ಕಲಬುರಗಿ: ಹಿಜಬ್ ಕೇಸರಿ ಶಾಲು ವಿಚಾರವಾಗಿ ರಾಜ್ಯದ ಕಾಲೇಜುಗಳಲ್ಲಿನ ವಾತಾವರಣ ಪ್ರಕ್ಷುಬ್ಧವಾಗಿದ್ದು ಇದಕ್ಕೆ ರಾಜ್ಯ ಸರ್ಕಾರವೇ ನೇರ ಕಾರಣ ಎಂದು ಮಾಜಿ ಸಚಿವ ಹಾಗೂ ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ.
ಟ್ವೀಟ್ ಮೂಲಕ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಅವರು, ಹಲವಾರು ದಿನಗಳಿಂದ ವಿವಾದವಿದ್ದರೂ, ಬಗೆಹರಿಸಲು ಅವಕಾಶವಿದ್ದರೂ ಸರ್ಕಾರ ಬೆಳೆಯಲು ಬಿಟ್ಟಿದೆ. ರಾಜ್ಯಾದ್ಯಂತ ಗಲಭೆಯಾಗುತ್ತದೆ ಎಂದು ನಿಮಗೆ ತಿಳಿದಿರಲಿಲ್ಲವೇ? ಶಾಲು ಹಂಚುವವರನ್ನು, ಪ್ರತಿಭಟನೆ ಸಂಘಟಿಸುವವರನ್ನು ನಿಯಂತ್ರಿಸಲು ಬಿಟ್ಟಿದ್ದೇಕೆ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಶಾಲೆಗಳು ಧರ್ಮ ಪ್ರದರ್ಶನದ ಸ್ಥಳವಲ್ಲ, ಭಾರತೀಯರೆಂಬ ಒಗ್ಗಟ್ಟನ್ನು ಪ್ರದರ್ಶಿಸಿ: ಖುಷ್ಬೂ
Advertisement
ಬಿಜೆಪಿ ಸರ್ಕಾರವೇ ಈ ವಿವಾದಕ್ಕೆ ಗಲಭೆಗೆ ಕಾರಣ,
ಹಲವು ದಿನಗಳಿಂದ ವಿವಾದವಿದ್ದರೂ, ಬಗೆಹರಿಸಲು ಅವಕಾಶವಿದ್ದರೂ ಸರ್ಕಾರ ಬೆಳೆಯಲು ಬಿಟ್ಟಿದೆ,
ರಾಜ್ಯಾದ್ಯಂತ ಗಲಭೆಯಾಗುತ್ತದೆ ಎಂದು ಇಂಟಲಿಜೆನ್ಸ್ & ಪೊಲೀಸರಿಗೆ ತಿಳಿದಿರಲಿಲ್ಲವೇ?
ಶಾಲು ಹಂಚುವವರನ್ನು, ಪ್ರತಿಭಟನೆಯನ್ನು ಸಂಘಟಿಸುವವರನ್ನು ನಿಯಂತ್ರಿಸದೆ ಬಿಟ್ಟಿದ್ದೇಕೆ?
4/5
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) February 9, 2022
Advertisement
ಟ್ವಿಟ್ಟರ್‍ನಲ್ಲೇನಿದೆ?
