿ ಹೆಚ್ಚಿನ ಗಮನ ಕೊಡಬೇಕಾಗಿರೋದರಿಂದ ನಮಗೆ ಪ್ರೈವಸಿ ಬೇಕಿದೆ. ಧನ್ಯವಾದಗಳು ಎಂದು ಪ್ರಿಯಾಂಕಾ ಚೋಪ್ರಾ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಅನೇಕ ಸೆಲೆಬ್ರಿಟಿಗಳು, ಅಭಿಮಾನಿಗಳು ದಂಪತಿಗೆ ಶುಭಾಶಯ ತಿಳಿಸಿದ್ದಾರೆ. ಇದನ್ನೂ ಓದಿ:ಹೊಸ ಉದ್ಯಮದತ್ತ ಮುಖ ಮಾಡಿದ ಪ್ರಿಯಾಂಕಾ ಚೋಪ್ರಾ

priyanka chopra and nick jonas

ಮಗುವಿನ ವಿಚಾರ ಹೇಳಿಕೊಂಡಿರುವ ಪ್ರಿಯಾಂಕಾ ಚೋಪ್ರಾ ಯಾವ ಮಗು ಎಂದು ಮಾತ್ರ ಹೇಳಿಲ್ಲ. ಒಟ್ಟಿನಲ್ಲಿ ಇಷ್ಟುದಿನಗಳ ಕಾಲವೂ ಪ್ರಿಯಾಂಕಾ ಚೋಪ್ರಾ, ನಿಕ್ ಜೋನಾಸ್ ದಂಪತಿ ಮಗುವಿನ ವಿಚಾರವಾಗಿ ಗೌಪ್ಯತೆ ಕಾಪಾಡಿಕೊಂಡಿದ್ದಾರೆ. ಆದರೆ ಕೆಲವು ದಿನಗಳ ಹಿಂದೆ ಪ್ರಿಯಾಂಕಾ ಚೋಪ್ರಾ ಸಂದರ್ಶನವೊಂದರಲ್ಲಿ, ಭವಿಷ್ಯದಲ್ಲಿ ತಾವು ತಾಯಿಯಾಗುವ ಬಯಕೆ ವ್ಯಕ್ತಪಡಿಸಿದ್ದರು. ಈ ಮೂಲಕ ಮೊದಲೇ ಮಗು ಕುರಿತಾಗಿ ಸುಳಿವು ನೀಡಿದ್ದರು.

priyanka chopra nick jonas 1

ಮಗು ಪಡೆದುಕೊಳ್ಳಬೇಕೆಂಬುದು ನಮ್ಮ ಜೀವನದ ಅತಿ ದೊಡ್ಡ ಕನಸಾಗಿದೆ. ದೇವರ ದಯೆಯಿಂದ ಅದು ಯಾವಾಗ ಸಂಭವಿಸುತ್ತದೋ ಆಗಲೇ ಸಂಭವಿಸಲಿ. ನಾನು ಸಾಲು, ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದೇನೆ. ನಮ್ಮ ಜೀವನದಲ್ಲಿ ಮಗು ಆಗಮನವಾಗುವ ಸಂದರ್ಭದಲ್ಲಿ ನಾನು ಚಿತ್ರರಂಗದಿಂದ ನಿಧಾನವಾಗಿ ಬ್ರೇಕ್ ತೆಗೆದುಕೊಳ್ಳಲು ಆರಂಭಿಸುತ್ತೇವೆ ಎಂದು ಪ್ರಿಯಾಂಕಾ ಈ ಹಿಂದೆಯೇ ಹೇಳಿದ್ದರು.

priyankachopra 64111648 457509101730632 3685733576504881147 n

2018ರಲ್ಲಿ ನಿಕ್ ಜೋನಾಸ್, ಪ್ರಿಯಾಂಕಾ ಚೋಪ್ರಾ ಅವರು ಜೋಧಪುರದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆ ನಂತರ ಪ್ರಿಯಾಂಕಾ ಚೋಪ್ರಾ ಅವರು ಹಾಲಿವುಡ್‍ನಲ್ಲಿ ಬ್ಯುಸಿಯಾಗಿದ್ದಾರೆ. ಪತಿ ಜೊತೆ ಅಮೆರಿಕದಲ್ಲಿ ನೆಲೆಸಿರುವ ಪ್ರಿಯಾಂಕಾ ಚೋಪ್ರಾ ಅವರು ಅಲ್ಲಿಯೇ ಭಾರತೀಯ ರೆಸ್ಟೋರೆಂಟ್ ಕೂಡ ಆರಂಭಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *