ಮುಂಬೈ: ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಹಾಗೂ ಪಾಪ್ ಗಾಯಕ ನಿಕ್ ಜೋನ್ಸ್ ನಿಶ್ಚಿತಾರ್ಥ ಸಮಾರಂಭ ಶನಿವಾರ ನಡೆಸಿದ್ದು, ಈ ವೇಳೆ ಪ್ರಿಯಾಂಕ ಚೋಪ್ರಾ ಡಾನ್ಸ್ ಮಾಡಿರುವ ವಿಡಿಯೋ ಸಖತ್ ವೈರಲ್ ಆಗಿದೆ.
ಮುಂಬೈ ಪ್ರಿಯಾಂಕ ಚೋಪ್ರಾ ನಿವಾಸದಲ್ಲಿ ಕುಟುಂಬಸ್ಥರು ಹಾಗೂ ಆಪ್ತ ಬಂಧುಗಳ ಸಮ್ಮುಖದಲ್ಲಿ ವಿವಾಹ ನಿಶ್ಚಿತಾರ್ಥ ಕಾರ್ಯಕ್ರಮ ನಡೆಯಿತು. ಬಳಿಕ ನಡೆದ ಸಮಾರಂಭದಲ್ಲಿ ಪ್ರಿಯಾಂಕ ಚೋಪ್ರಾ ಮತ್ತು ನಿಕ್ ಜೋಡಿ ಹಾಡಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದ್ದಾರೆ. ಪ್ರಿಯಾಂಕ ಡಾನ್ಸ್ ಮಾಡುವುದನ್ನು ನಿಕ್ ಕ್ಯಾಮೆರಾದಲ್ಲಿ ಸೆರೆಹಿಡಿದ್ದಾರೆ. ವೀಡಿಯೋದಲ್ಲಿ ನಟಿ ಅನುಶಾ ದಾಂಡೇಕರ್ ಕೂಡ ಹೆಜ್ಜೆ ಹಾಕಿರುವುದು ಕಾಣಬಹುದಾಗಿದೆ. ಈ ವೀಡಿಯೋವನ್ನು ನಿಕ್ ಹಂಚಿಕೊಂಡಿದ್ದಾರೆ.
ಕಾರ್ಯಕ್ರಮದಲ್ಲಿ ಬಾಲಿವುಡ್ ನಟಿ ಅಲಿಯಾ ಭಟ್, ಸಲ್ಮಾನ್ ಖಾನ್ ಸಹೋದರಿ ಅರ್ಪಿತಾ ಖಾನ್ ಶರ್ಮಾ, ಮುಕೇಶ್ ಅಂಬಾನಿ ದಂಪತಿ ಹಾಗೂ ಪುತ್ರಿ ಇಷಾ ಅಂಬಾನಿ ಸೇರಿದಂತೆ ಹಲವು ಗಣ್ಯ ವ್ಯಕ್ತಿಗಳು ಭಾಗವಹಿಸಿದ್ದರು.
ಕಳೆದ 6 ತಿಂಗಳಿನಿಂದ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದ ಪ್ರಿಯಾಂಕ, ನಿಕ್ ಜೋಡಿ ತಮ್ಮ ನಡುವಿನ ಪ್ರೀತಿಯ ಬಗ್ಗೆ ಎಲ್ಲೂ ಹೇಳಿಕೊಂಡಿರಲಿಲ್ಲ. ಆದರೆ ಇವರ ನಡುವಿನ ಪ್ರೀತಿಯ ಬಗ್ಗೆ ಹಲವು ಸುದ್ದಿಗಳು ಹರಿದಾಡುತ್ತಿತ್ತು. ಆದರೆ ಸದ್ಯ ಇಬ್ಬರ ನಿಶ್ಚಿತಾರ್ಥ ನಡೆಸಿದ್ದು, ತನಗಿಂತ 10 ವರ್ಷ ಚಿಕ್ಕವನಾದ ನಿಕ್‍ರನ್ನು ಪ್ರಿಯಾಂಕ ಮದುವೆಯಾಗಲಿದ್ದಾರೆ.
ಈ ಹಿಂದೆಯೂ ಪ್ರಿಯಾಂಕ ತಮ್ಮ ಬೆರಳಿನಲ್ಲಿ ಧರಿಸಿದ್ದ ಉಂಗುರವನ್ನು ಮಾಧ್ಯಮಗಳಿಗೆ ಕಾಣಬಂದತೆ ಮಾಡಲು ಯತ್ನಿಸಿದ್ದರು. ಆದರೆ ಈ ವೀಡಿಯೋ ಸಹ ಸಖತ್ ವೈರಲ್ ಆಗಿತ್ತು. ನಾನು ಸಿಂಗಲ್ ಎಂದೇ ಸಂದರ್ಶನದಲ್ಲಿ ಹೇಳಿದ್ದ ಪ್ರಿಯಾಂಕ ಉಂಗುರವನ್ನು ಮರೆ ಮಾಚಿದ್ದು ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿತ್ತು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
https://www.youtube.com/watch?v=iCAHQDrpiCg&utm_source=inshorts&utm_medium=referral&utm_campaign=fullarticle
Priyanka Chopra and Nick Jonas at their 'roka' ceremony in Mumbai, earlier today. #PriyankaNickEngagement pic.twitter.com/4HKyVm442c
— ANI (@ANI) August 18, 2018