ಶಿವಮೊಗ್ಗದಲ್ಲಿ ರಾಷ್ಟ್ರಧ್ವಜ ಹಾರಬೇಕಾದಲ್ಲಿ ಕೇಸರಿ ಧ್ವಜ ಹಾರಿಸಲಾಯ್ತು. ಸಾಗರದಲ್ಲಿ ಶಾಸಕರ ಎದುರೇ ಹಲ್ಲೆ ಘರ್ಷಣೆ ನಡೆಯಿತು. ಕುಶಾಲನಗರದಲ್ಲಿ ಕೇಸರಿ ಶಾಲು ಧರಿಸಲು ಒಪ್ಪದ ವಿದ್ಯಾರ್ಥಿಗೆ ಚೂರಿ ಇರಿಯಲಾಯ್ತು. ಪ್ರಾಧ್ಯಾಪಕರು, ಪೆÇಲೀಸರ ಮೇಲೆಯೇ ಹಲ್ಲೆಗಳು ನಡೆದವು. ಇದನ್ನೂ ಓದಿ: ಹಿಜಬ್ ವಿವಾದದಲ್ಲಿ ತಪ್ಪು ಮಾಡಿದವರನ್ನು ಬಂಧಿಸಲಿ: ತಂಗಡಗಿ
Advertisement
– ಶಿವಮೊಗ್ಗದಲ್ಲಿ ರಾಷ್ಟ್ರಧ್ವಜ ಹಾರಬೇಕಾದಲ್ಲಿ ಕೇಸರಿ ಧ್ವಜ ಹಾರಿಸಲಾಯ್ತು
– ಸಾಗರದಲ್ಲಿ ಶಾಸಕರ ಎದುರೇ ಹಲ್ಲೆ,ಘರ್ಷಣೆ ನಡೆಯಿತು
– ಕುಶಾಲನಗರದಲ್ಲಿ ಕೇಸರಿ ಶಾಲು ಧರಿಸಲೊಪ್ಪದ ವಿದ್ಯಾರ್ಥಿಗೆ ಚೂರಿ ಇರಿಯಲಾಯ್ತು
– ಪ್ರಾಧ್ಯಾಪಕರು, ಪೊಲೀಸರ ಮೇಲೆಯೇ ಹಲ್ಲೆಗಳು ನಡೆದವು
– ವಿದ್ಯಾರ್ಥಿನಿಗೆ ಸಾರ್ವಜನಿಕವಾಗಿ ಕಿರುಕುಳ ನೀಡಲಾಯ್ತು. 3/4
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) February 9, 2022
Advertisement
ರಾಜ್ಯದ ಯುವಜನತೆಗೆ ಉದ್ಯೋಗ ದೊರಕಿಸಿಕೊಡಬೇಕಾದ ಸರ್ಕಾರ ಶಿಕ್ಷಣವನ್ನು ವಂಚಿಸುತ್ತಿದೆ. ಕೌಶಲ್ಯ ತರಬೇತಿ ನೀಡಬೇಕಾದ ಸರ್ಕಾರ ಕೇಸರಿ ಶಲ್ಯದ ತರಬೇತಿ ನೀಡುತ್ತಿದೆ. ಪುಸ್ತಕ ಕೊಡಬೇಕಾದ ಸರ್ಕಾರ ಕೈಯಲ್ಲಿ ಕಲ್ಲು ಕೋಲು ಕೊಟ್ಟು ಕಳಿಸುತ್ತಿದೆ. ವಿದ್ಯಾಧೀಕ್ಷೆ ಬದಲು ತ್ರಿಶೂಲ ದೀಕ್ಷೆಗೆ ಪ್ರೇರೇಪಿಸುತ್ತಿದೆ.
