ಮುಂಬೈ: ಚಿನ್ನದ ಹುಡುಗಿ, ಅಥ್ಲೆಟಿಕ್ಸ್ ಪ್ರತಿಭೆ ಪಿ.ಟಿ.ಉಷಾ ಜೀವನಾಧರಿತ ಸಿನಿಮಾ ಬಾಲಿವುಡ್ ಬರಲು ರೆಡಿಯಾಗುತ್ತಿದೆ. ಎರಡು ವರ್ಷಗಳ ಬಳಿಕ ದೇಸಿ ಗರ್ಲ್ ಪ್ರಿಯಾಂಕಾ ಚೋಪ್ರಾ ಸಿನಿಮಾ ಮಾಡಲು ಒಪ್ಪಿಕೊಂಡಿದ್ದಾರೆ.
ಪ್ರಿಯಾಂಕಾ ಸಿನಿಮಾದಲ್ಲಿ ನಟಿಸಲು ಈ ಹಿಂದೆಯೇ ಒಪ್ಪಿಕೊಂಡಿದ್ದರು. ಆದರೆ ಕಳೆದ ಎರಡು ವರ್ಷಗಳಿಂದ ಹಾಲಿವುಡ್ ನಲ್ಲಿ ಬ್ಯೂಸಿ ಆಗಿದ್ದರು. ಸದ್ಯ ಅವರು ಚಿತ್ರೀಕರಣದಲ್ಲಿ ಭಾಗಿಯಾಗಲು ಒಪ್ಪಿಕೊಂಡಿದ್ದಾರೆ. ಉಷಾರ ಪಾತ್ರ ನಿರ್ವಹಿಸಲು ಪ್ರಿಯಾಂಕಾ ತರಬೇತಿ ಮತ್ತು ವಿಶೇಷ ತಯಾರಿಗಳನ್ನು ನಡೆಸಬೇಕಾಗಿದ್ದು, ಅದಕ್ಕಾಗಿ ಒಂದು ವರ್ಷ ಸಮಯ ಬೇಕಾಗುತ್ತದೆ ಎಂದು ಸಿನಿಮಾದ ನಿರ್ದೇಶಕಿ ರೇವತಿ ಹೇಳಿದ್ದಾರೆ.
Advertisement
Advertisement
ಸಿನಿಮಾ ಒಟ್ಟು ಮೂರು ಹಂತಗಳಲ್ಲಿ ಮೂಡಿ ಬರಲಿದೆ. ಒಂದು ಉಷಾರ ಬಾಲ್ಯ, ಕ್ರೀಡಾಪಟು ಮತ್ತು ತಾಯಿಯಾಗಿ ಕೋಚ್ ಆಗಿರುವುದನ್ನು ತೋರಿಸಲಿದೆ. ಹಳೆಯದನ್ನು ಮತ್ತೊಮ್ಮೆ ತೆರೆಯ ಮೇಲೆ ತರಬೇಕಾಗಿರುವುದರಿಂದ ಸಿನಿಮಾದಲ್ಲಿ ಸಾಕಷ್ಟು ಗ್ರಾಫಿಕ್ಸ್ ಬಳಕೆಯಾಗಲಿದೆ. ಸಿನಿಮಾ ಅಂದಾಜು 100 ಕೋಟಿ ರೂ. ಬಜೆಟ್ ನಲ್ಲಿ ನಿರ್ಮಾಣವಾಗಲಿದೆ.
Advertisement
ಇನ್ನೂ ಸಿನಿಮಾದಲ್ಲಿ ಮೂರು ವಿಶೇಷ ಪಾತ್ರಗಳು ಸಹ ಬರಲಿದೆ. ಮೊದಲನೇಯದು ಉಷಾರ ತಂದೆ, ಎರಡನೇಯದು ಕೋಚ್ ಮತ್ತು ಮೂರನೇಯ ಪಾತ್ರದಲ್ಲಿ ಪತಿಯನ್ನು ಸಿನಿಮಾದಲ್ಲಿ ನೋಡಬಹುದಾಗಿದೆ. ಆದರೆ ಈ ವಿಶೇಷ ಪಾತ್ರಗಳನ್ನು ಯಾವ ನಟರೂ ನಟಿಸಲಿದ್ದಾರೆ ಎಂಬುದನ್ನು ಚಿತ್ರತಂಡ ಬಿಟ್ಟುಕೊಟ್ಟಿಲ್ಲ.
Advertisement
ಪಿ.ಟಿ.ಉಷಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡ ಕಾರಣ ಮಲೆಯಾಳಂ, ಹಿಂದಿ, ಇಂಗ್ಲಿಷ್, ರಷ್ಯೀಯನ್ ಚೈನೀಸ್ ಭಾಷೆಗಳಲ್ಲಿ ಮೂಡಿಬರಲಿದೆ. ಈ ಮೊದಲು ಬಾಕ್ಸರ್ ಮೇರಿಕೋಮ್ ಜೀವನಾಧರಿತ ಸಿನಿಮಾದಲ್ಲಿ ಪ್ರಿಯಾಂಕಾ ಎಲ್ಲರಿಂದಲೂ ಭೇಷ್ ಅಂತಾ ಅನ್ನಿಸಿಕೊಂಡಿದ್ದರು. ಉಷಾರ ಪಾತ್ರವನ್ನು ಮಾಡಲು ನಟಿ ಸೋನಂ ಕಪೂರ್ ಕೂಡ ಒಲವು ತೋರಿಸಿದ್ದರು.
ಇತ್ತೀಚಿಗೆ ಬಾಲಿವುಡ್‍ನಲ್ಲಿ ಜೀವನಾಧರಿತ ಕಥೆ ಆಧಾರಿತ ಸಿನಿಮಾಗಳು ಸೆಟ್ಟೇರುತ್ತಿವೆ. ಕೆಲವು ಸಿನಿಮಾಗಳು ಬಿಡುಗಡೆಗೊಂಡು ಅಭೂತಪೂರ್ವ ಯಶಸ್ಸನ್ನು ಪಡೆದುಕೊಂಡಿವೆ. ಹೀಗಾಗಿ ಒಂದರ ನಂತರ ಜೀವನಾಧರಿತ ಸಿನಿಮಾಗಳು ಬಾಲಿವುಡ್ ನಲ್ಲಿ ಬರುತ್ತಿವೆ.