ನವದೆಹಲಿ: ಕೇವಲ ನಟನೆಯಲ್ಲಿ ಮಾತ್ರವಲ್ಲದೇ ತನ್ನ ಸೌಂದರ್ಯದಿಂದಲೂ ನಟಿ ಪ್ರಿಯಾಂಕಾ ಚೋಪ್ರಾ ಎಲ್ಲರ ಮನಸೆಳೆದಿದ್ದಾರೆ.
ಹೌದು. 34 ವರ್ಷದ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ 2017ನೇ ಸಾಲಿನ ಜಗತ್ತಿನ ಎರಡನೇ ಅತ್ಯಂತ ಸುಂದರ ಮಹಿಳೆ ಎಂದು ಲಾಸ್ ಏಂಜಲೀಸ್‍ನ ಬುಝ್‍ನೆಟ್ ಘೋಷಣೆ ಮಾಡಿದೆ.
ಏಂಜಲೀನಾ ಜೂಲಿ, ಎಮ್ಮ ವಾಟ್ಸಾನ್, ಬ್ಲೇಕ್ ಲೈವ್‍ಲಿ ಹಾಗೂ ಮಿಶೆಲ್ ಒಬಾಮಾ ಇದ್ದರು. ಆದ್ರೆ ಇವರೆಲ್ಲರನ್ನೂ ಹಿಂದಿಕ್ಕಿ ಪ್ರಿಯಾಂಕಾ 2ನೇ ಸ್ಥಾನವನ್ನು ತನ್ನದಾಗಿಸಿಕೊಂಡಿದ್ದಾರೆ. ಮೊದಲ ಸ್ಥಾನವನ್ನು ಪಾಪ್ ತಾರೆ ಬಿಯೋನ್ಸ್ ಪಡೆದುಕೊಂಡಿದ್ದಾರೆ. ಈ ಬಗ್ಗೆ ಪ್ರಿಯಾಂಕಾ ಚೋಪ್ರಾ ಶನಿವಾರ ಟ್ವೀಟ್ ಮಾಡಿದ್ದು, ವೋಟ್ ಮಾಡಿದ ಎಲ್ಲರಿಗೂ ಧನ್ಯವಾದ ತಿಳಿಸಿದ್ರು.
Thank u @BUZZNET and all who voted. @Beyonce is my number 1 too!! https://t.co/N6F8syOdsz
— PRIYANKA (@priyankachopra) April 1, 2017
ಸದ್ಯ ಪ್ರಿಯಾಂಕಾ ಚೋಪ್ರಾ `ಬೇ ವಾಚ್’ ಎಂಬ ಹಾಲಿವುಡ್ ಚಿತ್ರವೊಂದರಲ್ಲಿ ಅಭಿನಯಿಸಿದ್ದು, ಶೀಘ್ರವೇ ಚಿತ್ರ ರಿಲೀಸ್ ಆಗಲಿದೆ. ಸೇತ್ ಗೋರ್ಡನ್ ನಿರ್ದೇಶಿಸಿರುವ ಈ ಚಿತ್ರದಲ್ಲಿ ಡ್ವೇಯ್ನ್ ಜಾನ್ಸನ್, ಝಾಕ್ ಎಫ್ರಾನ್, ಅಲೆಕ್ಸಾಂಡ್ರಾ ದಡ್ಡಾರಿಯೋ ಮೊದಲಾದವರು ಮುಖ್ಯ ಭೂಮಿಕೆಯಲ್ಲಿದ್ದಾರೆ. ಈ ಚಿತ್ರವು ಮಾರ್ಚ್ 26ರಂದು ಬಿಡುಗಡೆಯಾಗುವ ನಿರೀಕ್ಷೆಯಿದೆ.
The world has given its verdict..@priyankachopra is one of the 30 most beautiful women in the world! https://t.co/yHF4biwNzM pic.twitter.com/safa9nVv8K
— Team Priyanka Chopra (@TeamPriyanka) April 2, 2017
Whoa!! Former Miss World and International icon @priyankachopra voted 2nd most beautiful women in the world (2016-2017). Take a bow Peecee!! pic.twitter.com/s0u2jIz9io
— Miss India (@feminamissindia) April 2, 2017
Most Beautiful Women 2017: #PriyankaChopra trumps #AngelinaJolie, #EmmaStone & #EmmaWatson https://t.co/TckxBZn3e7 @priyankachopra
— pinkvilla (@pinkvilla) April 2, 2017