ರಾಜ್ಯದ ಓದುವ ಮಕ್ಕಳು
> ತಮ್ಮ ಭವಿಷ್ಯದ ಚಿಂತನೆ ಏಕೈಕ ಗುರಿಯೊಂದಿಗೆ ಓದುತ್ತಿದ್ದರು
> ಬೇಧಭಾವ ಅರಿಯದೆ ಆಟಪಾಠಗಳಲ್ಲಿ ಒಂದಾಗುತ್ತಿದ್ದರು
> ರಾಜಕೀಯ ಹಾಗೂ ಧಾರ್ಮಿಕ ಪ್ರಲೋಭನೆಗೆ ಸಿಲುಕದೆ ನಿಷ್ಕಲ್ಮಶ ಮನಸ್ಸು ಹೊಂದಿದ್ದರು
ಇಂತಹಾ ಮನಸುಗಳಲ್ಲಿ ಈಗ ಏಕಾಏಕಿ ದ್ವೇಷದ ಕಿಚ್ಚು ಹಚ್ಚಲು ಬಿಜೆಪಿ ಅತ್ಯಂತ ಕೀಳು ಮಟ್ಟಕ್ಕೆ ಇಳಿದಿದೆ. 2/4
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) February 9, 2022
ರಾಜ್ಯದ ಓದುವ ಮಕ್ಕಳು ತಮ್ಮ ಭವಿಷ್ಯದ ಚಿಂತನೆ ಏಕೈಕ ಗುರಿಯೊಂದಿಗೆ ಓದುತ್ತಿದ್ದರು. ಬೇಧ ಭಾವ ಅರಿಯದೆ ಆಟ ಪಾಠಗಳಲ್ಲಿ ಒಂದಾಗುತ್ತಿದ್ದರು. ರಾಜಕೀಯ ಹಾಗೂ ಧಾರ್ಮಿಕ ಪ್ರಲೋಭನೆಗೆ ಸಿಲುಕದೆ ನಿಷ್ಕಲ್ಮಶ ಮನಸ್ಸು ಹೊಂದಿದ್ದರು. ಇಂತಹ ಮನಸ್ಸುಗಳಲ್ಲಿ ಈಗ ಏಕಾಏಕಿ ದ್ವೇಷದ ಕಿಚ್ಚು ಹಚ್ಚಲು ಬಿಜೆಪಿ ಅತ್ಯಂತ ಕೀಳುಮಟ್ಟಕ್ಕೆ ಇಳಿದಿದೆ. ಇದನ್ನೂ ಓದಿ: ಬ್ರಿಟಿಷರು ಬಿಜೆಪಿ ರೂಪದಲ್ಲಿ ಮತ್ತೆ ಭಾರತಕ್ಕೆ ಬಂದಿದ್ದಾರೆ: ಲಾಲೂ ಪ್ರಸಾದ್ ಯಾದವ್
ಗೃಹಸಚಿವರೇ, ಸಮಾಜವಾದದ ನೆಲವಾದ ನಿಮ್ಮದೇ ಶಿವಮೊಗ್ಗ ಜಿಲ್ಲೆಯಲ್ಲಿ ರಾಜ್ಯವೇ ತಲೆತಗ್ಗಿಸುವ ಘಟನೆಗಳು ನಡೆದಿವೆ, ನಿಮ್ಮದೇ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲಾಗದಿರುವುದು ನಿಮ್ಮ ಅಸಾಮರ್ಥ್ಯವೇ ಅಥವಾ ನಿಮ್ಮ ಕುಮ್ಮಕ್ಕು ಇದೆಯೇ?
ನೀವು ಜಪಿಸುವ ‘ಯುಪಿ ಮಾಡೆಲ್’ನ್ನು ಜಾರಿಗೊಳಿಸಿ ಕರ್ನಾಟಕವನ್ನು ಬೆಂಕಿಯಲ್ಲಿ ಬೇಯಿಸುವ ಇರಾದೆಯೇ?
5/5
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) February 9, 2022
ಸಮಾಜವಾದದ ನೆಲದಲ್ಲಿ ರಾಜ್ಯವೇ ತಲೆ ತಗ್ಗಿಸುವ ಘಟನೆಗಳು ನಡೆದಿವೆ. ನಿಮ್ಮದೇ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲಾಗದಿರುವುದು ನಿಮ್ಮ ಅಸಾಮಾಥ್ರ್ಯವೇ ಅಥವಾ ನಿಮ್ಮ ಕುಮ್ಮಕ್ಕು ಇದೆಯೇ? ನೀವು ಜಪಿಸುವ ಯುಪಿ ಮಾಡೆಲ್‍ಅನ್ನು ಜಾರಿಗೊಳಿಸಿ ಕರ್ನಾಟಕವನ್ನು ಬೆಂಕಿಯಲ್ಲಿ ಬೇಯಿಸುವ ಇರಾದೆಯೇ ಎಂದು ಪ್ರಶ್ನಿಸಿದ್ದಾರೆ.