ಬಾಲಿವುಡ್ ಖ್ಯಾತ ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಮದುವೆಯಾದ ಬಳಿಕ ಪತಿ ನಿಕ್ ಜೋನಸ್ ಜೊತೆ ಅಮೆರಿಕಾದಲ್ಲಿ (America) ನೆಲೆಸಿದ್ದರು. ಅಲ್ಲಿಂದಲೇ ಅವರು ಅನೇಕ ಕಾರ್ಯಕ್ರಮಗಳಿಗೂ ಭಾಗಿಯಾದರು. ಮಗುವಾದ ನಂತರ ಬಹುತೇಕ ಅಮೆರಿಕಾದಲ್ಲೇ ಉಳಿದರು. ಇದೀಗ ಬರೋಬ್ಬರಿ ಮೂರು ವರ್ಷಗಳ ಬಳಿಕ ತವರಿಗೆ ಬಂದಿಳಿದಿದ್ದಾರೆ ನಟಿ. ಮುಂಬೈಗೆ (Mumbai) ಬಂದಿಳಿದ ಬೋರ್ಡಿಂಗ್ ಪಾಸ್ ಸಮೇತ ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಮಗಳ ಜೊತೆ ಭಾರತಕ್ಕೆ ಬಂದಿಳಿದಿರುವ ಪ್ರಿಯಾಂಕಾ, ಅಂತಿಮವಾಗಿ ಮನೆಗೆ ಹೋಗುತ್ತಿದ್ದೇನೆ ಎಂದು ಮಗಳೊಂದಿಗೆ ಇರುವ ಫೋಟೋವನ್ನು ಅವರು ಶೇರ್ ಮಾಡಿದ್ದಾರೆ. ಮೊಮ್ಮಗಳನ್ನು ನೋಡಲು ಅಮೆರಿಕಾಗೆ ಹೋಗಿದ್ದ ಪ್ರಿಯಾಂಕಾ ತಾಯಿ, ಇದೀಗ ಮೊಮ್ಮಗಳನ್ನು ಮನೆ ತುಂಬಿಸಿಕೊಂಡು ಸಂಭ್ರಮಿಸಿದ್ದಾರೆ. ಇದನ್ನೂ ಓದಿ:ಖಾಸಗಿ ವಿಮಾನ ಖರೀದಿಸಿದ್ರಾ ರಿಷಬ್ ಶೆಟ್ಟಿ? ‘ಬಡವ್ರ ಮಕ್ಕಳು ಬೆಳಿಬೇಕು’ ಟ್ರೋಲ್
ಗಾಯಕ ನಿಕ್ ಜೋನಸ್ (Nick Jonas) ಜೊತೆ ಪ್ರಿಯಾಂಕಾ ಮದುವೆಯಾದ ನಂತರ ಬಾಲಿವುಡ್ ಸಿನಿಮಾ ರಂಗದಿಂದಲೇ ದೂರ ಉಳಿದಿದ್ದರು. ಹಾಲಿವುಡ್ ನಲ್ಲಿ ಸಿನಿಮಾ, ವೆಬ್ ಸೀರಿಸ್ ಹಾಗೂ ಶೋ ಗಳನ್ನು ನಡೆಸಿಕೊಡುತ್ತಿದ್ದರು. ಮೂರು ವರ್ಷಗಳ ಬಳಿಕ ಮುಂಬೈಗೆ ವಾಪಸ್ಸಾಗಿದ್ದರಿಂದ ಬಾಲಿವುಡ್ ಸಿನಿಮಾದಲ್ಲಿ ಅವರು ಮುಂದೆ ನಟಿಸಲಿದ್ದಾರೆ ಎನ್ನುವ ಕುತೂಹಲ ಮೂಡಿದೆ. ಆ ಕುರಿತು ಅವರು ಯಾವುದೇ ಮಾಹಿತಿಯನ್ನೂ ಹಂಚಿಕೊಂಡಿಲ್ಲ.