ಬಾಲಿವುಡ್(Bollywood) ಬ್ಯೂಟಿ ಪ್ರಿಯಾಂಕಾ ಚೋಪ್ರಾ(Priyanka Chopra) ಮತ್ತೆ ಸುದ್ದಿಯಲ್ಲಿದ್ದಾರೆ. ಇತ್ತೀಚೆಗಷ್ಟೇ ಭಾರತಕ್ಕೆ ಭೇಟಿ ಕೊಟ್ಟು ಹೋಗಿದ್ದರು. ಈ ಬೆನ್ನಲ್ಲೇ ಚಿತ್ರರಂಗದ ನಟರ ಬಗ್ಗೆ ಪ್ರಿಯಾಂಕಾ ನೀಡಿರುವ ಹೇಳಿಕೆ ಸಖತ್ ಸದ್ದು ಮಾಡುತ್ತಿದೆ.
ಪ್ರಿಯಾಂಕಾ ಚೋಪ್ರಾ ಸದ್ಯ ಮಗಳ ಪಾಲನೆಯ ಜೊತೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಕ್ರಿಸ್‌ಮಸ್ ಆಚರಣೆಗೂ ಕೂಡ ಈಗಿಂದಲೇ ಭರ್ಜರಿ ತಯಾರಿ ನಡೆಯುತ್ತಿದೆ. ಈ ಮಧ್ಯೆ ಪ್ರಿಯಾಂಕಾ ಸಂದರ್ಶನವೊಂದರಲ್ಲಿ ನೀಡಿರುವ ಹೇಳಿಕೆ ಸಖತ್ ಸದ್ದು ಮಾಡುತ್ತಿದೆ. ಚಿತ್ರರಂಗದಲ್ಲಿ ನಟರಿಗೆ ಹೆಚ್ಚಿನ ಆಧ್ಯತೆ ನೀಡುತ್ತಾರೆ. ಅಷ್ಟಕ್ಕೂ ಅವರು ಏನೂ ಮಾಡುವುದೇ ಇಲ್ಲಾ ಎಂದು ನಟಿ ಮಾತನಾಡಿದ್ದಾರೆ. ಇದನ್ನೂ ಓದಿ:‘ಲೈಗರ್’ ಸಿನಿಮಾಗೆ ಹಣ ಎಲ್ಲಿಂದ ಬಂತು?: ನಟಿ, ನಿರ್ದೇಶಕನಿಗೆ ‘ಇಡಿ’ ಗ್ರಿಲ್
ಚಿತ್ರರಂಗದಲ್ಲಿ ನಟರಿಗೆ ಹೆಚ್ಚಿನ ಕ್ರೆಡಿಟ್ ಕೊಡಲಾಗುತ್ತದೆ. ನಟರು ಏನನ್ನು ಮಾಡುವುದಿಲ್ಲ. ನಟರು ಬೇರೆಯವರು ಬರೆದ ಕಥೆಯಲ್ಲಿ ನಟನೆ ಮಾಡುತ್ತಾರೆ. ಹಾಗೆಯೇ ಬೇರೆಯವರ ನೃತ್ಯ ಸಂಯೋಜನೆಯ ಹೆಜ್ಜೆಗಳಿಗೆ ನೃತ್ಯ ಮಾಡುತ್ತಾರೆ. ಹೇರೆ ಸೆಟಪ್, ಮೇಕಪ್ ಕೂಡ ಯಾರೋ ಮಾಡುತ್ತಾರೆ. ಹಾಗಾದ್ರೆ ನಾವು ಏನೂ ಮಾಡುತ್ತಿದ್ದೇವೆ ಎಂದು ಪ್ರಶ್ನೆ ಮಾಡಿದ್ದಾರೆ.