ಮಂಡ್ಯ: ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಮೋದಿಯವರೇ ಬಂದು ನಿಲ್ಲಲಿ. ಅವರಿಗೂ ಸ್ವಾಗತ ಮಾಡುತ್ತೇವೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಮಂಡ್ಯದ ಮದ್ದೂರಿನಲ್ಲಿ ಪಂಥಾಹ್ವಾನ ನೀಡಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಉಮೇಶ್ ಜಾಧವ್ ಬಿಜೆಪಿಯಿಂದ ಸ್ಪರ್ಧೆ ಮಾಡುತ್ತಾರೆ ಎಂಬ ವಿಚಾರವಾಗಿ ಪ್ರತಿಕ್ರಿಯಿಸಿದರು. ಇದು ಪ್ರಜಾಪ್ರಭುತ್ವ ಯಾರೂ ಬೇಕಾದ್ರು ಸ್ಪರ್ಧೆ ಮಾಡಬಹುದು. ನೀವು ಬೇಕಾದ್ರು ಸ್ಪರ್ಧೆ ಮಾಡಬಹುದು. ಬೇಕಾದ್ರೆ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಮೋದಿಯವರೇ ಸ್ಪರ್ಧೆ ಮಾಡಲಿ. ಅವರಿಗೂ ಆಹ್ವಾನ ನೀಡುತ್ತೇವೆ ಎಂದು ಹೇಳಿದ್ದಾರೆ.
ಇದೇ ವೇಳೆ ಮಂಡ್ಯ ಕ್ಷೇತ್ರದಿಂದ ಸುಮಲತಾ ಅವರಿಗೆ ಟಿಕೆಟ್ ನೀಡುವ ಬಗ್ಗೆ ಪ್ರತಿಕ್ರಿಯಿಸಿ, ಸುಮಲತಾ ಅವರ ಸ್ಪರ್ಧೆ ಹೈ ಕಮಾಂಡ್‍ಗೆ ಬಿಟ್ಟ ವಿಚಾರ. ಟಿಕೆಟ್ ನಿರ್ಧರಿಸುವ ಮಟ್ಟಕ್ಕೆ ನಾನು ಬೆಳೆದಿಲ್ಲ. ಆದ್ರೆ ಮಂಡ್ಯದಲ್ಲಿ ಈಗಾಗ್ಲೇ ಜೆಡಿಎಸ್ ಸಂಸದರಿದ್ದಾರೆ ಅನ್ನೋ ಮೂಲಕ ಜೆಡಿಎಸ್ ಗೆ ಟಿಕೆಟ್ ನೀಡುವ ಸಾಧ್ಯತೆಯನ್ನು ಪರೋಕ್ಷವಾಗಿ ಹೇಳಿದ್ದಾರೆ.
ಬಡ್ತಿ ಮೀಸಲಾತಿ ವಿಚಾರದ ಬಗ್ಗೆ ಮಾತನಾಡುತ್ತ, ಈ ಬಗ್ಗೆ ರಾಜ್ಯ ಸರ್ಕಾರದಿಂದ ನ್ಯಾಯ ಒದಗಿಸೋ ಕೆಲಸ ಮಾಡಿದ್ದೇವೆ. ಯಾರಿಗೂ ಅನ್ಯಾಯವಾಗದ ರೀತಿಯಲ್ಲಿ ಪ್ರಯತ್ನ ಮಾಡಿದ್ದೇವೆ. ಅಹಿಂಸಾ, ಎಸ್ಸಿ, ಎಸ್ಟಿ ಪಂಗಡ ಸೇರಿ ಯಾರಿಗೂ ಅನ್ಯಾಯವಾಗದಂತೆ ಕಾನೂನು ಮಂತ್ರಿ ಹಾಗೂ ಸಿಎಂ ಚರ್ಚೆ ನಡೆಸ್ತಾರೆ ಎಂದು ತಿಳಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv