ಕಲಬುರಗಿ: ರಾಜ್ಯ ಸರ್ಕಾರ ಈ ಬಾರಿ ಬಜೆಟ್‍ನಲ್ಲಿ ಕಲ್ಯಾಣ ಕರ್ನಾಟಕ ಭಾಗವನ್ನು ಕಡೆಗಣಿಸಿದೆ ಎಂದು ಶಾಸಕ ಪ್ರಿಯಾಂಕ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಈ ಮೊದಲು 371(ಜೆ) ತಿರಸ್ಕರಿಸಿತ್ತು, ಮತ್ತೆ ಈಗ ಬಜೆಟ್‍ನಲ್ಲಿಯೂ ಕಲ್ಯಾಣ ಕರ್ನಾಟಕಕ್ಕೆ ಅನ್ಯಾಯ ಮಾಡಲಾಗಿದೆ. ಕೇವಲ ಹೆಸರು ಬದಲಾವಣೆಯಿಂದ ನಮ್ಮ ಭಾಗದ ಭವಿಷ್ಯ ಬದಲಾಗದು ಎಂದು ಟೀಕಿಸಿದ್ದಾರೆ. ಜೊತೆಗೆ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದ ರಾಜಕಾರಣಿಗಳ ವಿರುದ್ಧವೂ ಗುಡುಗಿದ್ದಾರೆ.
Advertisement
Advertisement
ಟ್ವೀಟ್‍ನಲ್ಲಿ ಏನಿದೆ?
ಕಲ್ಯಾಣ ಕರ್ನಾಟಕಕ್ಕೆ ಬಿಜೆಪಿ ಸರ್ಕಾರದ ಕೊಡುಗೆ ಶೂನ್ಯ. ಕೇವಲ ಹೆಸರಿನ ಬದಲಾವಣೆಯಿಂದ ನಮ್ಮ ಭಾಗದ ಜನರ ಭವಿಷ್ಯ ಬದಲಾಗುವುದಿಲ್ಲ. ಬಿಜೆಪಿ ಈ ಮೊದಲು 371(ಜೆ) ಅನ್ನು ತಿರಸ್ಕರಿಸಿತ್ತು. ಈಗ ಬಜೆಟ್ನಲ್ಲಿಯೂ ಈ ಪ್ರದೇಶವನ್ನು ಕಡೆಗಣಿಸಿದೆ. ಕಾಂಗ್ರೆಸ್ ಸರ್ಕಾರದಿಂದ ಅನ್ಯಾಯವಾಗುತ್ತಿದೆ ಎಂದು ರಾಜೀನಾಮೆ ನೀಡಿದ ರಾಜಕಾರಣಿಗಳು ಎಲ್ಲಿದ್ದಾರೆ? ಎಂದು ಬರೆದು ಪ್ರಿಯಾಂಕ್ ಖರ್ಗೆ ಅವರು ಟ್ವಿಟ್ಟರ್ ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾಗೆಯೇ ರಾಜ್ಯ ಬಜೆಟ್ ಬಗ್ಗೆ ಸರಣಿ ಟ್ವೀಟ್‍ಗಳನ್ನು ಮಾಡಿ ಟಾಂಗ್ ಕೊಟ್ಟಿದ್ದಾರೆ.
Advertisement
ಕಲ್ಯಾಣ ಕರ್ನಾಟಕಕ್ಕೆ ಬಿಜೆಪಿ ಸರ್ಕಾರದ ಕೊಡುಗೆ ಶೂನ್ಯ..! ಕೇವಲ ಹೆಸರಿನ ಬದಲಾವಣೆಯಿಂದ ನಮ್ಮ ಭಾಗದ ಜನರ ಭವಿಷ್ಯ ಬದಲಾಗುವುದಿಲ್ಲ.
ಬಿಜೆಪಿ ಈ ಮೊದಲು 371J ಅನ್ನು ತಿರಸ್ಕರಿಸಿತ್ತು. ಈಗ ಬಜೆಟ್ನಲ್ಲಿಯೂ ಈ ಪ್ರದೇಶವನ್ನು ಕಡೆಗಣಿಸಿದೆ.
ಕಾಂಗ್ರೆಸ್ ಸರ್ಕಾರದಿಂದ ಅನ್ಯಾಯವಾಗುತ್ತಿದೆ ಎಂದು ರಾಜೀನಾಮೆ ನೀಡಿದ ರಾಜಕಾರಣಿಗಳು ಎಲ್ಲಿದ್ದಾರೆ?
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) March 5, 2020