Connect with us

Bollywood

ನೀರವ್ ಮೋದಿಗೆ ಬೈ ಬೈ ಹೇಳಿದ ಪ್ರಿಯಾಂಕಾ ಚೋಪ್ರಾ

Published

on

-ನೀರವ್ ಮೋದಿಯ ಆಭರಣಗಳ ಪ್ರಚಾರ ರಾಯಭಾರಿ ಸ್ಥಾನಕ್ಕೆ ಪ್ರಿಯಾಂಕಾ ಗುಡ್ ಬೈ

ಮುಂಬೈ: ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ ಸುಮಾರು 11,300 ಕೋಟಿ ರೂಪಾಯಿ ವಂಚಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆಭರಣ ಉದ್ಯಮಿ ನೀರವ್ ಮೋದಿ ವಿರುದ್ದ ತನಿಖೆ ತೀವ್ರಗೊಳ್ಳುತ್ತಿದ್ದಂತೆ, ಒಂದು ಕಾಲದಲ್ಲಿ ನೀರವ್ ಮೋದಿ ಜೊತೆ ವೇದಿಕೆ ಹಂಚಿಕೊಳ್ಳುತ್ತಿದ್ದ, ನೀರವ್ ಜೊತೆ ಪಾರ್ಟಿಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ, ಅವರ ಆಭರಣ ಉತ್ಪನ್ನಗಳಿಗೆ ಪ್ರಚಾರ ರಾಯಭಾರಿಯಾಗಿ ಕೋಟಿ ಕೋಟಿ ಸಂಭಾವನೆಗಳನ್ನು, ದುಬಾರಿ ಉಡುಗೊರೆಗಳನ್ನು ಪಡೆಯುತ್ತಿದ್ದ ಬಾಲಿವುಡ್ ನ ತಾರೆಯರು ನಿಧಾನವಾಗಿ ತಮಗೂ ನೀರವ್ ಮೋದಿಗೂ ಸಂಬಂಧವಿಲ್ಲವೆಂಬಂತೆ ಅಂತರವನ್ನು ಕಾಯ್ದುಕೊಳ್ಳಲು ಮುಂದಾಗಿದ್ದಾರೆ.

2009ರಿಂದಲೂ ಉದ್ಯಮಿ ನೀರವ್ ಮೋದಿಯವರ ಜ್ಯುವೆಲ್ಲರಿ ಉತ್ಪನ್ನಗಳ ಪ್ರಚಾರ ರಾಯಭಾರಿಯಾಗಿ ಕೋಟಿ-ಕೋಟಿ ಸಂಭಾವನೆ ಜೊತೆಗೆ ದುಬಾರಿ ಉಡುಗೊರೆಗಳನ್ನು ಪಡೆದಿದ್ದ, ನೀರವ್ ಆಯೋಜಿಸುತ್ತಿದ್ದ ಪಾರ್ಟಿಗಳಲ್ಲಿ, ಇವೆಂಟ್‍ಗಳಲ್ಲಿ ಕಾಣಿಸಿಕೊಂಡು ಕಾರ್ಯಕ್ರಮಕ್ಕೆ ರಂಗು ನೀಡುತ್ತಿದ್ದ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಇದೀಗ ತಮಗೂ ನೀರವ್ ಮೋದಿಗೂ ಯಾವುದೇ ಸಂಬಂಧವಿಲ್ಲ ಎನ್ನುತ್ತಿದ್ದಾರೆ.

ನೀರವ್ ಮೇಲಿನ ವಂಚನೆ ಆರೋಪಗಳು ಗಂಭೀರವಾಗುತ್ತಿದ್ದಂತೆ, ಪ್ರಿಯಾಂಕಾ ಚೋಪ್ರಾ ಮತ್ತು ನೀರವ್ ಮೋದಿ ನಡುವೆ ಉತ್ತಮ ಸಂಬಂಧವಿತ್ತು, ಪ್ರಿಯಾಂಕಾ ಕೂಡ ನೀರವ್ ಅವರಿಂದ ಸಾಕಷ್ಟು ಆರ್ಥಿಕ ಲಾಭಗಳನ್ನು ಪಡೆದಿದ್ದಾರೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿದ್ದವು. ಆದರೆ ಈ ಬಗ್ಗೆ ಎಲ್ಲಿಯೂ ತುಟಿಪಿಟಕ್ ಎನ್ನದ ಪ್ರಿಯಾಂಕಾ, ಈ ವಿಷಯದಿಂದ ಸಾಕಷ್ಟು ಅಂತರವನ್ನು ಕಾಯ್ದುಕೊಂಡಿದ್ದರು. ಆದರೆ ಯಾವಾಗ ಈ ಪ್ರಕರಣದಲ್ಲಿ ಒಂದರ ಹಿಂದೊಂದು ಬಾಲಿವುಡ್ ಮಂದಿಯ ಹೆಸರುಗಳು ಹೊರಬರಲು ಆರಂಭಿಸಿದವೋ, ಎಚ್ಚೆತ್ತುಕೊಂಡ ಪ್ರಿಯಾಂಕಾ, ನೀರವ್ ಮೋದಿ ವಿರುದ್ಧ ಇತ್ತೀಚಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ ತಮ್ಮ ಗುತ್ತಿಗೆಯನ್ನು ರದ್ದುಪಡಿಸಿದ್ದಾರೆ.

ಈ ವಿಷಯವನ್ನು ಖಚಿತಪಡಿಸಿರುವ ಪ್ರಿಯಾಂಕ ಚೋಪ್ರಾ ವಕ್ತಾರರು, ಇನ್ನು ಮುಂದೆ ನೀರವ್ ಮೋದಿ ಕಂಪೆನಿಯ ಉತ್ಪನಗಳಲ್ಲಿ ಪ್ರಿಯಾಂಕಾ ಕಾಣಿಸಿಕೊಳ್ಳುವುದಿಲ್ಲ. ನೀರವ್‍ಗೂ ಅವರಿಗೂ ಯಾವುದೇ ಸಂಬಂಧಗಳು ಇರುವುದಿಲ್ಲ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕಳೆದ ವರ್ಷವಷ್ಟೇ, ಬಾಲಿವುಡ್ ನಟ ಸಿದ್ಧಾರ್ಥ್ ಮಲ್ಹೋತ್ರಾ ಜೊತೆಗೆ ನೀರವ್ ಮೋದಿಯವರ ಕಂಪೆನಿಯ ಜ್ಯುವೆಲ್ಲರಿ ಜಾಹೀರಾತುಗಳಲ್ಲಿ ಪ್ರಿಯಾಂಕಾ ಚೋಪ್ರಾ ಕಾಣಿಸಿಕೊಂಡಿದ್ದರು. ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಟ ಸಿದ್ಧಾರ್ಥ್ ಮಲ್ಹೋತ್ರಾ, ಬ್ರಾಂಡ್ ಜೊತೆಗೆ ತಮ್ಮ ಗುತ್ತಿಗೆ ಮುಗಿದಿರುವುದರಿಂದ ತಾವು ಯಾವುದೇ ಕಾನೂನು ಕ್ರಮ ತೆಗೆದುಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.

Click to comment

Leave a Reply

Your email address will not be published. Required fields are marked *