ಕಲಬುರಗಿ: ದಯವಿಟ್ಟು ಅಗ್ನಿಪಥ್ ಯೋಜನೆ ವಾಪಸ್ ಪಡೆಯಿರಿ ಎಂದು ಕೇಂದ್ರ ಸರ್ಕಾರಕ್ಕೆ ಶಾಸಕ ಪ್ರಿಯಾಂಕ್ ಖರ್ಗೆ ಆಗ್ರಹಿಸಿದ್ದಾರೆ.
ಕಲಬುರಗಿಯಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಮೋದಿ ಎಂಟು ವರ್ಷದ ಉತ್ಸವ ಮಾಡುತ್ತಿದ್ದಾರೆ. ಎಲ್ಲಾ ಆಶಯಗಳನ್ನು ಈಡೇರಿಸಿದ್ದೇವೆ ಎಂಬ ಭ್ರಮೆಯಲ್ಲಿದ್ದಾರೆ. ಮೋದಿಯವರ ಮಾಸ್ಟರ್ ಸ್ಟ್ರೋಕ್‍ಗಳನ್ನು ಪ್ರತಿಯೊಬ್ಬರು ಗಂಭೀರವಾಗಿ ಪರಿಗಣಿಸಬೇಕು. ಇದುವರೆಗೆ ಅವರ ಮಾಸ್ಟರ್ ಸ್ಟ್ರೋಕ್‍ಗಳು ಒಂದು ಗುರಿ ಮುಟ್ಟಿಲ್ಲ. ಬಿಜೆಪಿ ಶಾಸಕರು, ಸಂಸದರು ವಕ್ತಾರರ ಸ್ಥಿತಿ ನೋಡಿದರೆ ಅಯ್ಯೋ ಅನಿಸುತ್ತದೆ. ರಾತ್ರಿ ಮೋದಿ ಕನಸ್ಸಲ್ಲಿ ಕಂಡಿದ್ದು ಅಧಿಕಾರಿಗಳು ಹಗಲಲ್ಲಿ ನನಸ್ಸು ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Advertisement
Advertisement
ಅಗ್ನಿಪಥ್ ಎಂಬ ಹೊಸ ಕನಸ್ಸನ್ನು ಮೋದಿ ಕಂಡಿದ್ದಾರೆ. ಕಳೆದೆರಡು ದಿನಗಳಿಂದ ಅಗ್ನಿಫಥ್ ಯೋಜನೆ ಪ್ರಚಾರ ಪಡಿಸಲು ಬಿಜೆಪಿ ಶಾಸಕರು ಸಂಸದರು ಹರಸಾಹಸ ಪಡುತ್ತಿದ್ದಾರೆ. ಇಡೀ ದೇಶವೇ ಅಗ್ನಿಪಥ್‍ದಿಂದ ಹೊತ್ತಿ ಉರಿಯುತ್ತಿದೆ. ಇಡೀ ಯುವ ಸಮೂಹ ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ಬೇಸಿಕ್ ಪ್ರಶ್ನೆಗಳಿಗೆ ಮೋದಿ ಸರ್ಕಾರ ನೇರವಾಗಿ ಉತ್ತರನೇ ಕೊಡಲ್ಲ, ಸುತ್ತಿ ಬಳಸಿ ಉತ್ತರ ಕೊಡುತ್ತಾರೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಮಂತ್ರಿಗಳು ತಮ್ಮ ಮಕ್ಕಳನ್ನು ಅಗ್ನಿಪಥ್ ಯೋಜನೆಗೆ ಕಳಿಸಲಿ ನೋಡೋಣ: ಡಿಕೆಶಿ ಚಾಲೆಂಜ್
Advertisement
Advertisement
ಜೂ 14 ರಂದು ಅಗ್ನಿಪಥ್ ಯೋಜನೆ ಜಾರಿಗೊಳಿಸಿ, ಹೊಸ ಸೈನಿಕರಿಗೆ ನಾಲ್ಕು ವರ್ಷ ಟ್ರೈನಿಂಗ್ ನೀಡುತ್ತಾರಂತೆ. ಇಂಥ ಯೋಜನೆ ತರುವುದಕ್ಕಿಂತ ಮುಂಚೆ ಸ್ವಲ್ಪವು ಕಾಮನ್‍ಸೆನ್ಸ್ ಇದೆಯಾ ಅಂತಾ ಎಕ್ಸ್ ಮಿಲಿಟಿರಿಯವರು ಕೇಳಿದ್ದಾರೆ. ಈಗಾಗಲೇ ನೆರೆಯ ಚೀನಾ ದೇಶ ನಾಲ್ಕೈದು ಕಿಲೋ ಮೀಟರ್ ಜಮೀನು ಅತಿಕ್ರಮಣ ಮಾಡಿಕೊಂಡಿದೆ. ಚೀನಾ ಜಮೀನು ವಶಪಡಿಸಿಕೊಂಡರೂ ಮೋದಿ ಕಣ್ಮುಚ್ಚಿ ಕುಳಿತುಕೊಂಡಿದ್ದಾರೆ. ಆರು ತಿಂಗಳು ತರಬೇತಿ ಕೊಟ್ಟರೆ ದೇಶದ ಗಡಿ ಕಾಯಲು ಹೇಗೆ ಸಾಧ್ಯ? ನೆರೆಯ ಶತ್ರು ರಾಷ್ಟ್ರಗಳ ಜೊತೆ ಸೆಣೆಸಾಡಲು ಸಾಧ್ಯವೇ? ಸೇನೆಗೆ ಸೇರಿ ವೆಪನ್ಸ್‍ಗಳನ್ನು ಬಳಸುವುದು, ಕೆಲಸ ಮಾಡುವ ಗಡಿಯ ಸೂಕ್ಷ್ಮತೆ ಹೇಗೆ ತಿಳಿದುಕೊಳ್ಳಲು ಸಾಧ್ಯ? ಓರ್ವ ಸೈನಿಕನಿಗೆ ನಾಲ್ಕೈದು ವರ್ಷದಲ್ಲಿ ದೇಶಕ್ಕಾಗಿ ಹೋರಾಡುವ ಛಲ ಬರುತ್ತಾ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಸುರಂಗ ಮಾರ್ಗದಲ್ಲಿ ಬಿದ್ದಿದ್ದ ಕಸವನ್ನು ಬರಿಗೈಯಲ್ಲೇ ತೆಗೆದ ಮೋದಿ
ದಯವಿಟ್ಟು ಅಗ್ನಿಪಥ್ ಯೋಜನೆ ವಾಪಸ್ ಪಡೆಯಿರಿ. ಮೋದಿಯವರ ಒಂದೊಂದು ಯೋಜನೆಗಳು ದೇಶದಲ್ಲಿ ಒಂದೊಂದು ವಿವಾದ ಸೃಷ್ಟಿಸುತ್ತಿವೆ. ಡಿಫೆನ್ಸ್ ಎಕ್ಸ್‍ಪರ್ಟ್‍ಗಳ ಜೊತೆ ಚರ್ಚಿಸಿ ಅಗ್ನಿಪಥ್ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಿ. ಯುವಕರ ದಾರಿಗೆ ದೀಪ ಆಗುವುದನ್ನು ಬಿಟ್ಟು, ಮೋದಿಯವರು ಬೆಂಕಿ ಇಡುತ್ತಿದ್ದಾರೆ. ನಾಳೆ ಬೆಂಗಳೂರಿಗೆ ಮೋದಿ ಬರುತ್ತಿದ್ದಾರೆ. ಕಳೆದ ಎಂಟು ವರ್ಷಗಳಿಂದ ಒಂದೇ ಒಂದು ಸುದ್ದಿಗೋಷ್ಠಿಯನ್ನು ಮೋದಿ ಅವರು ಮಾಡಿಲ್ಲ. ಸುದ್ದಿಗೋಷ್ಠಿ ನಡೆಸಲು ಮೋದಿಯವರಿಗೆ ಸಿಎಂ, ಕಟೀಲ್ ಮನವರಿಕೆ ಮಾಡಲಿ. ಧಮ್ ಇದ್ದರೆ ಒಂದು ಸುದ್ದಿಗೋಷ್ಠಿ ಮಾಡಲಿ ಎಂದು ಬಿಜೆಪಿಗೆ ಪ್ರಿಯಾಂಕ್ ಖರ್ಗೆ ಸವಾಲೊಡ್ಡಿದ್ದಾರೆ.