ಬೆಂಗಳೂರು: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಯ ಬಗ್ಗೆ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಟ್ವೀಟ್ ಮಾಡಿದ್ದರು. ಅವರ ಟ್ವೀಟ್ ಗೆ ಡಿಜಿಪಿ ಡಿ. ರೂಪಾ ಅವರು ಗರಂ ಆಗಿ ಉತ್ತರಿಸಿದ್ದರು. ಆದರೆ ಈಗ ಇವರ ಟ್ವೀಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಜೊತೆಗೆ ರೂಪಾ ಅವರ ಅಭಿಮಾನಿಗಳು ಅಪಾರ ಮೆಚ್ಚಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ.
ಫೆ.14 ರಂದು ನಡೆದಿದ್ದ ಉಗ್ರರ ದಾಳಿಗೆ ಅಂದು ನಟಿ ಪ್ರಿಯಾಂಕಾ ಚೋಪ್ರಾ ಅವರು, “ಪುಲ್ವಾಮಾದಲ್ಲಿ ಯೋಧರ ಮೇಲೆ ನಡೆದ ದಾಳಿ ನಿಜಕ್ಕೂ ಶಾಕ್ ಆಗಿದೆ. ಆದರೆ ದ್ವೇಷಿಸುವುದು ಉತ್ತರವಲ್ಲ. ದಾಳಿಯಲ್ಲಿ ಹುತಾತ್ಮರಾದ ಯೋಧರ ಕುಟುಂಬಗಳಿಗೆ ಹಾಗೂ ಗಾಯಾಳು ಯೋಧರಿಗೆ ಶಕ್ತಿ ನೀಡಲಿ” ಎಂದು ಟ್ವೀಟ್ ಮಾಡಿದ್ದರು.
Advertisement
Advertisement
ಪ್ರಿಯಾಂಕಾ ಅವರು ಟ್ವೀಟ್‍ಗೆ ಸಾಮಾಜಿಕ ಜಾಲತಾಣಗಲ್ಲಿ ಅಪಾರ ಟೀಕೆ ವ್ಯಕ್ತವಾಗುತ್ತಿತ್ತು. ಈ ಟ್ವೀಟ್ ಗೆ ಡಿಜಿಪಿ ರೂಪಾ ಅವರು, “ಯೋಧರ ಮೇಲಿನ ದಾಳಿ ಕೇವಲ ಪ್ರೀತಿ-ದ್ವೇಷದ ಕಥೆಯಲ್ಲ. ಇದೊಂದು ರಾಷ್ಟ್ರದ ಮೇಲಿನ ದಾಳಿಯಾಗಿದೆ. ರಾಷ್ಟ್ರದ ಹಕ್ಕಿನ ಅಧಿಕಾರ ವರ್ಸಸ್ ಶಾಂತಿಯುತ ದೇಶವನ್ನು ವಿಘಟನೆಗೊಳಿಸಲು ಅಕ್ರಮ ಶಕ್ತಿಗಳು ನಡೆಸುವ ದಾಳಿಯಾಗಿದೆ. ಇದೊಂದು ಅಧಿಕಾರದ ಸಮೀಕರಣ” ಎಂದು ರೀಟ್ವೀಟ್ ಮಾಡಿ ಅಭಿಪ್ರಾಯ ವ್ಯಕ್ತಪಡಿಸಿದ್ದರು.
Advertisement
ಡಿಜಿಪಿ ರೂಪಾ ಅವರು ಮಾಡಿರುವ ಟ್ವೀಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಇದುವರೆಗೂ 16.4 ಸಾವಿರ ಮಂದಿ ಲೈಕ್ಸ್ ಮಾಡಿದ್ದಾರೆ. ಇನ್ನೂ ರೂಪಾ ಅವರ ಟ್ವೀಟ್ ಗೆ 7 ಸಾವಿರ ನೆಟ್ಟಿಗರು ರೀಟ್ವೀಟ್ ಮಾಡುವ ಮೂಲಕ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ.
Advertisement
Attack on jawans is not just a simple love-hate story. It's a hit at the basic identity of a nation. It's about "Power of the rightful authority of a nation" Vs"Power of the illegal forces trying to sabotage a nation's peaceful existence"–equation of power .@priyankachopra https://t.co/xMrEm34tQB
— D Roopa IPS (@D_Roopa_IPS) February 15, 2019
ಇಲ್ಲಿಯವರೆಗೆ ಕಲಾವಿದರ ಟ್ವೀಟ್ ಗಳನ್ನು ಖಂಡಿಸಿ ನೆಟ್ಟಿಗರು ಟ್ರೋಲ್ ಮಾಡುತ್ತಿದ್ದರು. ಆದರೆ ಈ ಬಾರಿ ಐಪಿಎಸ್ ಅಧಿಕಾರಿಯೇ ಪ್ರಿಯಾಂಕಾ ಅವರನ್ನು ಟ್ರೋಲ್ ಮಾಡಿ ದೇಶಪ್ರೇಮ ತೋರಿದಿದ್ದಾರೆ ಎಂದು ಹೇಳಿ ಜನ ಮೆಚ್ಚುಗೆ ಸೂಚಿಸುತ್ತಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv